ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಕ್ವಾರಿಗಳನ್ನು ಪರಿಶೀಲಿಸಿ

ಸುತ್ತ-ಮುತ್ತಲಿನ ಎಲ್ವಾ ಕ್ವಾರಿಗಳನ್ನ ತಾತ್ಕಾಲಿಕವಾಗಿ ಬಂದ್ ಮಾಡಲು ಸೂಚನೆ ನೀಡಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕ್ವಾರಿಯಲ್ಲಿ ಸಾಕಷ್ಟು ಸುರಕ್ಷತೆ ಕ್ರಮಗಳನ್ನು ಮಾಲಿಕರು ತೆಗೆದು ಕೊಂಡಿಲ್ಲ. ಭೂವಿಜ್ಞಾನಿ ಹೇಳಿಕೆ ಪ್ರಕಾರ, ಅವರು ಸೈಟ್ ವಿಸಿಟ್ ಮಾಡಿದಾಗ ಸುರಕ್ಷತೆ ಬಗ್ಗೆ ಸೂಚನೆ ನೀಡಿದ್ದರೂ ಮಾಲೀಕರು ಅಳವಡಿಸಿಕೊಂಡಿಲ್ಲ. ಇದಲ್ಲದೆ ಬಫರ್ ಜೋನ್‌ ನಲ್ಲಿಯೂ ಕಾಮಗಾರಿ ಮಾಡಲಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾದಾಪಟ್ಟಣ ಬಳಿ ಘೋರ ಕಲ್ಲು ಕ್ವಾರಿ ದುರಂತ ಸಂಭವಿಸಿದೆ. ದುರಂತದಲ್ಲಿ ಬೃಹತ್ ಬಂಡೆ ಕುಸಿದು ಬಿಹಾರ ಮೂಲದ 7 ಮಂದಿ ಕಾರ್ಮಿಕರು ಸಾವಿ ಗೀಡಾಗಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ದುರಂತದಲ್ಲಿ ಸಾವನ್ನಪ್ಪಿದ 7 ಮಂದಿ ಕಾರ್ಮಿಕರ ಕುಟುಂಬಕ್ಕೆ ಕ್ವಾರಿ ಮಾಲೀಕರಿಂದಲೇ 10 ಲಕ್ಷ ಹಾಗೂ ಗಾಯಾಳುಗಳಿಗೆ 5 ಲಕ್ಷ ಪರಿಹಾರ ಕೊಡಿಸುವುದಾಗಿ ಗಣಿ ಮತ್ತು ಭೂ ವಿeನ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಸುತ್ತ-ಮುತ್ತಲಿನ ಎಲ್ವಾ ಕ್ವಾರಿಗಳನ್ನ ತಾತ್ಕಾಲಿಕವಾಗಿ ಬಂದ್ ಮಾಡಲು ಸೂಚನೆ ನೀಡಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕ್ವಾರಿಯಲ್ಲಿ ಸಾಕಷ್ಟು ಸುರಕ್ಷತೆ ಕ್ರಮಗಳನ್ನು ಮಾಲಿಕರು ತೆಗೆದುಕೊಂಡಿಲ್ಲ. ಭೂವಿಜ್ಞಾನಿ ಹೇಳಿಕೆ ಪ್ರಕಾರ, ಅವರು ಸೈಟ್ ವಿಸಿಟ್ ಮಾಡಿದಾಗ ಸುರಕ್ಷತೆ ಬಗ್ಗೆ ಸೂಚನೆ ನೀಡಿದ್ದರೂ ಮಾಲೀಕರು ಅಳವಡಿಸಿಕೊಂಡಿಲ್ಲ. ಇದಲ್ಲದೆ ಬಫರ್ ಜೋನ್‌ ನಲ್ಲಿಯೂ ಕಾಮಗಾರಿ ಮಾಡಲಾಗಿದೆ.

ಇದನ್ನೂ ಓದಿ: Vishwavani Editorial: ದಿಲ್ಲಿ ಮಾದರಿ ಗಮನಿಸಿ

ಕ್ವಾರಿಯಲ್ಲಿ ಗಣಿಗಾರಿಕೆಗೆ ಅಧಿಕೃತ ಪರವಾನಗಿ ಇದೆಯೇ ಎಂಬುದು ಪರಿಶೀಲಿಸಬೇಕಿದೆ. ಸ್ಫೋಟ ವಿಲ್ಲದೆ ಬಂಡೆ ಕುಸಿಯಲು ಸಾಧ್ಯವಿಲ್ಲ. ಸೋಟಕಗಳ ನಿಗದಿತ ಪ್ರಮಾಣದ ಬಳಕೆಗೆ ಮಾತ್ರ ಅನುಮತಿ ಇರುತ್ತದೆ. ಹೀಗಾಗಿ, ಎಲ್ಲ ರೀತಿಯಿಂದಲೂ ಈ ಪ್ರಕರಣದ ವಿಚಾರಣೆ ನಡೆಯಬೇಕಿದೆ. ಪರಿಹಾರ ಕೊಡಿಸಿದಲ್ಲಿಗೆ ಹೊಣೆ ಮುಗಿಯುವುದಿಲ್ಲ.

ಮೃತಪಟ್ಟವರ ಜೀವಗಳು ಮತ್ತೆ ಕುಟುಂಬದವರಿಗೆ ಸಿಗುವುದಿಲ್ಲ. ರಾಜ್ಯದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಕೊಪ್ಪಳ, ಹಾಸನ ವ್ಯಾಪ್ತಿಗಳಲ್ಲಿ ಸಾಕಷ್ಟು ನಡೆಯುತ್ತಿದೆ. ಒಂದು ಕ್ವಾರಿಗೆ ಅನುಮತಿ ಇದ್ದರೆ, ಒಂಬತ್ತಕ್ಕೆ ಇರುವುದಿಲ್ಲ. ಈ ಗಣಿಗಳಲ್ಲಿ ಬಿಹಾರ, ಮಧ್ಯ ಪ್ರದೇಶ, ಉತ್ತರ ಪ್ರದೇಶಗಳಿಂದ ಬಂದ ಕಾರ್ಮಿಕರು ಜೀವ ಅಡವಿಟ್ಟು ದುಡಿಯುತ್ತಾರೆ.

ಕಾನೂನಿನ ಕೈಗಳ ಅಡಿಯಲ್ಲಿ ನುಸುಳುವ ಕಲೆ ಈ ಕ್ವಾರಿಗಳ ಮಾಲಿಕರಿಗೆ ಕರಗತವಾಗಿದೆ. ಇಲ್ಲಿ ಕೆಲಸ ಮಾಡುವವರ ಆರೋಗ್ಯ, ದುಡಿಮೆಯ ಸಮಯ, ಆಹಾರದ ಲಭ್ಯತೆ ಇತರ ಸವಲತ್ತುಗಳು ಎಲ್ಲವೂ ಮಾಲಿಕರ ಮರ್ಜಿಯಲ್ಲಿವೆ. ಅನಾರೋಗ್ಯಕರ ಜೀವನಶೈಲಿಯಿಂದ ಇವರು ಬಳಲುವುದೇ ಹೆಚ್ಚು. ಕತ್ತರಿಸಿದ ಕಲ್ಲನ್ನು ರಸ್ತೆಗಳಲ್ಲಿ ಇತರರಿಗೆ ತೊಂದರೆಯಾಗದಂತೆ ಮುಚ್ಚಿ ಸಾಗಿಸಬೇಕು; ಆದರೆ ಅದೂ ಕಾಣಬರುತ್ತಿಲ್ಲ. ಕ್ವಾರಿ ಲಾರಿಗಳು ರಸ್ತೆಯಲ್ಲಿವೆ ಎಂದರೆ ಸಂಚರಿಸಲು ಭಯಪಡು ವಂತಾಗುತ್ತದೆ.

ಇವೆಲ್ಲದರಿಂದ ನುಣುಚಿಕೊಳ್ಳಲು ಕ್ವಾರಿ ಮಾಲಿಕರು, ಅವರಿಗೆ ಅವಕಾಶ ನೀಡಿದ ಅಧಿಕಾರಿಗಳು ಪಳಗಿರುತ್ತಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆಯೇ, ಮುಂದೆ ಇಂಥ ದುರಂತಗಳು ಸಂಭವಿಸದಂತೆ ಕಟ್ಟೆಚ್ಚರದ ಕಾನೂನು ಅನುಷ್ಠಾನ ಆಗಬೇಕಿದೆ.