ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಇಸ್ರೋ ಸಾಧನೆಗೆ ಇನ್ನೊಂದು ಗರಿ

ಎಲೆಕ್ಟ್ರಾನಿಕ್ ಜಗತ್ತಿನಲ್ಲಿ ಚಿಪ್‌ಗೆ ಕಪ್ಪು ಚಿನ್ನ ಎಂದು ಹೇಳಲಾಗುತ್ತದೆ, ಚಿಪ್‌ಗಳು ಡಿಜಿಟಲ್ ವಜ್ರ ಗಳಾಗಿವೆ. ಇದುವರೆಗೆ ಜಗತ್ತು ಈ ವಜ್ರಕ್ಕಾಗಿ ಬಹುತೇಕ ಚೀನಾವನ್ನೇ ಅವಲಂಬಿಸಿದೆ. ದೆಹಲಿಯಲ್ಲಿ ನಡೆದ ಸೆಮಿಕಾನ್ ಇಂಡಿಯಾ ಸಭೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ದೇಶದ ಪ್ರಗತಿಗೆ ಒತ್ತು ನೀಡುವ ನಿರೀಕ್ಷೆ ಇದೆ.

ದೇಶದ ಮೊದಲ ಸಂಪೂರ್ಣ ಸ್ಥಳೀಯ ನಿರ್ಮಿತ 32-ಬಿಟ್ ಮೈಕ್ರೋಪ್ರೊಸೆಸರ್ VIKRAM-32 ಅನ್ನು ಬಿಡುಗಡೆ ಮಾಡುವ ಮೂಲಕ ಭಾರತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಯತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. ಈ ಪ್ರೊಸೆಸರ್ ಹಳೆಯ VIKRAM-1601ರ ಉತ್ತರಾಧಿಕಾರಿ ಯಾಗಿದ್ದು, ಇದು ಒಂದು ದಶಕಕ್ಕೂ ಹೆಚ್ಚು ಕಾಲ ಇಸ್ರೋದ ಉಡಾವಣಾ ವಾಹನಗಳಿಗೆ ಶಕ್ತಿ ತುಂಬಿದ 16-ಬಿಟ್ ಚಿಪ್ ಆಗಿದೆ. ಈ ಹಿಂದೆ 16 ಬಿಟ್‌ನ ಚಿಪ್ ಅಭಿವೃದ್ಧಿಪಡಿಸಿದ್ದ ಇಸ್ರೋ ಇದೀಗ ವಿಕ್ರಮ ಹೆಸರಿನ 32 ಬಿಟ್‌ನ ಚಿಪ್ ಅಭಿವೃದ್ಧಿಪಡಿಸಿದೆ.

ಇದನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಉಡಾವಣೆಗೊಂಡ ಸ್ಪೇಡೆಕ್ಸ್ ನೌಕೆಯಿದ್ದ ಪಿಎಸ್ ಎಲ್‌ವಿ ಸಿ60 ರಾಕೆಟ್ ನಲ್ಲಿ ಯಶಸ್ವಿಯಾಗಿ ಬಳಸಲಾಗಿತ್ತು. ಹಿಂದಿನ VIKRAM-1601 ಇಸ್ರೋಗೆ ಉತ್ತಮ ವಾಗಿ ಸೇವೆ ಸಲ್ಲಿಸಿತ್ತು. ಆದರೆ ಕಾರ್ಯಾಚರಣೆಗಳು ಹೆಚ್ಚು ಸಂಕೀರ್ಣವಾಗುತ್ತಿದ್ದಂತೆ, ಹೆಚ್ಚಿನ ನಿಖರತೆ ಮತ್ತು ಉತ್ತಮ ಕಂಪ್ಯೂಟಿಂಗ್ ಶಕ್ತಿಯ ಅಗತ್ಯವು ಬೆಳೆದಿದೆ.

ಇದನ್ನೂ ಓದಿ: Vishwavani Editorial: ಬರುವುದಕ್ಕೆ ಮುಖವೆಲ್ಲಿದೆ?!

16-ಬಿಟ್‌ನಿಂದ 32-ಬಿಟ್ ಆರ್ಕಿಟೆಕ್ಚರ್‌ಗೆ ಬದಲಾಯಿಸುವುದರಿಂದ ಹೊಸ ಪ್ರೊಸೆಸರ್ ಹೆಚ್ಚಿನ ಪ್ರಮಾಣದ ಡೇಟಾವನ್ನು ನಿರ್ವಹಿಸಲು, ಆಧುನಿಕ ಸಾಫ್ಟ್‌ ವೇರ್ ಅನ್ನು ಬೆಂಬಲಿಸಲು ಮತ್ತು ವೇಗವಾಗಿ, ಹೆಚ್ಚು ನಿಖರವಾದ ಲೆಕ್ಕಾಚಾರಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಇದು ಮುಂದಿನ ಪೀಳಿಗೆಯ ಉಡಾವಣಾ ವಾಹನಗಳು ಮತ್ತು ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಅನುಕೂಲವಾಗಲಿದೆ. ಇದು ಇಸ್ರೋ ಸಾಧನೆಗೆ ಇನ್ನೊಂದು ಗರಿ. 2021ರಿಂದ ಭಾರತದಲ್ಲಿ 10 ಸೆಮಿ ಕಂಡಕ್ಟರ್ ಯೋಜನೆಗಳಿಗೆ 1.5 ಲಕ್ಷ ಕೋಟಿ ರು. ಹೂಡಿಕೆಗೆ ಅನುಮತಿ ದೊರೆತಿದೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಚೀನಾದ ಪ್ರಗತಿಯನ್ನು ನೋಡಿದರೆ ಭಾರತ ಈ ದಿಶೆಯಲ್ಲಿ ಬಹು ದೂರ ಸಾಗಬೇಕಾ ಗಿದೆ.

ಎಲೆಕ್ಟ್ರಾನಿಕ್ ಜಗತ್ತಿನಲ್ಲಿ ಚಿಪ್‌ಗೆ ಕಪ್ಪು ಚಿನ್ನ ಎಂದು ಹೇಳಲಾಗುತ್ತದೆ, ಚಿಪ್‌ಗಳು ಡಿಜಿಟಲ್ ವಜ್ರಗಳಾಗಿವೆ. ಇದುವರೆಗೆ ಜಗತ್ತು ಈ ವಜ್ರಕ್ಕಾಗಿ ಬಹುತೇಕ ಚೀನಾವನ್ನೇ ಅವಲಂಬಿಸಿದೆ. ದೆಹಲಿ ಯಲ್ಲಿ ನಡೆದ ಸೆಮಿಕಾನ್ ಇಂಡಿಯಾ ಸಭೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ದೇಶದ ಪ್ರಗತಿಗೆ ಒತ್ತು ನೀಡುವ ನಿರೀಕ್ಷೆ ಇದೆ.