ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಸೂಕ್ತ ಮಾಹಿತಿ ದೊರೆಯಲಿ

ಒಂದು ಕಾಲದಲ್ಲಿ ಸಂಗೀತ ಪ್ರೇಮಿಗಳು ರೇಡಿಯೋಗೆ ಹೊರತಾಗಿ ನೆಚ್ಚಿದ್ದು ‘ಗ್ರಾಮಾಫೋನ್’ ಪ್ಲೇಟು ಗಳನ್ನು. ತರುವಾಯದಲ್ಲಿ ಧ್ವನಿಮುದ್ರಣ ಕ್ಷೇತ್ರದಲ್ಲಿ ‘ಕ್ಯಾಸೆಟ್ ಕ್ರಾಂತಿ’ಯಾದಾಗ, ಗ್ರಾಮಾ ಫೋನ್ ಪ್ಲೇಟುಗಳು ಹಂತಹಂತವಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಕೆಲ ವರ್ಷಗಳ ವರೆಗೆ ‘ಕ್ಯಾಸೆಟ್’ ದರ್ಬಾರು ನಡೆಯಿತಾದರೂ, ನಂತರ ದಾಪುಗಾಲಿಟ್ಟು ಬಂದ ‘ಕಾಂಪ್ಯಾಕ್ಟ್ ಡಿಸ್ಕ್’ (ಸಿಡಿ) ಮತ್ತು ‘ಡಿಜಿಟಲ್ ವರ್ಸಟೈಲ್ ಡಿಸ್ಕ್’ (ಡಿವಿಡಿ) ಅಬ್ಬರದಿಂದಾಗಿ ಕ್ಯಾಸೆಟ್ ಮೂಲೆಗುಂಪಾಯಿತು.

Vishwavani Editorial: ಸೂಕ್ತ ಮಾಹಿತಿ ದೊರೆಯಲಿ

Ashok Nayak Ashok Nayak Aug 12, 2025 6:41 AM

ಒಂದು ಕಾಲದಲ್ಲಿ ಸಂಗೀತ ಪ್ರೇಮಿಗಳು ರೇಡಿಯೋಗೆ ಹೊರತಾಗಿ ನೆಚ್ಚಿದ್ದು ‘ಗ್ರಾಮಾಫೋನ್’ ಪ್ಲೇಟುಗಳನ್ನು. ತರುವಾಯದಲ್ಲಿ ಧ್ವನಿಮುದ್ರಣ ಕ್ಷೇತ್ರದಲ್ಲಿ ‘ಕ್ಯಾಸೆಟ್ ಕ್ರಾಂತಿ’ಯಾದಾಗ, ಗ್ರಾಮಾ ಫೋನ್ ಪ್ಲೇಟುಗಳು ಹಂತಹಂತವಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಕೆಲ ವರ್ಷಗಳ ವರೆಗೆ ‘ಕ್ಯಾಸೆಟ್’ ದರ್ಬಾರು ನಡೆಯಿತಾದರೂ, ನಂತರ ದಾಪುಗಾಲಿಟ್ಟು ಬಂದ ‘ಕಾಂಪ್ಯಾಕ್ಟ್ ಡಿಸ್ಕ್’ (ಸಿಡಿ) ಮತ್ತು ‘ಡಿಜಿಟಲ್ ವರ್ಸಟೈಲ್ ಡಿಸ್ಕ್’ (ಡಿವಿಡಿ) ಅಬ್ಬರದಿಂದಾಗಿ ಕ್ಯಾಸೆಟ್ ಮೂಲೆಗುಂಪಾ ಯಿತು. ನಂತರ ‘ಎಂಪಿ 3’ ಸ್ವರೂಪ ಆಗಮಿಸಿತು. ಇಷ್ಟೂ ಘಟ್ಟಗಳಲ್ಲಿ ಸಂಗೀತ ಮತ್ತು ದೃಶ್ಯಗಳ ಉತ್ತಮ ಗುಣಮಟ್ಟದ ಪ್ರಸ್ತುತಿಗೆ ಸಂಬಂಧಿಸಿದಂತೆ ಹಾಗೂ ‘ಬಳಕೆದಾರ-ಸ್ನೇಹಿ’ ಆಯಾಮದಲ್ಲಿ ಗಣನೀಯ ಸುಧಾರಣೆಯಾಗಿದ್ದನ್ನು ತಳ್ಳಿ ಹಾಕುವಂತಿಲ್ಲ.

