ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಕೆಲಸದಲ್ಲಿ ಹೊಸ ಅವಕಾಶಗಳು ಸಿಗಬಹುದು. ಆದರೆ ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆಯ ಜೊತೆಗೆ ನಿಯಂತ್ರಣದಲ್ಲಿ ಇಡಬೇಕು.
ವೃಷಭ ರಾಶಿ: ಈ ರಾಶಿಗೆ ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ ಸಿಗುವ ದಿನ. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಸ್ನೇಹಿತರ ಸಹಕಾರ ಕೂಡ ಇಂದು ಪ್ರಾಪ್ತಿಯಾಗುತ್ತದೆ.
ಮಿಥುನ ರಾಶಿ: ಇಂದು ನೀವು ಅಂದುಕೊಂಡ ಪ್ರಮುಖ ಕೆಲಸ ಕಾರ್ಯಗಳು ನಡೆಯಲಿವೆ. ಆದೇ ರೀತಿ ಸ್ನೇಹಿತರಿಂದ ಸಹಾಯ ಕೂಡ ದೊರೆಯಬಹುದು.
ಕಟಕ ರಾಶಿ: ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ಅದರ ಜೊತೆ ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಇಂದು ಕಳೆಯುತ್ತೀರಿ.
Vastu Tips: ವಾಸ್ತು ದೋಷ , ಆರೋಗ್ಯ: ಯಾವ ದಿಕ್ಕು ಯಾವ ಅನಾರೋಗ್ಯ ಸಮಸ್ಯೆಗೆ ಕಾರಣ? ಇಲ್ಲಿದೆ ಮಾಹಿತಿ
ಸಿಂಹ ರಾಶಿ: ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಪ್ರಗತಿಗೆ ಅವಕಾಶಗಳು ಸಿಗುತ್ತವೆ. ಆದರೆ ಹೊಸ ನಿರ್ಧಾರ ಕೈಗೊಳ್ಳುವಾಗ ಹಿರಿಯರ ಸಲಹೆಯನ್ನು ಪಡೆಯುವುದು ಅಗತ್ಯವಾಗಿರುತ್ತದೆ.
ಕನ್ಯಾ ರಾಶಿ: ನಿಮ್ಮ ಕೈಯಿಂದ ಬೇರೆಯವರಿಗೆ ಸಹಾಯವಾಗುವ ದಿನ ನಿಮ್ಮದಾಗುತ್ತದೆ. ಹಣಕಾಸಿನಲ್ಲಿ ಸುಧಾರಣೆ ಕಂಡು ಬರುತ್ತದೆ.
ತುಲಾ ರಾಶಿ: ಇಂದು ನಿಮ್ಮ ಸಂಬಂಧಗಳಲ್ಲಿ ಸಣ್ಣ ಮನಸ್ತಾಪ ಉಂಟಾಗಬಹುದು. ಆದರೆ ಮಾತಿನಲ್ಲಿ ಇಂದು ಸಂಯಮ ಇದ್ದರೆ ಒಳಿತು.
ವೃಶ್ಚಿಕ ರಾಶಿ: ನಿಮ್ಮ ಯೋಜನೆಗಳು ಯಶಸ್ಸಿನತ್ತ ಸಾಗಲಿವೆ. ಆದರೆ ಖರ್ಚು ಜಾಸ್ತಿ. ಅನಗತ್ಯ ಶಾಪಿಂಗ್ ಮಾಡಲು ಹೋಗಬೇಡಿ.
ಧನು ರಾಶಿ: ಇಂದು ನಿಮಗೆ ಪ್ರಯಾಣ ಅಥವಾ ಹೊಸ ಕೆಲಸದ ಅವಕಾಶ ಎದುರಾಗಬಹುದು. ಆರ್ಥಿಕವಾಗಿಯೂ ಅಭಿವೃದ್ಧಿಯನ್ನು ಕಾಣುತ್ತೀರಿ.
ಮಕರ ರಾಶಿ: ಕೆಲಸದಲ್ಲಿ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಆದರೆ ಆರೋಗ್ಯದ ಬಗ್ಗೆ ಯಾವುದೇ ನಿರ್ಲಕ್ಷ್ಯ ಮಾಡಬೇಡಿ
ಕುಂಭ ರಾಶಿ: ಇಂದು ಹೊಸ ಉದ್ಯೋಗದ ಆಫರ್ ಬರಬಹುದು. ಕೆಲಸದ ಸ್ಥಳದಲ್ಲಿ ಮೆಚ್ಚುಗೆ ಸಿಗುವ ಸಾಧ್ಯತೆ ಹಾಗೂ ಕುಟುಂಬದಲ್ಲಿ ನೆಮ್ಮದಿ.
ಮೀನ ರಾಶಿ: ಇಂದು ನಿಮ್ಮ ಮನಸ್ಸಿನ ಗೊಂದಲಗಳು ದೂರವಾಗಬಹುದು. ಆದರೆ ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ.