Vishwavani Editorial: ಸೈಬರ್ ವಂಚಕರನ್ನು ಶಿಕ್ಷಿಸಿ
ಸೈಬರ್ ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗುವವರು ತೀರಾ ಕಡಿಮೆ. ಹೀಗಾಗಿ ದೇಶದ ನಾಗರಿಕರು ಕಷ್ಟಪಟ್ಟು ದುಡಿದ ಹಣವನ್ನುಯಾವುದೋ ದೇಶದ ಮೂಲೆಯಲ್ಲಿ ಕುಳಿತವರು ಲಪಟಾಯಿಸು ತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಆನ್ ಲೈನ್ ವಂಚನೆಯನ್ನು ರಾಷ್ಟ್ರದ್ರೋಹ ಎಂದು ಪರಿಗಣಿಸಿ ಗಂಭೀರ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಈ ಪಿಡುಗನ್ನು ದೂರ ಮಾಡಲು ಸಾಧ್ಯವಿಲ್ಲ.


ಮನಿ ಲಾಂಡರಿಂಗ್ ಆರೋಪದ ಹೆಸರಲ್ಲಿ ಕರೆ ಮಾಡಿದ ಸೈಬರ್ ವಂಚಕರು ಡಿಜಿಟಲ್ ಬಂಧನ ಕ್ಕೊಳಪಡಿಸಿ ದೈಹಿಕ ತಪಾಸಣೆ ನೆಪದಲ್ಲಿ ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ ಕಿರುಕುಳ ನೀಡಿರುವ ಹೇಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಮ್ಮ ನೆಲದ ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಎನ್ನುವ ಪದವೇ ಇಲ್ಲ ಎಂದು ಪೊಲೀಸರು ಹಲವು ಬಾರಿ ಸ್ಪಷ್ಟನೆ ನೀಡಿದರೂ ವಿದ್ಯಾ ವಂತ ವರ್ಗದವರೇ ಈ ಸಂಚಿಗೆ ಪದೇಪದೆ ಬಲಿಯಾಗುತ್ತಿದ್ದಾರೆ. ವಿಶೇಷ ಎಂದರೆ ಥಾಯ್ಲೆಂಡ್ ನಿಂದ ಸ್ನೇಹಿತೆಯ ಮನೆಗೆ ಬಂದ ಮಹಿಳೆಗೆ ಈ ಕರೆ ಬಂದಿದೆ. ಆರಂಭದಲ್ಲೇ ವಂಚಕರು 58 ಸಾವಿರ ರು.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಹಿಂದೆಯೂ ವಿದೇಶದಿಂದ ಬಂದ ಹಲವರಿಗೆ ಈ ರೀತಿಯ ಕರೆ ಬಂದಿದೆ. ಅಂದರೆ ಗ್ರಾಹಕರ ವಿಮಾನ ಯಾನದ ಮಾಹಿತಿ ವಂಚಕರಿಗೆ ಸೋರಿಕೆಯಾಗುತ್ತಿರುವುದು ಸ್ಪಷ್ಟ. ಈ ಬಗ್ಗೆ ನಮ್ಮ ತನಿಖಾ ಸಂಸ್ಥೆಗಳು ಕಣ್ಣಿಡಬೇಕಾಗಿದೆ.
ಇದನ್ನೂ ಓದಿ: Vishwavani Editorial: ಈ ಆತ್ಮಹತ್ಯೆಗಳಿಗೆ ಕಾರಣವೇನು?
ಲೋಕಸಭೆಯಲ್ಲಿ ಸರಕಾರವು ಬಿಡುಗಡೆ ಮಾಡಿದ ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ದ ಅಂಕಿ ಅಂಶಗಳು ಆತಂಕ ಸೃಷ್ಟಿಸುತ್ತಿವೆ. ಜುಲೈ 22ರಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ೨೦೨೪-೨೫ರ ಆರ್ಥಿಕ ವರ್ಷದಲ್ಲಿ ದೆಶಾದ್ಯಂತ ಒಟ್ಟು ೨೨,೮೪೫.೭೩ ಕೋಟಿ ರೂ. ಸೈಬರ್ ವಂಚನೆ ಮಾಡಿರುವುದು ಬಯಲಾಗಿದೆ. ಇದು ಕಳೆದ ಸಾಲಿಗಿಂತ ಸುಮಾರು ೨೦೬ ಪ್ರತಿಶತ ಹೆಚ್ಚು.
ಅಂದರೆ ೨೦೨೩- ೨೦೨೩ರಲ್ಲಿ, ಈ ನಷ್ಟವು ೭,೪೬೫.೧೮ ಕೋಟಿ ರೂ.ಗಳಷ್ಟಿತ್ತು. ಸೈಬರ್ ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗುವವರು ತೀರಾ ಕಡಿಮೆ. ಹೀಗಾಗಿ ದೇಶದ ನಾಗರಿಕರು ಕಷ್ಟಪಟ್ಟು ದುಡಿದ ಹಣವನ್ನುಯಾವುದೋ ದೇಶದ ಮೂಲೆಯಲ್ಲಿ ಕುಳಿತವರು ಲಪಟಾಯಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಆನ್ ಲೈನ್ ವಂಚನೆಯನ್ನು ರಾಷ್ಟ್ರದ್ರೋಹ ಎಂದು ಪರಿಗಣಿಸಿ ಗಂಭೀರ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಈ ಪಿಡುಗನ್ನು ದೂರ ಮಾಡಲು ಸಾಧ್ಯವಿಲ್ಲ.