ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಸನಾತನ ಎಂದರೆ ಸದರವೇ?

ತಮಿಳುನಾಡಿನ ಉದ್ದಗಲಕ್ಕೂ ಹಾಸುಹೊಕ್ಕಾಗಿರುವ ದೇವಾಲಯಗಳಿಂದ ಹರಿದು ಬರುವ ಆದಾಯ ವನ್ನು ಮಡಿಲಿಗೆ ತುಂಬಿಸಿಕೊಳ್ಳುವಲ್ಲಿ ಯಾವುದೇ ಲಜ್ಜೆಯಿಲ್ಲದ ಅವರ ಸರಕಾರಕ್ಕೆ, ಆ ದೇವಾಲಯ ಗಳಿಗೆ ಆಧಾರವಾಗಿರುವ ಸನಾತನ ಧರ್ಮದ ಮೇಲೆ ಕೆಂಗಣ್ಣೇಕೋ ಎಂಬುದು ಅರ್ಥವಾಗದ ಪ್ರಶ್ನೆ. ಅವರ ಈ ನಡೆಯು ಅನುಕೂಲಸಿಂಧು ರಾಜಕಾರಣದ ಮತ್ತೊಂದು ಮಗ್ಗುಲೂ ಆಗಿರಬೇಕು, ಇರಲಿ ಬಿಡಿ.

Vishwavani Editorial: ಸನಾತನ ಎಂದರೆ ಸದರವೇ?

Ashok Nayak Ashok Nayak Aug 18, 2025 6:48 AM

ಕೆಲವು ವರ್ಷಗಳಿಂದ ಈಚೆಗಿನ ಒಂದಷ್ಟು ಬೆಳವಣಿಗೆಗಳನ್ನು ಗಮನಿಸಿದರೆ, ಸನಾತನ ಧರ್ಮದ ಅಥವಾ ಅದನ್ನು ಆಧರಿಸಿರುವ ಸ್ಥಾಪಿತ ಅಸ್ತಿತ್ವಗಳ ವಿಷಯದಲ್ಲಿ ‘ಟೇಕನ್ ಫಾರ್ ಗ್ರಾಂಟೆಡ್’ ಅಥವಾ ‘ಲಘುವಾಗಿ ತೆಗೆದುಕೊಳ್ಳುವಿಕೆ’ ಎಂಬ ಪರಿಪಾಠವನ್ನು ಕೆಲವರು ಸಲೀಸಾಗಿ ಜಾರಿಗೆ ತಂದಂತಿದೆ.

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಸುಪುತ್ರರೂ, ಅಲ್ಲಿನ ಉಪ ಮುಖ್ಯಮಂತ್ರಿ ಯೂ ಆಗಿರುವ ಉದಯನಿಧಿ ಸ್ಟಾಲಿನ್ ಅವರು ‘ಸನಾತನ ಧರ್ಮದ ಮೂಲೋತ್ಪಾಟನೆ ಯಾಗಬೇಕು’ ಎಂಬರ್ಥದ ಹೇಳಿಕೆಯನ್ನು ಕಳೆದ ವರ್ಷ ನೀಡಿದ್ದು ಇದಕ್ಕೊಂದು ಉದಾಹರಣೆ.

ತಮಿಳುನಾಡಿನ ಉದ್ದಗಲಕ್ಕೂ ಹಾಸುಹೊಕ್ಕಾಗಿರುವ ದೇವಾಲಯಗಳಿಂದ ಹರಿದು ಬರುವ ಆದಾಯವನ್ನು ಮಡಿಲಿಗೆ ತುಂಬಿಸಿಕೊಳ್ಳುವಲ್ಲಿ ಯಾವುದೇ ಲಜ್ಜೆಯಿಲ್ಲದ ಅವರ ಸರಕಾರಕ್ಕೆ, ಆ ದೇವಾಲಯಗಳಿಗೆ ಆಧಾರವಾಗಿರುವ ಸನಾತನ ಧರ್ಮದ ಮೇಲೆ ಕೆಂಗಣ್ಣೇಕೋ ಎಂಬುದು ಅರ್ಥ ವಾಗದ ಪ್ರಶ್ನೆ. ಅವರ ಈ ನಡೆಯು ಅನುಕೂಲಸಿಂಧು ರಾಜಕಾರಣದ ಮತ್ತೊಂದು ಮಗ್ಗುಲೂ ಆಗಿರಬೇಕು, ಇರಲಿ ಬಿಡಿ.

