ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಉಳುಮೆಗೆ ಇಳಿದ ಸರಕಾರ

ಉಳುಮೆಗೆ ಎತ್ತುಗಳಿಲ್ಲದ, ನೇಗಿಲೂ ಇಲ್ಲದ ಸಣ್ಣ ರೈತರಿದ್ದಾರೆ. ಟ್ರ್ಯಾಕ್ಟರ್ ಹೊಂದಿರುವ ರೈತರು ತಮ್ಮ ಭೂಮಿ ಉಳುಮೆ ನಂತರ ಬೇರೆ ರೈತರ ಭೂಮಿ ಉಳುಮೆ ಮಾಡಿದರೆ ಬಾಡಿಗೆ ಮೊತ್ತವನ್ನು ಸರಕಾರ ಭರಿಸಲಿದೆ. ಟ್ರ್ಯಾಕ್ಟರ್‌ಗಳನ್ನು ರೈತರು ಬಾಡಿಗೆಗೆ ಪಡೆಯಬಹುದು ಅಥವಾ ಸರಕಾರವೇ 500 ರಿಂದ ಸಾವಿರ ಟ್ರ್ಯಾಕ್ಟರ್‌ಗಳನ್ನು ಇದಕ್ಕಾಗಿ ಖರೀದಿಸಿ ಬಿಡಲಿದೆ.

ಶತದಿನೋತ್ಸವದ ಸಂಭ್ರಮದಲ್ಲಿರುವ ರಾಜ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸರಕಾರ, ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿದೆ. ಮುಖ್ಯವಾಗಿ ರೈತರಿಗೆ ಸಂತಸವಾಗುವಂಥ ಸುದ್ದಿ. ಮೂರು ಎಕರೆ ಹಾಗೂ ಅದಕ್ಕಿಂತ ಕಡಿಮೆ ಪ್ರಮಾಣದ ಭೂಮಿ ಹೊಂದಿರುವ ರಾಜ್ಯದ ಸುಮಾರು 59 ಲಕ್ಷ ಸಣ್ಣ ರೈತರ ಜಮೀನನ್ನು ಸರಕಾರವೇ ಸಂಪೂರ್ಣ ತನ್ನ ವೆಚ್ಚದಲ್ಲಿ ಉಳಮೆ ಮಾಡಿಸ ಲಿದೆ. ಈ ಉದ್ದೇಶಕ್ಕೆ 152 ಕೋಟಿ ನೀಡಲಾಗುತ್ತಿದೆ.

ಉಳುಮೆಗೆ ಎತ್ತುಗಳಿಲ್ಲದ, ನೇಗಿಲೂ ಇಲ್ಲದ ಸಣ್ಣ ರೈತರಿದ್ದಾರೆ. ಟ್ರ್ಯಾಕ್ಟರ್ ಹೊಂದಿರುವ ರೈತರು ತಮ್ಮ ಭೂಮಿ ಉಳುಮೆ ನಂತರ ಬೇರೆ ರೈತರ ಭೂಮಿ ಉಳುಮೆ ಮಾಡಿದರೆ ಬಾಡಿಗೆ ಮೊತ್ತವನ್ನು ಸರಕಾರ ಭರಿಸಲಿದೆ. ಟ್ರ್ಯಾಕ್ಟರ್‌ಗಳನ್ನು ರೈತರು ಬಾಡಿಗೆಗೆ ಪಡೆಯಬಹುದು ಅಥವಾ ಸರಕಾರವೇ 500 ರಿಂದ ಸಾವಿರ ಟ್ರ್ಯಾಕ್ಟರ್‌ಗಳನ್ನು ಇದಕ್ಕಾಗಿ ಖರೀದಿಸಿ ಬಿಡಲಿದೆ.

