ಬೆಂಗಳೂರು, ಏ. 5: ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸೆ, ವಿಶಾಖ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಮೇಷ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಬೇರೆಯವರು ಕೂಡ ನಿಮ್ಮ ಸಲಹೆಯನ್ನು ಇಂದು ಪಾಲಿಸುತ್ತಾರೆ. ಅದೇ ರೀತಿ ದಾಂಪತ್ಯದಲ್ಲಿ ನೆಮ್ಮದಿ ಸಿಗಲಿದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಆದರೆ ಸಾಮಾಜಿಕ ಚಟುವಟಿಕೆ ಹಾಗೂ ಮಿತ್ರತ್ವದಲ್ಲಿ ಲಾಭ ಉಂಟಾಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಕಷ್ಟದ ದಿನವಾಗಲಿದೆ. ಹಣಕಾಸಿನ ವಿಚಾರ ಹಾಗೂ ವೈಯಕ್ತಿಕ ವಿಚಾರದಲ್ಲಿ ಜಾಗರೂಕತೆ ಅಗತ್ಯ.
ಕಟಕ ರಾಶಿ: ಕಟಕ ರಾಶಿವರಿಗೆ ಕಷ್ಟದ ದಿನವಾಗಲಿದೆ. ತಾಯಿಯ ಆರೋಗ್ಯ, ಕೋರ್ಟ್ ವಿಚಾರ, ಟ್ಯಾಕ್ಸ್ ವ್ಯವಹಾರ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಸಹೋದರ- ಸಹೋದರಿಯರ ಜತೆ ನೆಮ್ಮದಿಯಿಂದ ದಿನ ಕಳೆಯುತ್ತೀರಿ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಆದರೆ ಸಂಸಾರದಲ್ಲಿ ನೀವು ನೆಮ್ಮದಿ ಕಾಣುವಂತಹ ದಿನವಾಗಲಿದೆ. ಹಾಗಾಗಿ ಮನೆಯವರ ಜತೆಗೆ ಹೆಚ್ಚಿನ ಸಮಯವನ್ನು ನೀವು ಕಳೆಯಲಿದ್ದೀರಿ.
ಮನೆಯ ಈ ಐದು ಸ್ಥಳಗಳಲ್ಲಿ ನವಿಲುಗರಿ ಇಟ್ಟರೆ ಐಶ್ವರ್ಯ ಹೆಚ್ಚಾಗೋದು ಗ್ಯಾರಂಟಿ!
ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಹಿಂದಿನ ಎರಡು ಮೂರು ದಿನದ ಮನಸ್ಸಿನ ನೋವೆಲ್ಲ ಇಂದು ಮಾಯವಾಗುತ್ತದೆ. ಮುಂದಿನ ಕೆಲಸಗಳಿಗೆ ಉತ್ತಮ ಮಾರ್ಗದರ್ಶನ ಕೂಡ ಪ್ರಾಪ್ತಿಯಾಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರ ಮಾಡಲು ಹೋಗಬೇಡಿ. ಮಿತ್ರರು ಕೂಡ ಯಾವುದೇ ಸಹಕಾರ ನಿಮಗೆ ನೀಡುವುದಿಲ್ಲ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಧನ ಲಾಭ ಉಂಟಾಗಲಿದ್ದು, ಇಷ್ಟಾರ್ಥ ಸಿದ್ಧಿಯಾಗುತ್ತದೆ. ಮಿತ್ರರಿಂದ ಕೂಡ ಖುಷಿ ಸಿಗುವ ದಿನ ನಿಮ್ಮದಾಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ. ಎಲ್ಲ ಕಡೆಯಲ್ಲೂ ನಿಮಗೆ ಲಾಭದಾಯಕ ದಿನ ಆಗಲಿದೆ.
ಕುಂಭರಾಶಿ: ಈ ರಾಶಿಯವರಿಗೆ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಹಿಂದಿನ ದಿನದಲ್ಲಿ ಇದ್ದಂತಹ ನೋವೆಲ್ಲ ಪರಿಹಾರವಾಗುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಯಾವುದೇ ಮುಖ್ಯ ನಿರ್ಧಾರ ಬೇಡ. ಪ್ರೀತಿ ಪಾತ್ರರಿಂದ ಕೂಡ ಇರಿಸು-ಮುರಿಸು ಆಗಲಿದೆ.