ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಸ್ರೋದಿಂದ ಸಂತಸದ ಸುದ್ದಿ

ಇದು ಭೂಸ್ಥಿರ ಕಕ್ಷೆಯಿಂದ ಕಾರ್ಯನಿರ್ವಹಿಸುವ ಭಾರತದ ಮೊದಲ ಪ್ರತ್ಯೇಕ ಇಮೇಜಿಂಗ್ ಉಪಗ್ರಹ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಶ್ರೇಷ್ಠತೆಗೆ ಹಿಡಿದ ಕನ್ನಡಿ ಯೂ ಹೌದು. ಭೂಮಿಯಿಂದ ಸುಮಾರು 36000 ಕಿಲೋಮೀಟರ್ ಎತ್ತರದ ಕಕ್ಷೆಯಲ್ಲಿ ಸುತ್ತುವ ಇದು ಬೆಳೆಗಳ ಸ್ಥಿತಿಗತಿ, ವಿಕೋಪ ನಿರ್ವಹಣೆ, ಚಂಡಮಾರುತ, ಮೇಘಸ್ಫೋಟ ಹಾಗೂ ಗುಡುಗು-ಸಿಡಿಲು ಸಹಿತ ಮಳೆಯ ಮುನ್ಸೂಚನೆಯನ್ನು ಕ್ಷಣಕ್ಷಣ ನೀಡಲಿದೆ.

ಇಸ್ರೋ ಸಂತಸದ ಸುದ್ದಿ ನೀಡಿದೆ. ‘ನಾಟಿ ಬಾಯ್’ ಎಂದೇ ಕರೆಯಲ್ಪಡುವ ಜಿಎಸ್‌ಎಲ್‌ವಿ-ಎಫ್17 ಉಡಾವಣಾ ನೌಕೆಯ ಮೂಲಕ ಇಒಎಸ್-05 ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಬಹಳ ದಿನಗಳ ನಂತರ ಇಸ್ರೋ ಸಾಧಿಸಿರುವ ಮಹತ್ವದ ಮೈಲುಗಲ್ಲು, ಗೆಲುವು ಇದು. ಇಒಎಸ್-05 ಉಪಗ್ರಹವು ಈ ನೌಕೆ ಹೊತ್ತೊಯ್ದ ಅತ್ಯಂತ ಭಾರವಾದ ಉಪಗ್ರಹ.

ಇದು ಭೂಸ್ಥಿರ ಕಕ್ಷೆಯಿಂದ ಕಾರ್ಯ ನಿರ್ವಹಿಸುವ ಭಾರತದ ಮೊದಲ ಪ್ರತ್ಯೇಕ ಇಮೇಜಿಂಗ್ ಉಪಗ್ರಹ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಶ್ರೇಷ್ಠತೆಗೆ ಹಿಡಿದ ಕನ್ನಡಿಯೂ ಹೌದು. ಭೂಮಿಯಿಂದ ಸುಮಾರು 36000 ಕಿಲೋಮೀಟರ್ ಎತ್ತರದ ಕಕ್ಷೆ ಯಲ್ಲಿ ಸುತ್ತುವ ಇದು ಬೆಳೆಗಳ ಸ್ಥಿತಿಗತಿ, ವಿಕೋಪ ನಿರ್ವಹಣೆ, ಚಂಡಮಾರುತ, ಮೇಘಸ್ಫೋಟ ಹಾಗೂ ಗುಡುಗು-ಸಿಡಿಲು ಸಹಿತ ಮಳೆಯ ಮುನ್ಸೂಚನೆಯನ್ನು ಕ್ಷಣಕ್ಷಣ ನೀಡಲಿದೆ.

