ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ನೀರಾಟ ನರಳಾಟವಾಗದಿರಲಿ

ಮಕ್ಕಳು ತರಗತಿಗಳಿಂದ ಮುಕ್ತರಾಗಿ ನೀರಿನಲ್ಲಿ ಆಟವಾಡಲು ಬಯಸುವುದು ಸಹಜ. ಹಿರಿಯರು ಸಹಿತ ಮಕ್ಕಳೊಂದಿಗೆ ನೀರಿನ ತಾಣಗಳ ಕಡೆಗೆ ಪ್ರವಾಸ ಹೋಗುವುದು ಸಾಮಾನ್ಯ. ಇಂಥ ಹೊತ್ತಿ ನಲ್ಲಿ ತಂಪು ಬಯಸುವ ಎಲ್ಲರನ್ನೂ ನೀರು ಸೆಳೆಯುತ್ತದೆ. ಆದರೆ ಸ್ಥಳೀಯ ನೀರಿನ ಆಳ ಅಥವಾ ರಭಸದ ಅರಿವಿಲ್ಲದೆ ಹಲವರು ದುರಂತ ಮರಣ ಕಾಣುತ್ತಾರೆ.

ಚಿಕ್ಕಮಗಳೂರಿನ ಅರಳಗುಪ್ಪೆಯಲ್ಲಿ ನೀರಿನಲ್ಲಿ ಆಟವಾಡಲು ಹೋದ ನಾಲ್ವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಭದ್ರಾ ನದಿಯಲ್ಲಿ ಒಬ್ಬ ಯುವಕ ಜಲಸಮಾಧಿ ಯಾಗಿದ್ದಾನೆ. ಕರಾವಳಿಯ ಸಮುದ್ರ ತೀರಗಳಲ್ಲಿ ಈಜಲು ಇಳಿದವರು ತೆರೆಗಳ ಹೊಡೆತಕ್ಕೆ ಸಿಲುಕಿ ಮುಳುಗುವುದು ಅಥವಾ ರಕ್ಷಣಾ ಪಡೆಯವರಿಂದಾಗಿ ಬದುಕುಳಿಯುವುದು ಆಗಾಗ ನಡೆಯುತ್ತಲೇ ಇದೆ. ಇದೀಗ ಬೇಸಿಗೆ ರಜೆ.

ಮಕ್ಕಳು ತರಗತಿಗಳಿಂದ ಮುಕ್ತರಾಗಿ ನೀರಿನಲ್ಲಿ ಆಟವಾಡಲು ಬಯಸುವುದು ಸಹಜ. ಹಿರಿಯರು ಸಹಿತ ಮಕ್ಕಳೊಂದಿಗೆ ನೀರಿನ ತಾಣಗಳ ಕಡೆಗೆ ಪ್ರವಾಸ ಹೋಗುವುದು ಸಾಮಾನ್ಯ. ಇಂಥ ಹೊತ್ತಿ ನಲ್ಲಿ ತಂಪು ಬಯಸುವ ಎಲ್ಲರನ್ನೂ ನೀರು ಸೆಳೆಯುತ್ತದೆ. ಆದರೆ ಸ್ಥಳೀಯ ನೀರಿನ ಆಳ ಅಥವಾ ರಭಸದ ಅರಿವಿಲ್ಲದೆ ಹಲವರು ದುರಂತ ಮರಣ ಕಾಣುತ್ತಾರೆ.

ಇದನ್ನೂ ಓದಿ: Vishwavani Editorial: ಭರವಸೆಗಳ ಕಾಮನಬಿಲ್ಲಿನ ಡೊಂಕು

ಪಣಂಬೂರು, ಮಲ್ಪೆ, ಗೋಕರ್ಣ ಮೊದಲಾದ ಸಮುದ್ರ ತೀರಗಳು, ಬಲಮುರಿ ಮೊದಲಾದ ನೀರ್ದಾಣಗಳು ಇಂಥ ದುರ್ಘಟನೆಗಳಿಗೆ ಸಾಕ್ಷಿಯಾಗಿವೆ. ಇಂಥ ಸನ್ನಿವೇಶಗಳು ಬೇಸಿಗೆ ರಜೆಯ ಸಂದರ್ಭದಲ್ಲಿ ಹೆಚ್ಚು. ಹೀಗಾಗಿ ಜಲತಾಣಗಳ ಕಡೆಗೆ ಹೋಗುವ ಎಲ್ಲರೂ ಎಚ್ಚರ ವಹಿಸಬೇಕಾದ ಸಂದರ್ಭ ಇದಾಗಿದೆ.

ಕೃಷಿಹೊಂಡಗಳಲ್ಲಿ ಅವುಗಳ ಮಾಲಿಕರು ಸುರಕ್ಷತೆ ವ್ಯವಸ್ಥೆ ನೋಡಿಕೊಳ್ಳಬೇಕು. ಆದರೆ ಸಾವಿರಾರು ಜನ ಸೇರುವ ಪ್ರವಾಸಿ ತಾಣಗಳಲ್ಲಿ ಮಾತ್ರ ಸರಕಾರ, ಸ್ಥಳೀಯಾಡಳಿತ ಮುಂದೆ ನಿಂತು ಇಂಥ ಸನ್ನಿವೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಬಲ್ಲ ಪರಿಣತರನ್ನು ನಿಯೋಜಿಸಬೇಕು. ಅಪಾಯಕಾರಿ ಬೀಚ್‌ಗಳಲ್ಲಿ ನೀರಿಗಿಳಿಯದಂತೆ, ಮುಂದೆ ಹೋಗದಂತೆ ಧ್ವನಿವರ್ಧಕದ ಮೂಲಕ ಎಚ್ಚರಿಸುವ ನಿರಂತರ ಕೆಲಸವನ್ನು ಮಾಡಬೇಕು.

ಸ್ಥಳೀಯ ಹೋಂಸ್ಟೇಗಳು, ರೆಸಾರ್ಟ್‌ಗಳು ಕೂಡ ತಮ್ಮಲ್ಲಿ ತಂಗುವ ಅತಿಥಿಗಳಿಗೆ ಈ ಎಚ್ಚರ ಮೂಡಿಸುವ ಕೆಲಸ ಮಾಡುವುದು ಅಗತ್ಯ. ಎಲ್ಲ ಕಡೆಗಳಲ್ಲಿಯೂ ನುರಿತ ಈಜುಗಾರರು, ರಕ್ಷಣಾ ದಳದವರು ಇರುವುದು ಅಸಾಧ್ಯ. ಹೀಗಾಗಿ ಎಲ್ಲರೂ ಸ್ವಯಂ ನಿಯಂತ್ರಣ ಮಾಡಿಕೊಳ್ಳುವುದು ಅಗತ್ಯ. ಹೋದ ಪ್ರಾಣ ಮರಳಿ ಬಾರದು. ಒಂದು ಕ್ಷಣದ ವಿವೇಚನೆ ಅಮೂಲ್ಯವಾದ ಪ್ರಾಣವನ್ನು ಉಳಿಸಬಲ್ಲುದು. ಆನಂದ ಬೇಕು, ಆದರೆ ಅದಕ್ಕಾಗಿ ದುಡುಕು ತರವಲ್ಲ.