ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಹದ್ದಿನ ಕಣ್ಣಿಗೆ ಧೂಳು ಬಿದ್ದಿತ್ತೇ?

‘ವೆಸ್ಟ್ ಆರ್ಟಿಕಾ’ ಹೆಸರಿನಲ್ಲಿ ನಕಲಿ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದ ವಂಚಕನೊಬ್ಬ, ಪ್ರಧಾನ ಮಂತ್ರಿ, ರಾಷ್ಟ್ರಪತಿ ಮತ್ತಿತರ ಗಣ್ಯರ ಜತೆ ನಿಂತಿರುವಂತೆ ಛಾಯಾಚಿತ್ರಗಳನ್ನು ಸೃಷ್ಟಿಸಿ ಜನರನ್ನು ನಂಬಿಸುತ್ತಿದ್ದ, ನಕಲಿ ಕಂಪನಿಗಳ ಹೆಸರಿನಲ್ಲಿ ಅಕ್ರಮ ಹಣವರ್ಗಾವಣೆ (ಹವಾಲಾ) ದಂಧೆ ನಡೆಸುತ್ತಿದ್ದ ಮತ್ತು ವಿವಿಧ ದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಯುವಜನರಿಗೆ ವಂಚಿಸುತ್ತಿದ್ದ ಎಂಬುದು ಲಭ್ಯ ಮಾಹಿತಿ.

ಹದ್ದಿನ ಕಣ್ಣಿಗೆ ಧೂಳು ಬಿದ್ದಿತ್ತೇ?

Ashok Nayak Ashok Nayak Jul 25, 2025 10:09 AM

ಮೋರಿಸ್ ಸ್ಯಾಮ್ಯುಯೆಲ್ ಎಂಬ ಭೂಪ ಗುಜರಾತಿನ ಗಾಂಧಿಗರದಲ್ಲಿ 2019ರಿಂದ ನಕಲಿ ನ್ಯಾಯಾಲಯವೊಂದನ್ನು ಹುಟ್ಟು ಹಾಕಿ ಬರೋಬ್ಬರಿ 5 ವರ್ಷಗಳವರೆಗೆ ಅದನ್ನು ನಡೆಸಿಕೊಂಡು ಬಂದಿದ್ದರ ಸುದ್ದಿಯನ್ನು ನೀವು ಸಾಕಷ್ಟು ದಿನದ ಹಿಂದೆ ಓದಿರಬಹುದು. ಈ ನಕಲಿ ನ್ಯಾಯಾ ಲಯದ ಕೊಠಡಿಯಲ್ಲಿ ಆತ ನ್ಯಾಯಾಧೀಶನ ಕುರ್ಚಿಯಲ್ಲಿ ಕೂತು, ಜಮೀನು ವ್ಯಾಜ್ಯಗಳಿಗೆ ಸಂಬಂಧಿಸಿ ತನ್ನದೇ ಆದ ರೀತಿಯಲ್ಲಿ ತೀರ್ಪು ನೀಡುತ್ತಿದ್ದ.

ಈತನ ಸಹವರ್ತಿಗಳು ನ್ಯಾಯಾಲಯದ ಸಿಬ್ಬಂದಿಗಳಂತೆ ನಟಿಸುತ್ತಿದ್ದರು ಎಂಬ ಸಂಗತಿ ಬಯಲಾದಾಗ ಪೊಲೀಸರೇ ದಂಗಾಗಿದ್ದುಂಟು. ಈಗ ಇಂಥ ಮತ್ತೊಬ್ಬ ಆಸಾಮಿಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Vishwavani Editorial: ಸೈಬರ್ ವಂಚಕರನ್ನು ಶಿಕ್ಷಿಸಿ

‘ವೆಸ್ಟ್ ಆರ್ಟಿಕಾ’ ಹೆಸರಿನಲ್ಲಿ ನಕಲಿ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದ ವಂಚಕನೊಬ್ಬ, ಪ್ರಧಾನ ಮಂತ್ರಿ, ರಾಷ್ಟ್ರಪತಿ ಮತ್ತಿತರ ಗಣ್ಯರ ಜತೆ ನಿಂತಿರುವಂತೆ ಛಾಯಾಚಿತ್ರಗಳನ್ನು ಸೃಷ್ಟಿಸಿ ಜನರನ್ನು ನಂಬಿಸುತ್ತಿದ್ದ, ನಕಲಿ ಕಂಪನಿಗಳ ಹೆಸರಿನಲ್ಲಿ ಅಕ್ರಮ ಹಣವರ್ಗಾವಣೆ (ಹವಾಲಾ) ದಂಧೆ ನಡೆಸುತ್ತಿದ್ದ ಮತ್ತು ವಿವಿಧ ದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಯುವಜನರಿಗೆ ವಂಚಿಸುತ್ತಿದ್ದ ಎಂಬುದು ಲಭ್ಯ ಮಾಹಿತಿ.

ಈತನನ್ನು ಕೊನೆಗೂ ಬಂಧಿಸಿರುವುದು ಶ್ಲಾಘನೀಯ ಬೆಳವಣಿಗೆಯೇ. ಆದರೆ ‘ರಾಯಭಾರ ಕಚೇರಿ’ ಸಂಬಂಧಿತ ನಾಮಫಲಕವನ್ನು ನೋಡಿದ ಮೇಲೂ, ಶುರುವಿನಲ್ಲಿ ಯಾವ ಇಲಾಖಾಧಿಕಾರಿಗೂ/ ಪೊಲೀಸರಿಗೂ ಅನುಮಾನವೇ ಬರಲಿಲ್ಲವೇ? ಎಂಬುದು ಯಕ್ಷಪ್ರಶ್ನೆ. ಪಟ್ಟಣ-ನಗರಗಳು ಮಾತ್ರವಲ್ಲದೆ ಊರೂರು, ಕೇರಿ ಕೇರಿಗಳಲ್ಲಿ ತಥಾಕಥಿತ ಕ್ಲಿನಿಕ್ ತೆರೆದು, ನಕಲಿ ವೈದ್ಯ ಪ್ರಮಾಣಪತ್ರ ವನ್ನು ತೂಗು ಹಾಕಿ ‘ದಂಧೆ’ ಮಾಡುತ್ತಿರುವ ಕಳ್ಳವೈದ್ಯರು ಪತ್ತೆಯಾದರೆ ಒಂದು ಕಾಲಕ್ಕೆ ಅದೇ ಸುದ್ದಿಯಾಗುತ್ತಿತ್ತು.

ಆದರೆ ಈಗ ಕೆಲ ಫಟಿಂಗರು ನಕಲಿ ನ್ಯಾಯಾಲಯ, ನಕಲಿ ರಾಯಭಾರ ಕಚೇರಿಗಳನ್ನೂ ತೆರೆಯ ಬಲ್ಲವರಾಗಿದ್ದಾರೆ ಎಂದರೆ, ನಮ್ಮ ವ್ಯವಸ್ಥೆಯ ‘ಹದ್ದಿನ ಕಣ್ಣುಗಳು’ ಅದಿನ್ಯಾವ ಮಟ್ಟಿಗೆ ಮಂಜಾಗಿರಬೇಕು?!