ಜತೆಗೆ, ಪರ್ಯಾಯವಾಗಿ ಹೊಸ ಸ್ವರೂಪವು ಹೀಗೆ ಬಂದಾಗಲೆಲ್ಲಾ, ಹಳತು ಎನಿಸಿಕೊಂಡಿದ್ದಕ್ಕೆ ಅಥವಾ ಅದನ್ನು ನೆಚ್ಚಿಕೊಂಡಿದ್ದವರಿಗೆ ‘ಅಸ್ತಿತ್ವದ ಭಯ’ ಕಾಡಿದ್ದಿದೆ. ಆದರೆ ಬಳಕೆದಾರರಾಗಲೀ, ಉತ್ಪಾದಕರಾಗಲೀ ಹೊಸತನ್ನು ಸ್ವೀಕರಿಸಿ ಅಳವಡಿಸಿಕೊಂಡಿದ್ದೂ ಆಗಿದೆ.

ಇದನ್ನೂ ಓದಿ: Vishwavani Editorial: ಧರೆ ಹೊತ್ತಿ ಉರಿದರೆ ನಿಲ್ಲಲಾಗದು..

ಇವೆಲ್ಲವೂ, ‘ಬದಲಾವಣೆ ಜಗದ ನಿಯಮ’ ಎಂಬ ಗ್ರಹಿಕೆಗೆ ಇಂಬುಕೊಡುವಂಥ ಬೆಳವಣಿಗೆಗಳು. ಪ್ರಸ್ತುತ, ‘ಕೃತಕ ಬುದ್ಧಿಮತ್ತೆ’ (ಎಐ) ತಂತ್ರಜ್ಞಾನ ಕೂಡ ಸಮಾಜದ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಇಂಥದೇ ತಲ್ಲಣವನ್ನು ಹುಟ್ಟುಹಾಕಿದೆ. ‘ಎಐ’ನ ಆಗಮನದಿಂದಾಗಿ ಉದ್ಯೋಗಾವಕಾಶಗಳಲ್ಲಿ ಭಾರಿ ಕಡಿತವಾಗಿಬಿಡುತ್ತದೆ, ನಿರುದ್ಯೋಗ ಸಮಸ್ಯೆ ಹೆಚ್ಚಿಬಿಡುತ್ತದೆ ಎಂಬುದು ಇಂಥ ತಲ್ಲಣಗಳಲ್ಲೊಂದು.

ಆದರೆ, ‘ಎಐ ತಂತ್ರಜ್ಞಾನದ ಆಗಮನದಿಂದಾಗಿ ಸಾವಿರಾರು ಹೊಸ ಉದ್ಯೋಗಾವಕಾಶಗಳೂ ತೆರೆದುಕೊಳ್ಳುತ್ತವೆ’ ಎಂದು ಭರವಸೆ ನೀಡುವವರೂ ಇದ್ದಾರೆ. ಆದರೆ, ಈ ಕುರಿತಾದ ಸ್ಪಷ್ಟ ಮಾಹಿತಿ ಯನ್ನು ನಾಡಿನ ಯುವಸಮುದಾಯದೊಂದಿಗೆ ಸಮರ್ಥವಾಗಿ ಹಂಚಿಕೊಳ್ಳುವ ಕೆಲಸ ಆಗುತ್ತಿಲ್ಲ.

ಹೀಗಾಗಿ, ಈಗಾಗಲೇ ನಿರುದ್ಯೋಗ ಸಮಸ್ಯೆಯ ಹೊಡೆತಕ್ಕೆ ಸಿಲುಕಿ ಸಾಕಷ್ಟು ನೊಂದಿರುವ ಯುವಜನರು, ಇನ್ನಷ್ಟು ಭಯಗ್ರಸ್ತರಾಗಿದ್ದಾರೆ ಎಂಬ ಗ್ರಹಿಕೆಯನ್ನು ತಳ್ಳಿಹಾಕಲಾಗದು. ಆದ ಕಾರಣ, ‘ಎಐ’ ತಂತ್ರಜ್ಞಾನದ ಸಾಧಕ-ಬಾಧಕಗಳ ಕುರಿತಾಗಿ ಸಮರ್ಪಕ ಮಾಹಿತಿಯನ್ನು ಒದಗಿಸುವ ಕೆಲಸ ಆಗಬೇಕಿದೆ.