ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಲ್ಲಿ ನ್ಯಾಯ, ಇಲ್ಲಿ ಅನ್ಯಾಯ

ಮುಂದಿನ 15 ದಿನ ನಿತ್ಯ 2000 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ಶಿಫಾರಸು ಮಾಡಲಾ ಗಿದ್ದು, ಮಂಡಳಿಯ 147ನೇ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ. ಆದರೆ ತಾಂತ್ರಿಕ ಶಿಫಾರಸು ಸಮಿತಿ ಯಾಗಿರುವ ಸಿಡಬ್ಲ್ಯುಆರ್‌ಸಿ ನಿರ್ಣಯಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಅಂತಿಮ ಅನುಮೋದನೆ ನೀಡಬೇಕಿದೆ.

ಕಾವೇರಿ ವಿಚಾರದಲ್ಲಿ ಶುಕ್ರವಾರ ಕರ್ನಾಟಕಕ್ಕೆ ಮಿಶ್ರಫಲ. ಒಂದೆಡೆ, ಕರ್ನಾಟಕದಿಂದ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇನ್ನೊಂದೆಡೆ, ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಮಂಡಳಿ ಶಿಫಾರಸು ಮಾಡಿದೆ.

ಮುಂದಿನ 15 ದಿನ ನಿತ್ಯ 2000 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ಶಿಫಾರಸು ಮಾಡಲಾ ಗಿದ್ದು, ಮಂಡಳಿಯ 147ನೇ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ. ಆದರೆ ತಾಂತ್ರಿಕ ಶಿಫಾರಸು ಸಮಿತಿ ಯಾಗಿರುವ ಸಿಡಬ್ಲ್ಯುಆರ್‌ಸಿ ನಿರ್ಣಯಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಅಂತಿಮ ಅನುಮೋದನೆ ನೀಡಬೇಕಿದೆ.

ಇದನ್ನೂ ಓದಿ: Cauvery Water Dispute: ಕರ್ನಾಟಕಕ್ಕೆ ಮತ್ತೆ ಅನ್ಯಾಯ; ತಮಿಳುನಾಡಿಗೆ ಪ್ರತಿದಿನ 3000 ಕ್ಯುಸೆಕ್ ಕಾವೇರಿ ನೀರು ಹರಿಸಲು CWMA ಆದೇಶ

ನ.25ರಂದು ಪ್ರಾಧಿಕಾರ ಸಭೆ ನಿಗದಿಯಾಗಿದ್ದು, ಅದರ ತೀರ್ಮಾನದತ್ತ ಉಭಯ ರಾಜ್ಯಗಳ ಚಿತ್ತ ನೆಟ್ಟಿದೆ. ಇದೊಂದು ವಿಚಿತ್ರ ವಿದ್ಯಮಾನ. ಕರ್ನಾಟಕದ ಸಂಕಷ್ಟ ಸುಪ್ರೀಂ ಕೋಟ್ ಗೆ ಅರ್ಥ ವಾಗುತ್ತದೆ, ಆದರೆ ನಿಯಂತ್ರಣ ಮಂಡಳಿಗೆ ಅರ್ಥವಾಗುತ್ತಿಲ್ಲ ಎಂದರೇನು? ಕರ್ನಾಟಕದಲ್ಲಿ ಬರ ಪರಿಸ್ಥಿತಿ ಇದೆ. ಮುಂಗಾರು ಹಾಗೂ ಹಿಂಗಾರು ಎರಡೂ ವಿಫಲವಾಗಿವೆ.

ಬೆಂಗಳೂರು, ಮೈಸೂರು ಮತ್ತು ಮಂಡ್ಯಗಳಿಗೆ ಕುಡಿಯುವ ನೀರು ಒದಗಿಸಬೇಕಿರುವ ಕಾವೇರಿ ಕಣಿವೆಯ ಜಲಾಶಯಗಳು ಬತ್ತಿ ಬರಡಾಗಿವೆ. ಇನ್ನೊಂದೆಡೆ ತಮಿಳುನಾಡಿನಲ್ಲಿ ಆಗ್ನೇಯ ಮುಂಗಾರು ಚೆನ್ನಾಗಿಯೇ ಬಂದಿರುವ ಹಾಗೂ ಮೆಟ್ಟೂರು ಜಲಾಶಯದಲ್ಲಿ ಸಾಕಷ್ಟು ನೀರು ತುಂಬಿರುವ ವರದಿಗಳಿವೆ.

ತಮಿಳುನಾಡು ಪದೇ ಪದೆ, ಎಲ್ಲ ವಿಚಾರಗಳಿಗೂ ಕರ್ನಾಟಕವನ್ನು ಎದುರಾಳಿಯಾಗಿ ಪರಿಗಣಿಸಿ ಸುಪ್ರೀಂ ಕೋರ್ಟಿಗೆ ಹೋಗುತ್ತದೆ. ಅಲ್ಲಿನ ಸಿಎಂ ವಿಜಯ್ ಅವರನ್ನು ನಮ್ಮ ಸಿಎಂ ಮಾತುಕತೆಗೆ ಕರೆದಿದ್ದರೂ, ಮಾತುಕತೆಗೆ ಬರಲು ಅವರಿಗೆ ಮನಸ್ಸಿಲ್ಲ. ಕಾವೇರಿ ವಿಚಾರ ನಿಜಕ್ಕೂ ಪರಿಹಾರ ಆಗುವುದು ತಮಿಳುನಾಡಿಗೆ ಬೇಕಿಲ್ಲ. ಅದನ್ನು ಜೀವಂತವಾಗಿಡುವುದೇ ಅಲ್ಲಿನ ರಾಜಕಾರಣಿಗಳಿಗೆ ಬೇಕಿರುವುದು ಎಂದು ಅರ್ಥವಾಗುತ್ತದೆ. ಕಾವೇರಿ ವಿಚಾರದಲ್ಲಿ ತಮಿಳುನಾಡಿನಷ್ಟು ಕರ್ನಾಟಕ ನ್ಯಾಯಾಂಗ ಮೊರೆ ಹೋಗಿಲ್ಲ. ನ್ಯಾಯಾಂಗ ಹೋರಾಟದಲ್ಲೂ ಸಾಕಷ್ಟನ್ನು ದಕ್ಕಿಸಿಕೊಂಡಿಲ್ಲ.

ಕಾವೇರಿ ನೀರು ಪ್ರಾಧಿಕಾರ, ನಿಯಂತ್ರಣ ಮಂಡಳಿಗಳಲ್ಲಿ ನಮಗೆ ಪದೇ ಪದೆ ಅನ್ಯಾಯ ಆಗುತ್ತಲೇ ಇರುವುದರಿಂದ, ಅವುಗಳನ್ನು ನಂಬಿಕೊಂಡು ಇನ್ನು ಕೂರಲು ಸಾಧ್ಯವಿಲ್ಲ. ಇದನ್ನು ಪ್ರಧಾನಿಗೆ ಬರೆದ ತಮ್ಮ ಹಿಂದಿನ ಪತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರೂ ತಿಳಿಸಿದ್ದಾರೆ. ನಮ್ಮ ಸಂಕಷ್ಟ ವನ್ನು ಅರ್ಥ ಮಾಡಿಕೊಳ್ಳುವ ನ್ಯಾಯಪೀಠದ ಮುಂದೆ ಹೋಗುವುದೊಂದೇ ನಮಗಿರುವ ದಾರಿ.