ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಹೆತ್ತಪ್ಪನೇ ಹಂತಕನಾದರೆ...

ಸಂಯಮ, ಸಮಾಧಾನ, ಪರಾನುಭೂತಿ ಶಕ್ತಿ, ಸಹಾನುಭೂತಿ, ಅನುಕಂಪ, ದಯೆ ಮುಂತಾದ ಗುಣ-ವೈಶಿಷ್ಟ್ಯಗಳು ವ್ಯಕ್ತಿಯೊಬ್ಬನಲ್ಲಿ ಮಾಯವಾದರೆ, ಏನೆಲ್ಲಾ ಅತಿರೇಕಗಳು ಸಂಭವಿಸಬಹುದು ಮತ್ತು ಕ್ಷಣಾರ್ಧದ ಕೋಪವು ಕುರುಳಿನ ಕುಡಿಯನ್ನೂ ತರಿದು ಹಾಕುವುದಕ್ಕೆ ಕುಮ್ಮಕ್ಕು ನೀಡಬಲ್ಲದು ಎಂಬು ದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಮಗಳು ದಲಿತ ಹುಡುಗನನ್ನು ಮದುವೆಯಾದಳು ಎಂಬ ಕಾರಣಕ್ಕೆ ಕ್ರೋಧಗೊಂಡ ತಂದೆಯು, ಆಕೆ ಗರ್ಭಿಣಿಯಾಗಿದ್ದರೂ ಅದನ್ನು ಲೆಕ್ಕಿಸದೆ ಕೋಪದ ಕೈಗೆ ಬುದ್ದಿಯನ್ನು ಕೊಟ್ಟು ಆಕೆಯನ್ನು ಕೊಂದು, ಇತರ ಮೂವರ ಮೇಲೆ ಹಲ್ಲೆ ನಡೆಸಿದ ಭೀಕರ ಘಟನೆಯು ಹುಬ್ಬಳ್ಳಿ ತಾಲೂಕಿನ ಗ್ರಾಮ ವೊಂದರಿಂದ ವರದಿಯಾಗಿದೆ.

ಇದು ನಿಜಕ್ಕೂ ನಾಗರಿಕ ಸಮಾಜವು ತಲೆ ತಗ್ಗಿಸುವ ಸಂಗತಿಯೇ ಸರಿ. ಮಗಳ ಮದುವೆಯ ಬಗ್ಗೆ ಅಸಮಾಧಾನವಿದ್ದಿದ್ದರೆ, ಅದನ್ನು ತಣಿಸಿಕೊಳ್ಳಲು ಹತ್ತಾರು ಮಾರ್ಗಗಳಿದ್ದವು. ಆದರೆ, ಹೆತ್ತ ತಂದೆ ಎನಿಸಿಕೊಂಡಾತ ಅವುಗಳ ಗೊಡವೆಗೇ ಹೋಗದೆ ಅತಿರೇಕದ ಹೆಜ್ಜೆಯನ್ನು ಇಟ್ಟಿದ್ದು ಜೀರ್ಣಿಸಿ ಕೊಳ್ಳಲಾಗದ ಬೆಳವಣಿಗೆ.

ಇದನ್ನೂ ಓದಿ: Vishwavani Editorial: ಹಗ್ಗಜಗ್ಗಾಟ ಇನ್ನಾದರೂ ನಿಲ್ಲಲಿ

ಸಂಯಮ, ಸಮಾಧಾನ, ಪರಾನುಭೂತಿ ಶಕ್ತಿ, ಸಹಾನುಭೂತಿ, ಅನುಕಂಪ, ದಯೆ ಮುಂತಾದ ಗುಣ-ವೈಶಿಷ್ಟ್ಯಗಳು ವ್ಯಕ್ತಿಯೊಬ್ಬನಲ್ಲಿ ಮಾಯವಾದರೆ, ಏನೆಲ್ಲಾ ಅತಿರೇಕಗಳು ಸಂಭವಿಸ ಬಹುದು ಮತ್ತು ಕ್ಷಣಾರ್ಧದ ಕೋಪವು ಕುರುಳಿನ ಕುಡಿಯನ್ನೂ ತರಿದುಹಾಕುವುದಕ್ಕೆ ಕುಮ್ಮಕ್ಕು ನೀಡಬಲ್ಲದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಈ ದುರ್ಘಟನೆ ಜರುಗಲು ‘ಕೋಪ’ ಒಂದೇ ಕಾರಣವಲ್ಲ; ಅದರ ಹಿಂದೆ ಕೆಲಸ ಮಾಡಿರುವುದು ‘ಜಾತಿ ತಾರತಮ್ಯ’ ಎಂಬ ಪೆಡಂಭೂತ. ರಾಜಾರಾಂ ಮೋಹನರಾಯ್, ಭಕ್ತಿಭಂಡಾರಿ ಬಸವಣ್ಣ, ಮಹಾತ್ಮ ಗಾಂಧಿಯವರು ಸೇರಿದಂತೆ ನೂರಾರು ಸಮಾಜ ಸುಧಾರಕರು ಇನ್ನಿಲ್ಲದಂತೆ ಹೆಣಗಿ ದರೂ ಈ ಜಾತಿ ತಾರತಮ್ಯ ಎಂಬ ಪಿಡುಗನ್ನು ನಿವಾರಿಸಲಾಗಲಿಲ್ಲ.

ಕಡೇಪಕ್ಷ, ಇರುವಷ್ಟು ದಿನವಾದರೂ ಸಹಿಷ್ಣುತೆಯನ್ನಾದರೂ ಕಾಯ್ದುಕೊಳ್ಳಬೇಕಲ್ಲವೇ? ಮನೆಯ ಹಿರಿಯಾತನೇ ಆ ಸಹಿಷ್ಣುತೆಗೆ ಕೊಳ್ಳಿಯಿಟ್ಟರೆ ಚಿಕ್ಕವರು ಇನ್ನಾರಲ್ಲಿ ಅಹವಾಲು ತೋಡಿಕೊಳ್ಳ ಬೇಕು?