ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಇನ್ನೂ ಆಗಿಲ್ಲ ಜ್ಞಾನೋದಯ

ಭಾರತದ ಷೇರು ಮಾರುಕಟ್ಟೆಯಲ್ಲಿ ಮಹಾಕುಸಿತವಾಗಿ 30 ಲಕ್ಷ ಕೋಟಿ ರುಪಾಯಿ ನಷ್ಟ ವಾಗಿರುವ ಸುದ್ದಿ ಬಂದಿದೆ. ಸಮಸ್ಯೆಯು ಒಂದೊಂದೇ ಸ್ತರಕ್ಕೆ ನಿಧಾನಕ್ಕೆ ಮೈಚಾಚಿಕೊಳ್ಳುತ್ತಿದೆ ಎಂಬುದಕ್ಕೆ ಅಡುಗೆ ಅನಿಲದ ಪೂರೈಕೆಯಲ್ಲಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿರು ವುದು, ತತ್ಪರಿಣಾಮವಾಗಿ ಹೋಟೆಲ್‌ಗಳು ಅನಿವಾರ್ಯವಾಗಿ ಕೆಲ ಕಾಲ ಬಾಗಿಲು ಮುಚ್ಚ ಬೇಕಾಗುವ ಪರಿಸ್ಥಿತಿ ತಲೆದೋರಿರುವುದು ಸಾಕ್ಷಿಯಾಗಿವೆ.

ಜಗತ್ತಿನ ಯಾವುದಾದರೂ ಎರಡು ದೇಶಗಳ ಅಥವಾ ಬಣಗಳ ನಡುವೆ ಹೊತ್ತಿಕೊಳ್ಳುವ ಸಮರಜ್ವಾಲೆಯು, ಅವೆರಡಕ್ಕೆ ಸೇರಿದ ಜೀವನಷ್ಟ ಮತ್ತು ಸ್ವತ್ತುನಷ್ಟಗಳಿಗೆ ಪ್ರತ್ಯಕ್ಷ ಕಾರಣ ಆಗುವುದರ ಜತೆಗೆ, ಸಮರದಲ್ಲಿ ಭಾಗಿಯಾಗದ ಮಿಕ್ಕ ದೇಶಗಳಿಗೂ ಪರೋಕ್ಷವಾಗಿ ಬಿಸಿ ಮುಟ್ಟಿಸುತ್ತದೆ ಎಂಬುದಕ್ಕೆ ಇತಿಹಾಸವು ಸಾಕಷ್ಟು ಪುರಾವೆಗಳನ್ನು ಒದಗಿಸುತ್ತದೆ.

ಮೊದಲನೆಯ ಮತ್ತು ಎರಡನೆಯ ಮಹಾಯುದ್ಧಗಳು ಮಾತ್ರವಲ್ಲದೆ, ದೇಶ-ದೇಶಗಳ ನಡುವೆ ಕಾಲಾನುಕಾಲಕ್ಕೆ ನಡೆಯುವ ಸಣ್ಣ ಪುಟ್ಟ ಹಣಾಹಣಿಗಳು ಇಂಥ ಸಾಕಷ್ಟು ನಷ್ಟಗಳನ್ನು ಹೊತ್ತು ತಂದಿರುವುದು ಖರೆ. ಪ್ರಸ್ತುತ, ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧವೂ ಇದಕ್ಕೆ ಹೊರತಾಗಿಲ್ಲ. ಈ ಎರಡೂ ಬಣಗಳು ವಿವಿಧ ತೆರನಾದ ನಷ್ಟಗಳನ್ನು ಈಗಾಗಲೇ ಅನುಭವಿಸಿ ಆಗಿದೆ, ಅದು ಮುಂದುವರಿಯುತ್ತಲೂ ಇದೆ.

ಇದನ್ನೂ ಓದಿ: Vishwavani Editorial: ಬೇಗುದಿಯಲ್ಲಿ ಮೈ ಕಾಯಿಸಿಕೊಳ್ಳುವಿಕೆ!

ಸಾಲದೆಂಬಂತೆ, ನಷ್ಟದ ಬಿಸಿಯು ಮಿಕ್ಕ ದೇಶಗಳಿಗೂ ನಿಧಾನವಾಗಿ ತಟ್ಟಲು ಶುರುವಾಗ ತೊಡಗಿದೆ. ಭಾರತದ ಷೇರು ಮಾರುಕಟ್ಟೆಯಲ್ಲಿ ಮಹಾಕುಸಿತವಾಗಿ 30 ಲಕ್ಷ ಕೋಟಿ ರುಪಾಯಿ ನಷ್ಟವಾಗಿರುವ ಸುದ್ದಿ ಬಂದಿದೆ. ಸಮಸ್ಯೆಯು ಒಂದೊಂದೇ ಸ್ತರಕ್ಕೆ ನಿಧಾನಕ್ಕೆ ಮೈಚಾಚಿಕೊಳ್ಳುತ್ತಿದೆ ಎಂಬುದಕ್ಕೆ ಅಡುಗೆ ಅನಿಲದ ಪೂರೈಕೆಯಲ್ಲಿ ಮತ್ತಷ್ಟು ವಿಳಂಬ ವಾಗುವ ಸಾಧ್ಯತೆ ಹೆಚ್ಚಿರುವುದು, ತತ್ಪರಿಣಾಮವಾಗಿ ಹೋಟೆಲ್‌ಗಳು ಅನಿವಾರ್ಯವಾಗಿ ಕೆಲ ಕಾಲ ಬಾಗಿಲು ಮುಚ್ಚಬೇಕಾಗುವ ಪರಿಸ್ಥಿತಿ ತಲೆದೋರಿರುವುದು ಸಾಕ್ಷಿಯಾಗಿವೆ.

ಆದರೆ ಸಮರೋನ್ಮಾದಿಗಳಿಗೆ ಇಂಥ ಸೂಕ್ಷ್ಮಗಳು ಇನ್ನೂ ಅರ್ಥವಾಗದಿರುವುದು ವಿಷಾದ ನೀಯ. ಎಲ್ಲ ಸಮಸ್ಯೆಗಳ ಪರಿಹಾರಕ್ಕೂ ಯುದ್ಧವೇ ಮಾರ್ಗೋಪಾಯ ಎಂಬ ಚಿತ್ತಸ್ಥಿತಿ ಯನ್ನು ಕೆಲವರು ತೊಡೆಯುವವರೆಗೂ ಇಂಥ ಪರಿಸ್ಥಿತಿ ಮುಂದುವರಿಯುತ್ತೋ ಏನೋ? ಒಟ್ಟಿನಲ್ಲಿ, ಆದಷ್ಟು ಬೇಗ ಎಲ್ಲವೂ ತಣ್ಣಗಾಗಿ, ವಾತಾವರಣ ಸಾಮಾನ್ಯ ಸ್ಥಿತಿಗೆ ಮರಳಲಿ ಎಂದಷ್ಟೇ ಆಶಿಸುವುದಷ್ಟೇ ನಮ್ಮ ಕೆಲಸ...