ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಮಳೆ ಕೊರತೆ ಎದುರಿಸೋಣ

ಪರ್ಯಾಯ ದ್ವೀಪ ಭಾರತ ಉಪಖಂಡದ ಮೇಲೆ ಇಷ್ಟು ಹೊತ್ತಿಗೆ ದಟ್ಟವಾಗಿ ಮೋಡಗಳು ಇರಬೇಕಾ ಗಿದ್ದು, ಉಪಗ್ರಹ ಚಿತ್ರಗಳಲ್ಲಿ ಸ್ವಲ್ಪವೂ ಗೋಚರಿಸಿಲ್ಲ. ಹೀಗಾಗಿ, ಇನ್ನೂ ಹಲವು ದಿನಗಳ ಕಾಲ ಈ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಜೂನ್ ಅಂತ್ಯದವರೆಗೆ ಮಳೆ ಬರದೇ ಹೋದರೆ, ಈ ವರ್ಷ ಬರಗಾಲ ಕಾಲಿಡುವುದು ಖಚಿತ. ಈ ಸಲದ ಮಳೆಯನ್ನು ನೆಚ್ಚುವಂತಿಲ್ಲ ಎಂದು ತಜ್ಞರು ಎಚ್ಚರಿಸಿ ದ್ದಾರೆ.

ನೈರುತ್ಯ ಮುಂಗಾರು ಕುಂಠಿತಗೊಂಡಿದೆ. ಭಾರತೀಯ ಹವಾಮಾನ ಇಲಾಖೆ ತಿಳಿಸಿರುವಂತೆ ಶೇ.64ರಷ್ಟು ಮುಂಗಾರು ಮಳೆ ಕೊರತೆಯಾಗಿದೆ. ವಾಡಿಕೆಯಂತೆ ಜೂನ್ 4ರಿಂದ ಜೂನ್ 15 ರವರೆಗೆ ದೇಶಾದ್ಯಂತ 53.7 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಕೇವಲ 19.2 ಮಿ.ಮೀ ಮಾತ್ರ ಮಳೆಯಾಗಿದೆ. ಈ ಮಳೆಯಿಂದಾಗಿಯೇ ಕೃಷಿ ಚಟುವಟಿಕೆಗಳಿಗೆ ನೆಲ ಹದಗೊಳ್ಳುತ್ತಿತ್ತು. ಕೃಷಿಕರು ತಮ್ಮ ಕೃಷಿ ಚಟುವಟಿಕೆ ಆರಂಭಿಸುತ್ತಿದ್ದರು. ಆದರೆ ಈ ಬಾರಿ ಎಲ್ ನಿನೋ ಹಾಗೂ ನೈರುತ್ಯ ಮುಂಗಾರಿನ ಕೊರತೆಯಿಂದ ಕೃಷಿ ಚಟುವಟಿಕೆಗಳು ಆರಂಭವೇ ಆಗಿಲ್ಲ.

ಪರ್ಯಾಯ ದ್ವೀಪ ಭಾರತ ಉಪಖಂಡದ ಮೇಲೆ ಇಷ್ಟು ಹೊತ್ತಿಗೆ ದಟ್ಟವಾಗಿ ಮೋಡಗಳು ಇರಬೇಕಾಗಿದ್ದು, ಉಪಗ್ರಹ ಚಿತ್ರಗಳಲ್ಲಿ ಸ್ವಲ್ಪವೂ ಗೋಚರಿಸಿಲ್ಲ. ಹೀಗಾಗಿ, ಇನ್ನೂ ಹಲವು ದಿನಗಳ ಕಾಲ ಈ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಜೂನ್ ಅಂತ್ಯದವರೆಗೆ ಮಳೆ ಬರದೇ ಹೋದರೆ, ಈ ವರ್ಷ ಬರಗಾಲ ಕಾಲಿಡುವುದು ಖಚಿತ. ಈ ಸಲದ ಮಳೆಯನ್ನು ನೆಚ್ಚುವಂತಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Vishwavani Editorial: ಶಾಲಾ ಕಟ್ಟಡಗಳ ಅಸುರಕ್ಷತೆ

ಇದರ ಪರಿಣಾಮ, ರಾಜ್ಯದ ಅಣೆಕಟ್ಟುಗಳಲ್ಲಿ ಒಟ್ಟು ಸಾಮರ್ಥ್ಯದ ಶೇ.23ರಷ್ಟು ಮಾತ್ರ ನೀರಿದೆ. ಕಳೆದ ವರ್ಷ ಈ ಹೊತ್ತಿಗೆ 349 ಟಿಎಂಸಿ ನೀರಿತ್ತು. ಈ ವರ್ಷ 206 ಟಿಎಂಸಿ ಮಾತ್ರ ಇದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಕೆಆರ್‌ಎಸ್ ಡ್ಯಾಮ್‌ನಲ್ಲಿ ಈ ಹೊತ್ತಿಗೆ 30 ಟಿಎಂಸಿ ಇರಬೇಕಾದಲ್ಲಿ, 11 ಟಿಎಂಸಿ ಮಾತ್ರ ಇದೆ.

ಮೈಸೂರು ಭಾಗಕ್ಕೆ ನೀರು ಪೂರೈಸುವ ಕಬಿನಿ ಜಲಾಶಯವೂ ಖಾಲಿ ಇದೆ. ಇದು ಗಂಭೀರ ಸಂಗತಿ. ಸರಕಾರ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಮುಖ್ಯವಾಗಿ, ಕುಡಿಯುವ ನೀರು ಕೊರತೆಯಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕು. ಜಲಾಶಯಗಳಲ್ಲಿ ನೀರು ಇಲ್ಲವಾದ್ದರಿಂದ, ಕಡಿಮೆ ನೀರು ಬಳಸುವ ಬೆಳೆಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸಬೇಕಿದೆ.

ಬಿದ್ದಷ್ಟು ಮಳೆ ನೀರು ಸಂಗ್ರಹವನ್ನು ಈಗಿನಿಂದಲೇ ಆರಂಭಿಸಲು ನಗರದ ಜನತೆಯನ್ನು ಪ್ರೇರೇಪಿಸಿದರೆ, ಈ ವರ್ಷಕ್ಕಲ್ಲವಾದರೂ ಮುಂದಿನ ವರ್ಷಗಳಲ್ಲಿ ಇಂಥ ಸನ್ನಿವೇಶ ಒದಗಿದರೆ ತಾಳಿಕೊಳ್ಳಬಹುದು. ಜಾನುವಾರುಗಳಿಗೆ ಮೇವಿನ ಸಂಗ್ರಹ ಮಾಡುವುದು, ಆಹಾರ ಬೆಳೆಗಳ ಗೋದಾಮು ವ್ಯವಸ್ಥೆ, ಕೇಂದ್ರದ ನೆರವಿಗೆ ಆಗ್ರಹ, ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ, ಬೆಳೆ ನಷ್ಟ ಪರಿಹಾರಕ್ಕೆ ಸಿದ್ಧತೆ ಇವೆಲ್ಲವನ್ನೂ ಮಾಡಬೇಕು. ಮಂತ್ರಿಗಳು, ಜಿಲ್ಲಾಡಳಿತಗಳು ಸಮರೋ ಪಾದಿಯಲ್ಲಿ ರೈತರ ಬಳಿಗೆ ಧಾವಿಸುವುದು ಈಗ ಅಗತ್ಯವಾಗಿದೆ.