ಇದನ್ನೂ ಓದಿ; CM DK Shivakumar: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ಇದು ಭತ್ತ, ರಾಗಿ, ಜೋಳ ಮೊದಲಾದ ಆಹಾರ ಬೆಳೆಗಳಿಗೆ ಪೂರಕವಾಗಬಹುದು ಎಂದು ನಿರೀಕ್ಷೆ ಇದೆ. ಕಳೆದ ಒಂದೆರಡು ವರ್ಷಗಳಲ್ಲಿ ಮುಖ್ಯವಾಗಿ ಭತ್ತದ ಬೆಳೆಗೆ ಹೊಡೆತ ಬಿದ್ದಿದೆ. ಶಿವಮೊಗ್ಗ ಜಿಲ್ಲೆ ಈ ಮೊದಲು ಭತ್ತದ ಕಣಜ ಎನಿಸಿಕೊಂಡಿತ್ತು. ಈಗ ಆ ಬಿರುದು ಇಲ್ಲ. ದಕ್ಷಿಣ ಕನ್ನಡದಲ್ಲಿ ಭತ್ತದ ಕೃಷಿ ಮಾಯವಾಗಿದೆ. ಜಿಲ್ಲೆ ಪೂರ್ಣ ಅಡಿಕೆಮಯವಾಗಿದೆ.

ದೊಡ್ಡ ಕೃಷಿಕರು ಹಾಗೂ ತೋಟಗಾರರಂತೆ ರಾಜ್ಯದ ಸಣ್ಣ ರೈತರೂ ತಮ್ಮ ಜಮೀನುಗಳಲ್ಲಿ ಅಡಿಕೆ ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದಾರೆ. ವರ್ಷದ ಉಳುಮೆಯ ಕಾಯಕವೇ ಇವರಿಗೆ ಸಂಕಷ್ಟವಾಗಿದೆ. ಇತರ ಕೂಲಿ ಕೆಲಸಗಳಿಗೂ ಜನ ಇಲ್ಲ ಅಥವಾ ಸಣ್ಣ ರೈತರಿಗೆ ಅದು ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಯೋಜನೆ ಶ್ಯಾಘ್ಯ. ಕೇರಳದಲ್ಲಿ ಈಗಾಗಲೇ ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಭತ್ತದ ಗದ್ದೆಗಳ ರೈತರು ಒಮ್ಮೆ ವಾಣಿಜ್ಯ ಬೆಳೆಗೆ ಹೋಗಿಬಿಟ್ಟರೆ ನಂತರ ಹಿಂದಿರುಗಲು ಸಾಧ್ಯವಿಲ್ಲ. ಇದು ಆಹಾರ ಬೆಳೆಯ ವಿಪುಲತೆ, ವೈವಿಧ್ಯತೆಗೂ ಮಾರಕ. ಭವಿಷ್ಯದಲ್ಲಿ ಆಹಾರದ ಕೊರತೆಯಾಗಬಹುದು.

ಸರಕಾರದ ಇನ್ನೊಂದು ಉತ್ತಮ ಯೋಜನೆ ಅಂದರೆ ರೈತರು ತೇಗದ ಮರಗಳನ್ನು ಬೆಳೆದು ಪ್ರಯೋಜನ ಪಡೆಯುವ ತೇಗದ ಸಿರಿ. ರಸ್ತೆಗಳ ಪಕ್ಕದ ಜಮೀನುಗಳ ರೈತರು ತೇಗದ ಮರ ಬೆಳೆಸಲು ಅರಣ್ಯ ಇಲಾಖೆ ಸಸಿಗಳನ್ನು ನೀಡಲಿದ್ದು, ಮರ ದೊಡ್ಡದಾಗಿ ಬೆಳೆದು ಕಟಾವು ಮಾಡಿದಾಗ ಬರುವ ಆದಾಯದ ಮೊತ್ತದಲ್ಲಿ ಶೇ.70 ರೈತರಿಗೆ ನೀಡುವುದು ಅವರ ಆದಾಯಕ್ಕೆ ಪೂರಕವಾಗುವಂತಿದೆ.