ಇದನ್ನೂ ಓದಿ: BAPS Hindu Temple: ಒಂದೇ ವರ್ಷದಲ್ಲಿ ನಾಲ್ಕು ಬಾರಿ ಹಿಂದೂ ದೇವಾಲಯ ಧ್ವಂಸ; ಅಮೆರಿಕದಲ್ಲಿ ಭಾರತೀಯರ ವಿರುದ್ಧ ಷಡ್ಯಂತ್ರ

ಈ ಸಾಲಿಗೆ ಸೇರುವ ಮತ್ತೊಂದು ಬೆಳವಣಿಗೆಯೆಂದರೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪಚಾರದ ಕುರಿತಾಗಿ ಪುಂಖಾನುಪುಂಖವಾಗಿ ಹೊಮ್ಮಿದ ಆರೋಪಗಳು-ಅಪಪ್ರಚಾರ ಗಳು. ಇಲ್ಲಿ ಒಂದು ವಿಷಯವಂತೂ ಸ್ಪಷ್ಟ- ಹೀಗೆ ಆರೋಪಿಸುವವರು ಹೇಳುವಂತೆ ಸರಣಿ ಅನುಮಾನಾಸ್ಪದ ಸಾವುಗಳು ನಡೆದಿರುವುದೇ ಹೌದಾದಲ್ಲಿ, ಅದಕ್ಕೆ ಕಾರಣರಾದವರಿಗೆ ಈ ನೆಲದ ಕಾನೂನಿನಂತೆ ಶಿಕ್ಷೆಯಾಗಲೇಬೇಕು.

ಆದರೆ, ಈ ಚರ್ಚಾವಿಷಯದ ಒಂದು ‘ಎಳೆ’ಯನ್ನಷ್ಟೇ ಇಟ್ಟುಕೊಂಡು ಧರ್ಮಸ್ಥಳದ ಸ್ಥಾಪಿತ ವ್ಯವಸ್ಥೆಯ ಮೇಲೆ ಗೂಬೆ ಕೂರಿಸುವ ಹುನ್ನಾರವನ್ನು ಬಿಲ್‌ಕುಲ್ ಸಹಿಸಲಾಗದು. ಅಲ್ಲಿನ ನೇತ್ರಾ ವತಿ ನದಿಯ ತಟದಲ್ಲಿ ತಾನು ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿಕೊಂಡ ಅನಾಮಿಕ ನ ಮಾತನ್ನು ಕೇಳಿಕೊಂಡು ಅಗೆದಾಗ ಸಿಕ್ಕಿರುವುದು ಬರೀ ಮಣ್ಣು, ಅಷ್ಟೇ!

ಹಾಗಾದರೆ, ಈ ಒಂದಿಡೀ ಕಸರತ್ತನ್ನು ಹಾಗೂ ಸನಾತನ ಧರ್ಮದ ಅಸ್ತಿತ್ವಗಳನ್ನು ಕೆಲವರು ಸದರವಾಗಿ ತೆಗೆದುಕೊಂಡಿದ್ದಾರೆ ಎಂದಾಯಿತಲ್ಲವೇ? ಇಂಥ ಚಿತ್ತಸ್ಥಿತಿಗಳಿಗೆ ಇನ್ನಾದರೂ ಲಗಾಮು ಹಾಕಬೇಕಿದೆ.