ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಬಿಸುಪು ಬಿಗಿಯಾಗಿ, ಆನಂದ ಹಬ್ಬಲಿ

ಯುಗಾದಿ ಪ್ರಕೃತಿಯಲ್ಲಿ ಹೊಸ ಚಿಗುರು ಕಾಣಿಸಿಕೊಳ್ಳುವ ಹೊತ್ತು. ಸಂಕ್ರಾಂತಿಯ ಹೊತ್ತಿಗೆ ಚಳಿ ಕಡಿಮೆಯಾಗುತ್ತಿರುತ್ತದೆ, ಶಿವರಾತ್ರಿ ಕಳೆದ ಬೆನ್ನಲ್ಲೇ ವಾತಾವರಣದಲ್ಲಿ ಬಿಸಿ ಏರುವು ದನ್ನು ನೋಡಬಹುದು. ಯುಗಾದಿ ಬಂತೆಂದರೆ ಅದು ಪಕ್ಕಾ ಬೇಸಿಗೆಕಾಲದ ಆಗಮನ ಸಂಕೇತ ಎನ್ನುವುದು ಜನರಿಗೆ ಸರ್ವವಿದಿತ.

ಯುಗಾದಿ ಭಾರತದಲ್ಲಿ ಮುಖ್ಯವಾಗಿ ದಕ್ಷಿಣ ಭಾರತದ ರಾಜ್ಯ ಅತ್ಯಂತ ವಿಶಿಷ್ಟ ಸ್ಥಾನ ಪಡೆದಿದೆ. ಭಾರತದ ಎಲ್ಲ ಹಬ್ಬಗಳಂತೆ ಇದೂ ಕೂಡ ಪ್ರಾಕೃತಿಕ ಬದಲಾವಣೆಯೊಂದಿಗೆ ನೇರವಾದ ಸಂಬಂಧ ಹೊಂದಿದೆ. ಸಂಕ್ರಾಂತಿಯನ್ನು ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ದಿನ ಆಚರಿಸಲಾಗುತ್ತದೆ. ಆ ಸಂದರ್ಭದಲ್ಲಿ ರೈತರು ತಮ್ಮ ಬೆಳೆಯನ್ನು ರಾಶಿಹಾಕಿ ಪೂಜೆ ಸಲ್ಲಿಸುತ್ತಾರೆ.

ಯುಗಾದಿ ಪ್ರಕೃತಿಯಲ್ಲಿ ಹೊಸ ಚಿಗುರು ಕಾಣಿಸಿಕೊಳ್ಳುವ ಹೊತ್ತು. ಸಂಕ್ರಾಂತಿಯ ಹೊತ್ತಿಗೆ ಚಳಿ ಕಡಿಮೆಯಾಗುತ್ತಿರುತ್ತದೆ, ಶಿವರಾತ್ರಿ ಕಳೆದ ಬೆನ್ನಲ್ಲೇ ವಾತಾವರಣದಲ್ಲಿ ಬಿಸಿ ಏರುವುದನ್ನು ನೋಡಬಹುದು. ಯುಗಾದಿ ಬಂತೆಂದರೆ ಅದು ಪಕ್ಕಾ ಬೇಸಿಗೆಕಾಲದ ಆಗಮನ ಸಂಕೇತ ಎನ್ನುವುದು ಜನರಿಗೆ ಸರ್ವವಿದಿತ.

ಅದರಲ್ಲೂ ಗ್ರಾಮೀಣ ಭಾಗದ ಜನರು ಈ ಹಬ್ಬಗಳೊಂದಿಗೆ ನಿಕಟ ಹೊಂದಿದ್ದಾರೆ. ಅವರಿಗೆ ಈ ಹಬ್ಬಗಳು ಮತ್ತು ಪ್ರಕೃತಿಯೊಂದಿಗಿನ ಸಂಬಂಧ ತಕ್ಷಣ ಗೊತ್ತಾಗುತ್ತದೆ. ಯುಗಾದಿಯಾದ ಸರಿಯಾಗಿ 9 ದಿನಗಳಿಗೆ ರಾಮನವಮಿ ಬರುತ್ತದೆ. ಅನಂತರ ಬರುವ ಮೊದಲ ಹುಣ್ಣಿಮೆಯೇ ಹನುಮ ಜಯಂತಿ!

