ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಕಾವೇರಿ ಮತ್ತೆ ಕಣ್ಣುರಿ

ಕರ್ನಾಟಕ ನೀರು ಬಿಟ್ಟಿದೆಯೇ, ಅದು ತಮಿಳುನಾಡನ್ನು ತಲುಪಿದೆಯೇ, ತಮಿಳುನಾಡಿನ ದೂರು ಸತ್ಯವೇ ಸುಳ್ಳೇ ಎಂಬುದನ್ನೆಲ್ಲ ಯಾರೂ ಪರೀಕ್ಷಿಸುತ್ತಿಲ್ಲ. ತಮಿಳುನಾಡಿನಲ್ಲಿ ಚೆನ್ನಾಗಿ ಈಶಾನ್ಯ ಮಾನ್ಸೂನ್ ಮಳೆಯಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮುಂಗಾರು, ಹಿಂಗಾರು ಎರಡೂ ಇಲ್ಲ. ಕರ್ನಾಟಕದ ವಕೀಲರು ಕೂಡ ತಮ್ಮ ರಾಜ್ಯದ ಪರ ಗಟ್ಟಿಯಾಗಿ ವಾದ ಮಂಡಿಸಿ ನೀರು ಉಳಿಸಿಕೊಳ್ಳಲು ಶಕ್ತರಾಗಿಲ್ಲ

ಕರ್ನಾಟಕದ ರೈತರನ್ನು ಸದೆಬಡಿಯಬೇಕೆಂದೇ ಈ ಸಲ ಮಳೆಗಾಲ, ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ತಮಿಳುನಾಡು ನಿಶ್ಚಯಿಸಿದಂತೆ ಕಾಣುತ್ತಿದೆ. ಬರದಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಾಕ್ ನೀಡಿದ್ದು, ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 3000 ಕ್ಯೂಸೆಕ್ ನೀರು ಹರಿಸುವಂತೆ ಶಿಫಾರಸು ಮಾಡಿದೆ.

ನ.7ರಿಂದ ಒಟ್ಟು 3.88 ಟಿಎಂಸಿ ಅಡಿ ನೀರು ಹರಿಸಲು ತಿಳಿಸಿದೆ. ಇದರ ಮುನ್ನಾದಿನ ತಮಿಳುನಾಡು ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಹೋಗಿ, ಕರ್ನಾಟಕ ಇದುವರೆಗೆ ನೀರು ಬಿಡದಿರುವುದರಿಂದ ತನ್ನಲ್ಲಿನ 4 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ನಷ್ಟವಾಗಿದೆ ಎಂದು ದೂರಿದೆ. ಮೇಲೆ ಕುಳಿತು ನಿರ್ಣಯಿಸು ವವರಿಗೆ ತಮಿಳು ನಾಡು ಆಡಿದ್ದೇ ವೇದವಾಕ್ಯ ಎಂಬಂತಿದೆ.

ಇದನ್ನೂ ಓದಿ: Cauvery Water Dispute: ಕರ್ನಾಟಕಕ್ಕೆ ಮತ್ತೆ ಅನ್ಯಾಯ; ತಮಿಳುನಾಡಿಗೆ ಪ್ರತಿದಿನ 3000 ಕ್ಯುಸೆಕ್ ಕಾವೇರಿ ನೀರು ಹರಿಸಲು CWMA ಆದೇಶ