ಇದನ್ನೂ ಓದಿ: Vishwavani Editorial: ಕೆಪಿಎಸ್‌ಸಿಯ ಕಾಯಿಲೆ

ಭಾರತದ ವಿಶಾಲ ಭೂಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿರಂತರ ವೀಕ್ಷಣೆಗೆ ಹೊಸ ಆಯಾಮ ನೀಡಲಿದೆ. ಕೃಷಿ ಹಾಗೂ ಭೂಮಾಪನ ಡೇಟಾದ ಸಂಗ್ರಹ ಇದರಿಂದ ಹಲವು ಪಟ್ಟು ಹೆಚ್ಚಲಿದೆ. ಇದು ಬೇಹುಗಾರಿಕೆ ಉಪಗ್ರಹ ಅಲ್ಲವಾದರೂ, ಆ ಸಾಮರ್ಥ್ಯವೂ ಇದಕ್ಕಿದೆ. ಇದು ಒಂಬತ್ತು ವರ್ಷಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದನ್ನು ಕೊಂಡೊಯ್ದ ಜಿಎಸ್‌ಎಲ್‌ವಿ-ಎ-17 ರಾಕೆಟ್ ಕೂಡ ಅತ್ಯಾಧುನಿಕ. ಕ್ರಯೋಜೆನಿಕ್ ಎಂಜಿನ್‌ನ ಇದರ ಸಾಮರ್ಥ್ಯ ವನ್ನು ಪ್ರತಿವರ್ಷ ಹೆಚ್ಚಿಸಲಾಗುತ್ತಿದೆ.

2021ರಲ್ಲಿ ಜಿಎಸ್‌ಎಲ್‌ವಿ-ಎಫ್10 ಪ್ರಯೋಗ ವಿಫಲವಾಗಿತ್ತು. ಆ ಸೋಲಿನಿಂದ ಪಾಠ ಕಲಿತ ಇಸ್ರೋ ಅದನ್ನು ಇನ್ನಷ್ಟು ಸಮರ್ಥವಾಗಿ ಅದನ್ನು ರೂಪಿಸಿ, ಎಲ್ಲರೂ ಬೆರಗಾಗುವಂತೆ ಕಕ್ಷೆ ಯವರೆಗೆ ಕೊಂಡೊಯ್ದಿದೆ. ಗಗನಯಾನ ಸೇರಿದಂತೆ ಇನ್ನಷ್ಟು ಯೋಜನೆಗಳು ಇದೀಗ ಇಸ್ರೋ ಮುಂದಿವೆ.

ಮುಂಬರುವ ದಿನಗಳಲ್ಲಿ ತಂತ್ರಜ್ಞಾನ, ವಿಜ್ಞಾನ, ಇಂಟರ್ ನೆಟ್, ಕೃಷಿ, ಯುದ್ಧಗಳು ಎಲ್ಲವೂ ಬಾಹ್ಯಾಕಾಶದಿಂದಲೇ ನಿಯಂತ್ರಿಸಲ್ಪಡಲಿವೆ. ಹೀಗಾಗಿ ಅಲ್ಲಿ ನಮ್ಮ ಉಪಸ್ಥಿತಿ, ಪಾರಮ್ಯ ಅತ್ಯಗತ್ಯ. ಇಸ್ರೋ ಆ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದೆ. ಕಳೆದ ಒಂದೆರಡು ತಿಂಗಳ ಹಿಂದೆ ಇಸ್ರೋ ಕೆಟ್ಟ ಕಾರಣಕ್ಕಾಗಿ ಸುದ್ದಿಯಾಗಿತ್ತು.

ಸುಮಾರು 100 ಮಂದಿ ವಿಜ್ಞಾನಿಗಳು ಇಸ್ರೋ ತೊರೆದು, ಹೆಚ್ಚಿನ ಸಂಬಳ ಹಾಗೂ ಸೌಲಭ್ಯಗಳಿಗಾಗಿ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಗಳನ್ನು ಸೇರಿಕೊಂಡಿದ್ದರು. ಇಸ್ರೋದಲ್ಲಿ ದುಡಿಯಲು ಪ್ರತಿಭೆಯ ಜೊತೆಗೆ ದೇಶಪ್ರೇಮ, ದೇಶದ ಜನತೆಗಾಗಿ ದುಡಿಯುವ ಬದ್ಧತೆಯೂ ಅಗತ್ಯವಾಗಿದೆ