ಇದನ್ನೂ ಓದಿ: Vishwavani Editorial: ಯಾಕಿಂಥ ಹಠಮಾರಿ ಧೋರಣೆ?

ಅಂದರೆ ಹನುಮಂತನ ಹುಟ್ಟಿದ ದಿನ. ಇದರ ಬೆನ್ನಲ್ಲೇ ಅಕ್ಷಯತೃತೀಯ (ಏಪ್ರಿಲ್‌ನಲ್ಲಿ), ನಂತರ ಜುಲೈನಲ್ಲಿ ಆಷಾಢ ಗುರುಪೌರ್ಣಿಮೆ, ಆಗಸ್ಟ್‌ನಲ್ಲಿ ರಕ್ಷಾಬಂಧನ, ಸೆಪ್ಟೆಂಬರ್‌ ನಲ್ಲಿ ಗಣೇಶ ಚತುರ್ಥಿ. ಅಕ್ಟೋಬರ್‌ನಲ್ಲಿ ನವರಾತ್ರಿ, ನವೆಂಬರ್‌ನಲ್ಲಿ ದೀಪಾವಳಿ ನಡೆಯುತ್ತದೆ. ಇಲ್ಲಿಗೆ ಬಹುತೇಕ ಹಿಂದೂ ಹಬ್ಬಗಳು ಮುಗಿದಂತೆ.

ಜುಲೈನಿಂದ ಅಕ್ಟೋಬರ್ ನಡುವೆ ಭಾರತದಲ್ಲಿ ಮಳೆಯಾಗುವ ಕಾಲ. ಜುಲೈನಲ್ಲಿನ ಆಷಾಢ ಗುರುಪೌರ್ಣಿಮೆಯಿಂದ ಚಾತುರ್ಮಾಸ್ಯ ಶುರುವಾಗುತ್ತದೆ. ಅಕ್ಟೋಬರ್‌ನಲ್ಲಿ ವಿಜಯದಶಮಿಯೊಂದಿಗೆ ಈ ನಾಲ್ಕು ತಿಂಗಳ ಆರಾಧನೆ, ಸಾಧನಾ ಪ್ರಕ್ರಿಯೆಯನ್ನು ಮುಖ್ಯವಾಗಿ ಸನ್ಯಾಸಿಗಳು ಮುಗಿಸುತ್ತಾರೆ.

ಹಿಂದಿನ ಕಾಲದಲ್ಲಿ ಮಳೆಯಲ್ಲಿ ಸಂಚಾರ ಅಸಾಧ್ಯವಾಗಿದ್ದರಿಂದ ಸಾಧಕರು ಈ ಅವಧಿ ಯನ್ನು ಸಾಧನೆಗಾಗಿ ಬಳಸುತ್ತಿದ್ದರು. ಆ ಪದ್ಧತಿ ಈಗಲೂ ಮುಂದುವರಿದಿದೆ. ಭಾರತ ದಲ್ಲಿನ ಈ ಎಲ್ಲ ಹಬ್ಬಗಳು, ಆಚರಣೆಗಳು ನೇರವಾಗಿ ಪ್ರಕೃತಿಯೊಂದಿಗೇ ಬೆಸೆದುಕೊಂಡಿವೆ.

ಪ್ರಕೃತಿಯಲ್ಲಾಗುವ ಪ್ರತೀ ಸೂಕ್ಷ್ಮ ಬದಲಾವಣೆಗಳನ್ನು ಗುರ್ತಿಸಿ, ಅದನ್ನು ಹಬ್ಬಗಳಂತೆ ಆಚರಿಸುವ ಈ ಮನೋಧರ್ಮವೇ ಒಂದು ವಿಶೇಷ ವಿಜ್ಞಾನ. ಯುಗಾದಿ ಭಾರತೀಯರಲ್ಲಿ ಒಂದು ಹೊಸ ಹುರುಪನ್ನು, ಬಿಸುಪನ್ನು ತರುತ್ತದೆ. ಆ ಬಿಸುಪು ಬಿಗುವಾಗಲಿ, ಆನಂದ ಚಿರಸ್ಥಾಯಿಯಾಗಲಿ.