ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಸನಾತನಿಗಳು ಜಾಗೃತರಾಗಲಿ

ಮನೆಯಲ್ಲಿ ಪೂಜಿಸುವ ಗಣಪನಿಂದ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲ್ಪಡುವ ‘ಊರ ಗಣಪತಿ’ಯವರೆಗಿನ ಸಜ್ಜಿಕೆಗಳೆಲ್ಲದಕ್ಕೂ ಈ ಮಾತು ಅನ್ವಯ. ಬ್ರಿಟಿಷರ ಬಿಗಿಮುಷ್ಟಿಯಲ್ಲಿ ಸಿಲುಕಿ, ದಾಸ್ಯದ ಸಂಕೋಲೆಯನ್ನು ಕಾಲಿಗೆ ಬಿಗಿಸಿಕೊಂಡಿದ್ದ ಭಾರತವನ್ನು ಅದರಿಂದ ಬಿಡಿಸುವ ಮಾರ್ಗೋ ಪಾಯಗಳ ಕುರಿತು ಆಲೋಚಿಸುತ್ತಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕರಿಗೆ ಹೊಳೆದ ಪರಿಕಲ್ಪನೆ ಯೇ ‘ಸಾರ್ವಜನಿಕ ಗಣೇಶೋತ್ಸವ’.

ಇಂದು ನಾಡಿನಾದ್ಯಂತ ಗಣಪತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗಿನ ವಿವಿಧ ವಯೋಮಾನದವರು ಸಂಭ್ರಮ-ಸಡಗರಗಳಿಂದ ಆಚರಿಸುವ ಹಬ್ಬಗಳಲ್ಲಿ ಗಣಪತಿ ಹಬ್ಬಕ್ಕೆ ಅಗ್ರಸ್ಥಾನವಿದೆ.

ಮನೆಯಲ್ಲಿ ಪೂಜಿಸುವ ಗಣಪನಿಂದ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲ್ಪಡುವ ‘ಊರ ಗಣಪತಿ’ಯವರೆಗಿನ ಸಜ್ಜಿಕೆಗಳೆಲ್ಲದಕ್ಕೂ ಈ ಮಾತು ಅನ್ವಯ. ಬ್ರಿಟಿಷರ ಬಿಗಿಮುಷ್ಟಿಯಲ್ಲಿ ಸಿಲುಕಿ, ದಾಸ್ಯದ ಸಂಕೋಲೆಯನ್ನು ಕಾಲಿಗೆ ಬಿಗಿಸಿಕೊಂಡಿದ್ದ ಭಾರತವನ್ನು ಅದರಿಂದ ಬಿಡಿಸುವ ಮಾರ್ಗೋಪಾಯಗಳ ಕುರಿತು ಆಲೋಚಿಸುತ್ತಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕರಿಗೆ ಹೊಳೆದ ಪರಿಕಲ್ಪನೆಯೇ ‘ಸಾರ್ವಜನಿಕ ಗಣೇಶೋತ್ಸವ’.

ನಮ್ಮ ಜನರ ನಡುವಿನ ಸಾಂಕ ಶಕ್ತಿಗೆ ಮತ್ತಷ್ಟು ಕಸುವು ತುಂಬುವ ಒಂದು ಸಂದರ್ಭವಾಗಿ ತಿಲಕರು ಇದನ್ನು ಕಾರ್ಯರೂಪಕ್ಕೆ ತಂದಾಗಿನಿಂದ ಗಣೇಶನು ಎಲ್ಲ ಜಾತಿ-ಪಂಥ-ಮತಗಳ ಎಲ್ಲೆಯನ್ನೂ ಮೀರಿ ಸಾಮುದಾಯಿಕ ಶಕ್ತಿಯನ್ನು ಮತ್ತಷ್ಟು ಗಾಢವಾಗಿಸುವ ದಿವ್ಯಶಕ್ತಿಯೇ ಆಗಿಬಿಟ್ಟಿದ್ದಾನೆ.

ಇದನ್ನೂ ಓದಿ: Ganesh Chaturthi: ಗಣೇಶ ಚತುರ್ಥಿ 2025: ಪೂಜಾ ಸಮಯ, ಹಬ್ಬದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಸನಾತನ ಧರ್ಮವನ್ನು ಮತ್ತು ಅದರ ಪರಿಪಾಲಕರನ್ನು ಗುರಿಯಾಗಿಸಿಕೊಂಡ ಸಂಚುಗಳು ದಿನಗಳೆದಂತೆ ಏರುಗತಿಯನ್ನು ಕಂಡುಕೊಳ್ಳುತ್ತಿರುವ ಈ ವಿಷಮ ಕಾಲದಲ್ಲಿ, ಸನಾತನಿಗಳ ಸಾಮುದಾಯಿಕ ಶಕ್ತಿಯನ್ನು ಜಗತ್ತಿನೆದುರು ಹರವಿಡುವ ಒಂದು ವೇದಿಕೆಯಾಗಿಯೂ ನಾವು ಗಣೇಶೋತ್ಸವವನ್ನು ಆಚರಿಸಬೇಕಾಗಿ ಬಂದಿದೆ.

ಪ್ರಯಾಗ್‌ರಾಜ್‌ನಲ್ಲಿ ಕೆಲ ತಿಂಗಳ ಹಿಂದಷ್ಟೇ ಸಂಪನ್ನಗೊಂಡ ಮಹಾ ಕುಂಭಮೇಳ, ಅದಕ್ಕೂ ಮುಂಚೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು ಉದ್ಘಾಟನೆಗೊಂಡ ಪರ್ವಕಾಲ ಇವೆಲ್ಲವೂ ಸನಾತನಿಗಳ ಒಗ್ಗಟ್ಟು ಮತ್ತು ಸಾಮುದಾಯಿಕ ಶಕ್ತಿಯನ್ನು ಜಗತ್ತಿನೆದುರು ತೆರೆದಿಟ್ಟಿವೆ. ಆದರೆ ಇದನ್ನರಿಯದವರು ಭಾರತದಲ್ಲಿ ಮತ್ತು ಭಾರತೀಯರಲ್ಲಿ ಕೆನೆಗಟ್ಟಿರುವ ಅಸೀಮ ಸಹನೆಯನ್ನು ಕೆಣಕುವಂಥ ಕುಚೇಷ್ಟೆಗಳಿಗೆ ಮುಂದಾಗುತ್ತಿದ್ದಾರೆ.

ಇಂಥವರೆದರು ಮತ್ತೊಮ್ಮೆ ಸನಾತನದ ಅಸ್ಮಿತೆಯನ್ನು ಪ್ರದರ್ಶಿಸುವ ಸಂದರ್ಭವಾಗಬೇಕಿದೆ ಈ ಸಲದ ಗಣೇಶೋತ್ಸವದ ಆಚರಣೆ. ಇದನ್ನು ನೋಡಿಯಾದರೂ ಅಂಥ ಕುತ್ಸಿತ ಶಕ್ತಿಗಳು ಪಾಠ ಕಲಿಯಲಿ, ತಮ್ಮ ತಪ್ಪು ಗಳನ್ನು ತಿದ್ದಿಕೊಳ್ಳಲಿ ಎಂಬುದಷ್ಟೇ ಈ ಮಾತಿನ ಹಿಂದಿರುವ ಆಶಯ...