ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜನನಾಯಕನ ನಿರ್ಗಮನ

ಮೂರು ವರ್ಷ ಹಿಂದೆ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗ ಖಜಾನೆ, ತೆರಿಗೆಗೆ ಸಂಬಂಧಿಸಿದಂತೆ ಭರವಸೆಯ ವಾತಾವರಣ ಇರಲಿಲ್ಲ. ಅಂಥ ಹೊತ್ತಿನಲ್ಲೂ, ತಾವು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಉಚಿತ ಗ್ಯಾರಂಟಿಗಳನ್ನು ಹಿಂಜರಿಕೆಯಿಲ್ಲದೆ ಅನುಷ್ಠಾನಕ್ಕೆ ತಂದು, ಕೊಟ್ಟ ಮಾತಿನಂತೆ ನಡೆದು ಕೊಂಡವರು ಸಿದ್ದರಾಮಯ್ಯ. ಈಗಲೂ ಅವರು ಹೈಕಮಾಂಡ್ ಮುಂದೆ ವಚನಬದ್ಧತೆ ಕಾಪಾಡಿ ಕೊಂಡಿದ್ದಾರೆ.

ಎರಡನೇ ಅವಧಿಗೆ ಆಯ್ಕೆಯಾಗಿ, ಮೂರು ವರ್ಷಗಳ ಕಾಲ ಜನ ಮೆಚ್ಚುವ ಆಡಳಿತ ನೀಡಿದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದವಿಯಿಂದ ನಿರ್ಗಮಿಸಿದ್ದಾರೆ. ಹೈಕಮಾಂಡ್ ಸೂಚನೆಯಂತೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ. ಸಿದ್ದರಾಮಯ್ಯ ಅವರು ಇಲ್ಲದ ಕರ್ನಾಟಕದ ರಾಜಕಾರಣವನ್ನು ಊಹಿಸಿಕೊಳ್ಳುವುದು ಕಷ್ಟ. ಆದರೆ ರಾಜ್ಯದಲ್ಲೇ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಮೂರು ವರ್ಷ ಹಿಂದೆ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗ ಖಜಾನೆ, ತೆರಿಗೆಗೆ ಸಂಬಂಧಿಸಿದಂತೆ ಭರವಸೆಯ ವಾತಾವರಣ ಇರಲಿಲ್ಲ. ಅಂಥ ಹೊತ್ತಿನಲ್ಲೂ, ತಾವು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಉಚಿತ ಗ್ಯಾರಂಟಿಗಳನ್ನು ಹಿಂಜರಿಕೆಯಿಲ್ಲದೆ ಅನುಷ್ಠಾನಕ್ಕೆ ತಂದು, ಕೊಟ್ಟ ಮಾತಿನಂತೆ ನಡೆದುಕೊಂಡವರು ಸಿದ್ದರಾಮಯ್ಯ. ಈಗಲೂ ಅವರು ಹೈಕಮಾಂಡ್ ಮುಂದೆ ವಚನಬದ್ಧತೆ ಕಾಪಾಡಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರನ್ನು ಎರಡನೇ ದೇವರಾಜ ಅರಸು ಎಂದವರಿದ್ದಾರೆ. ಇದರಲ್ಲಿ ಅತಿಶಯೋಕ್ತಿ ಇಲ್ಲ. ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗಗಳ ಹಿತಕ್ಕಾಗಿ ತಮ್ಮ ರಾಜಕಾರಣವನ್ನು ಅವರು ಮುಡಿಪಾಗಿಟ್ಟಿದ್ದರು. ರಾಜೀನಾಮೆ ಸಲ್ಲಿಸುವ ಒಂದು ದಿನ ಮೊದಲೂ ಜಾತಿ ಸಮೀಕ್ಷೆ ವರದಿ ಯನ್ನು ಸ್ವೀಕರಿಸಿದ್ದು ಇದಕ್ಕೆ ಸಾಕ್ಷಿ.

ಹಿಂದಿನ ಅವಧಿಯಲ್ಲೂ, ಈ ಅವಧಿಯಲ್ಲೂ ಹಲವು ಜನಪರ ಯೋಜನೆಗಳು ಹಾಗೂ ತೀರ್ಮಾನ ಗಳ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಪಕ್ಷಕ್ಕೂ ಸಮುದಾಯಕ್ಕೂ ರಾಜ್ಯಕ್ಕೂ ಬೇಕಾಗಿ, ಅವರು ನಿಜಾರ್ಥದಲ್ಲಿ ಜನ ನಾಯಕರಾಗಿದ್ದರು. ಕಾಂಗ್ರೆಸ್ ಸದ್ಯ ದೃಢವಾಗಿ ಆಡಳಿತ ನಡೆಸುತ್ತಿರುವ, ಹೈಕಮಾಂಡ್ ಭರವಸೆ ಇಡಬಹುದಾದ ರಾಜ್ಯ ಎಂದರೆ ಕರ್ನಾಟಕ. ಇಲ್ಲಿ

ಪಕ್ಷ ಶಿಥಿಲವಾಗದಂತೆ ನೋಡಿಕೊಂಡು ಆಡಳಿತವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವ ಸಾಹಸವನ್ನು ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸೇರಿಕೊಂಡು ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬಂದಂಥ ಸ್ಥಿತಿ ಉಂಟಾಗದಂತೆ ಇಬ್ಬರೂ ಕಾಪಾಡಿ ಕೊಂಡಿದ್ದಾರೆ.

ಶತಮಾನದ ಇತಿಹಾಸ ಉಳ್ಳ ಕಾಂಗ್ರೆಸ್‌ಗೆ ಮುಂದಿನ ಚುನಾವಣೆಯಲ್ಲೂ ನಾಯಕತ್ವ ನೀಡಬಲ್ಲ, ಪ್ರತಿಪಕ್ಷ ಬಿಜೆಪಿಗೆ ದೃಢವಾದ ವಿರೋಧ ಒಡ್ಡಬಲ್ಲ ಚರಿಷ್ಮಾವನ್ನು ಸಿದ್ದರಾಮಯ್ಯ ಉಳಿಸಿಕೊಂಡಿ ದ್ದಾರೆ. ಸಿದ್ದರಾಮಯ್ಯ ಅವರು ಯಾವಾಗಲೂ ಹೇಳುವಂತೆ ಕೊನೆಯ ಪತ್ರಿಕಾ ಗೋಷ್ಠಿಯಲ್ಲೂ ಬುದ್ಧ, ಬಸವಣ್ಣ, ಗಾಂಧಿ ಇವರ ತತ್ವಸಿದ್ಧಾಂತಗಳ ಮೇಲಿನ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿ ದ್ದಾರೆ.

ಇಂಥ ಸೈದ್ಧಾಂತಿಕ ಬದ್ಧತೆಯಿದ್ದೂ ಜನಪರ, ಜನಪ್ರೀತಿಯ ರಾಜಕಾರಣ ಮಾಡುವುದ ಕಷ್ಟ. ಈ ಕಷ್ಟದ ಹಾದಿಯನ್ನು ತುಳಿದ ಕೆಲವೇ ವರ್ಚಸ್ವೀ ನಾಯಕರಲ್ಲಿ ಸಿದ್ದರಾಮಯ್ಯ ಒಬ್ಬರು. ಮುಂಬರಲಿರುವ ಮುಖ್ಯಮಂತ್ರಿಗಳು ಇವರ ಮೇಲ್ಪಂಕ್ತಿ ಅನುಸರಿಸಬಹುದು ಎಂದು ಆಶಿಸೋಣ.