ಕರ್ನಾಟಕ ನೀರು ಬಿಟ್ಟಿದೆಯೇ, ಅದು ತಮಿಳುನಾಡನ್ನು ತಲುಪಿದೆಯೇ, ತಮಿಳುನಾಡಿನ ದೂರು ಸತ್ಯವೇ ಸುಳ್ಳೇ ಎಂಬುದನ್ನೆಲ್ಲ ಯಾರೂ ಪರೀಕ್ಷಿಸುತ್ತಿಲ್ಲ. ತಮಿಳುನಾಡಿನಲ್ಲಿ ಚೆನ್ನಾಗಿ ಈಶಾನ್ಯ ಮಾನ್ಸೂನ್ ಮಳೆಯಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮುಂಗಾರು, ಹಿಂಗಾರು ಎರಡೂ ಇಲ್ಲ. ಕರ್ನಾಟಕದ ವಕೀಲರು ಕೂಡ ತಮ್ಮ ರಾಜ್ಯದ ಪರ ಗಟ್ಟಿಯಾಗಿ ವಾದ ಮಂಡಿಸಿ ನೀರು ಉಳಿಸಿ ಕೊಳ್ಳಲು ಶಕ್ತರಾಗಿಲ್ಲ. ಅತ್ತ ಕಾವೇರಿ ನದಿ ಪಾತ್ರದ ಅಣೆಕಟ್ಟುಗಳಲ್ಲಿ ನೀರು ಸಂಗ್ರಹದ ಸ್ಥಿತಿ ಶೋಚನೀಯವಾಗಿದೆ.

ಮಂಡ್ಯ ಮತ್ತು ಬೆಂಗಳೂರಿನ ದಾಹ ತಣಿಸುವ ಕೆಆರ್ ಎಸ್ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಶೇ. 47.6ಕ್ಕೆ ಕುಸಿದಿದೆ. ಕಬಿನಿ ಅಣೆಕಟ್ಟಿನಲ್ಲಿ ಶೇ. 67.7ರಷ್ಟು ಮಾತ್ರ ಭರ್ತಿಯಾಗಿದೆ. ಹಾರಂಗಿ ಅಣೆಕಟ್ಟು ಶೇ. 65.7ರಷ್ಟು ಭರ್ತಿಯಾಗಿದ್ದು, ಹೇಮಾವತಿ ಅಣೆಕಟ್ಟಿನಲ್ಲಿ ಶೇ. 48.4ರಷ್ಟು ಮಾತ್ರ ತುಂಬಿದೆ. ಇವೆಲ್ಲವೂ ಮುಂಬರಲಿರುವ ದುರ್ಭರ ದಿನಗಳತ್ತ ಬೆಟ್ಟು ಮಾಡುತ್ತಿವೆ.

ಸಂಕಷ್ಟ ಸೂತ್ರದ ಗೈರುಹಾಜರಿಯಿಂದಾಗಿ, ತಮಿಳುನಾಡು ಆಡಿದ್ದೇ ಆಟ ಎಂಬಂತಿದೆ. ಸಮಿತಿ ಯಾಗಲೀ ಪ್ರಾಧಿಕಾರವಾಗಲೀ ನೈಜ ಸ್ಥಿತಿಗತಿಯನ್ನು ಕಾಣುವ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ಮಳೆ ನಿಂತು ಜಲಾಶಯಗಳಿಗೆ ಒಳಹರಿವು ಇನ್ನಷ್ಟು ಕಡಿಮೆ ಯಾಗುವುದರಿಂದ, ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ನೀರಿನ ನಿರ್ವಹಣೆ ಹೇಗೆ ಎಂಬ ಪ್ರಶ್ನೆ ಎದ್ದಿದೆ. ಸಮಿತಿ ಹೇಳಿದೆ ಎಂಬ ಕಾರಣಕ್ಕೆ ನೀರು ಬಿಡಬೇಕಿಲ್ಲ.

ಪ್ರತಿಭಟಿಸುವ, ನಮ್ಮ ನಿಲುವನ್ನು ಗಟ್ಟಿಯಾಗಿ ಸಾಕ್ಷ್ಯ ಸಮೇತ ರುಜುವಾತುಪಡಿಸುವ ಅವಕಾಶ ನಮಗಿದೆ. ಸರಕಾರ ರೈತರ ಹಿತ ಕಾಪಾಡಬೇಕಿದೆ.