ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಮಾರ್ಚ್,8 2026: ಯಾವ ರಾಶಿಗೆ ಇಂದು ಒಳಿತಾಗಲಿದೆ?

Horoscope Today March 8: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ಪಂಚಮಿ ತಿಥಿ, ಸ್ವಾತಿ ನಕ್ಷತ್ರದ ಮಾರ್ಚ್ 8ನೇ ತಾರೀಖಿನ ಭಾನು ವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ವಿಶ್ವಾವಸು ನಾಮ ಸಂವತ್ಸರದ ಉತ್ತರಾ ಯಣ ಶರದೃತು, ಫಾಲ್ಗುಣ ಮಾಸೆ, ಸ್ವಾತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಮೇಷ ರಾಶಿಯವರಿಗೆ ಅತೀ ಉತ್ತಮವಾದ ದಿನವಾಗಿದೆ.‌ ಮನಸ್ಸಿಗೆ ನೆಮ್ಮದಿ ಇದ್ದು ಮಿತ್ರರಿಂದ ಅತೀ ಹೆಚ್ಚಿನ ನೆಮ್ಮದಿ ನಿಮಗೆ ಸಿಗುತ್ತದೆ. ಧನ ಆಗಮನದ ಸೂಚನೆಗಳು ಕೂಡ ಇರಲಿದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಸಾಮಾಜಿಕ ಕೆಲಸದಲ್ಲಿ ಜಯ ಸಿಗಲಿದ್ದು ಶತ್ರುನಾಶವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಇರಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಕಷ್ಟಕರವಾದ ಗೋಚರ ಇರಲಿದೆ. ಪ್ರೀತಿ, ಪ್ರೇಮ ವಿಚಾರದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ತಾಯಿಯ ಆರೋಗ್ಯ, ಕೋರ್ಟ್, ವ್ಯವಹಾರದಲ್ಲಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಯಾವುದೇ ನಿರ್ಧಾರ ಮಾಡುವಾಗ ಜಾಗೃತರಾಗಿ ಮಾಡಬೇಕಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಗೆ ಇಂದು ಅತೀ ಉತ್ತಮವಾದ ದಿನವಾಗಿದೆ. ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಅತೀ ಉತ್ತಮ ವಾಗಿದೆ. ಬಿಸಿನೆಸ್ ವ್ಯವಹಾರದಲ್ಲೂ ಯಶಸ್ಸು ಕಾಣುತ್ತೀರಿ.

Vastu Tips: ಮನೆಯಲ್ಲಿ ಒಂಟೆಯ ಪ್ರತಿಮೆ ಇಟ್ಟರೆ ಶುಭವೇ? ವಾಸ್ತು-ಫೆಂಗ್ ಶೂಯಿ ಹೇಳೋದೇನು?

ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ.. ಇಂದು ನಿಮ್ಮ ಕುಟುಂಬದ ಜೊತೆ ಉತ್ತಮ ಸಮಯ ಕಳೆಯುತ್ತೀರಿ.

ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಮನಸ್ಸಿನ‌ ಕ್ಲೇಷ ಇಂದು ಮಾಯವಾಗುತ್ತದೆ.

ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ದಿನ ಭವಿಷ್ಯ:



ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕ್ಲಿಷ್ಟಕರವಾದ ದಿನವಾಗಿದೆ. ಬಹಳ ಯೋಚನೆಗಳು ಕಾಡುವ ದಿನವಾಗುತ್ತದೆ.‌ಹಾಗಾಗಿ ವಿನಯತೆ ಇಂದು ವರ್ತಿಸಬೇಕಾಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮಿತ್ರರಿಂದ ಇಂದು ಧನ ಆಗಮನವಾಗುತ್ತದೆ. ಗುಂಪು ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಮನಸ್ಸಿಗೆ ನೆಮ್ಮದಿ ಇದ್ದು ಭಾಗ್ಯೋದಯವಾದ ದಿನವಾಗಿದೆ. ಆದರೆ ಜವಾಬ್ದಾರಿಗಳು ಜಾಸ್ತಿಯಾಗುತ್ತವೆ.

ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಇಂದು ಭಾಗ್ಯೋದಯವಾದ ದಿ‌ನ ವಾಗಿದ್ದು ಅಂದುಕೊಂಡ ಕೆಲಸ ಕಾರ್ಯಗಳು ನಡೆಯಲಿದೆ.

ಮೀನ ರಾಶಿ: ಮೀನ ರಾಶಿಗೆ ಕಷ್ಟಕರವಾದ ದಿನವಾಗಿದೆ. ಯಾರ ಸಹಕಾರಗಳು ನಿಮಗೆ ಸಿಗುವುದಿಲ್ಲ. ಹಾಗಾಗಿ ಎರಡು ಮೂರು ದಿನಗಳ ವರೆಗೆ ಕಾಯುವುದು ಒಳ್ಳೆಯದು.