ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಪುಸ್ತಕಗಳ ಓದು ಹೆಚ್ಚಾಗಲಿ

ಇದೂ ಒಪ್ಪುವಂಥ ಮಾತೇ. ಆದರೆ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದು, ಅದರ ಸಾಲುಗಳಿಗೆ ಪ್ರತ್ಯಕ್ಷ ಒಡ್ಡಿಕೊಂಡು, ಅಕ್ಷರದ ರಸಾಸ್ವಾದನೆಯನ್ನು ಮಾಡುವುದಿದೆಯಲ್ಲಾ, ಅದು ಪ್ರಾಯಶಃ ಡಿಜಿಟಲ್ ಸ್ವರೂಪದಲ್ಲಿ ದಕ್ಕುವುದಿಲ್ಲ. ಜತೆಗೆ, ಪುಸ್ತಕದ ಆ ಸಾಲುಗಳಲ್ಲಿರುವ ಭಾವನೆಗೆ ನಮ್ಮ ಮನವನ್ನು ಸರಿ ಹೊಂದಿಸಿಕೊಳ್ಳುತ್ತಾ ಸ್ವೀಕರಿಸುತ್ತಾ ಹೋದಂತೆ, ನಮಗೇ ಅರಿವಿಲ್ಲದಂತೆ ನಮ್ಮ ಕಲ್ಪನಾಶಕ್ತಿಯೂ ಗಣನೀಯವಾಗಿ ಗಾಢವಾಗುವುದಿದೆ.

ಆನ್‌ಲೈನ್/ಡಿಜಿಟಲ್ ಸ್ವರೂಪದ ಶ್ರವಣ ಮತ್ತು ದೃಶ್ಯ ಮಾಧ್ಯಮಗಳ ಬಳಕೆ ಹೆಚ್ಚಾಗುತ್ತಾ ಹೋದಂತೆ ಪುಸ್ತಕಗಳನ್ನು ಓದುವ ಪರಿಪಾಠವು ಕ್ರಮೇಣ ಮೂಲೆಗುಂಪಾಗುತ್ತಿದೆ. ಪುಸ್ತಕಗಳ ಕಥೆ ಹಾಗಿರಲಿ, ದಿನಪತ್ರಿಕೆಗಳನ್ನು ತಿರುವಿಹಾಕುವುದೂ ಬಹುತೇಕರಿಗೆ ದುಸ್ತರವಾಗಿದೆ.

ಎಲ್ಲವೂ ಅಂಗೈನಲ್ಲೇ, ಕೈಬೆರಳಿನ ಕ್ಲಿಕ್‌ನಲ್ಲೇ ಲಭ್ಯವಿರುವುದೇ ಇದಕ್ಕೆ ಕಾರಣ. ‘ಪುಸ್ತಕದಲ್ಲಿ ಅಡಕ ವಾಗಿರುವ ಹೂರಣ, ಡಿಜಿಟಲ್ ಸ್ವರೂಪದಲ್ಲೇ ಲಭ್ಯವಿರುವಾಗ ಅದನ್ನು ನೆಚ್ಚುವುದರಲ್ಲಿ ತಪ್ಪೇ ನಿದೆ? ಮಾಹಿತಿಯನ್ನೋ ಕಥನವನ್ನೋ ಮನದಾಳಕ್ಕೆ ಇಳಿಸಿಕೊಳ್ಳುವುದು ಮುಖ್ಯವಲ್ಲವೇ?’ ಎಂದು ಕೆಲವರು ಪ್ರಶ್ನಿಸುವುದುಂಟು.

ಇದೂ ಒಪ್ಪುವಂಥ ಮಾತೇ. ಆದರೆ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದು, ಅದರ ಸಾಲುಗಳಿಗೆ ಪ್ರತ್ಯಕ್ಷ ಒಡ್ಡಿಕೊಂಡು, ಅಕ್ಷರದ ರಸಾಸ್ವಾದನೆಯನ್ನು ಮಾಡುವುದಿದೆಯಲ್ಲಾ, ಅದು ಪ್ರಾಯಶಃ ಡಿಜಿಟಲ್ ಸ್ವರೂಪದಲ್ಲಿ ದಕ್ಕುವುದಿಲ್ಲ. ಜತೆಗೆ, ಪುಸ್ತಕದ ಆ ಸಾಲುಗಳಲ್ಲಿರುವ ಭಾವನೆಗೆ ನಮ್ಮ ಮನವನ್ನು ಸರಿಹೊಂದಿಸಿಕೊಳ್ಳುತ್ತಾ ಸ್ವೀಕರಿಸುತ್ತಾ ಹೋದಂತೆ, ನಮಗೇ ಅರಿವಿಲ್ಲದಂತೆ ನಮ್ಮ ಕಲ್ಪನಾಶಕ್ತಿಯೂ ಗಣನೀಯವಾಗಿ ಗಾಢವಾಗುವುದಿದೆ.

ಇದನ್ನೂ ಓದಿ: Vishwavani Editorial: ಅಮಲಿನ ಅಡ್ಡಾ ಆಗದಿರಲಿ

ಈ ಪ್ರತ್ಯಕ್ಷ ‘ರಸಘಟ್ಟಿ’ಯು ಪ್ರಾಯಶಃ ಅನ್ಯ ಸ್ವರೂಪದ ಓದಿನಲ್ಲಿ ಅಲಭ್ಯವೆಂದೇ ಹೇಳಬೇಕು. ಕನ್ನಡ ಸಾರಸ್ವತ ಲೋಕವು ಓದುಗರ ಇಂಥ ಮನಃಪೂರ್ವಕ ತೊಡಗಿಸಿಕೊಳ್ಳುವಿಕೆಯಿಂದಲೇ ಪ್ರಸಿದ್ಧಿಯ ಪರಾಕಾಷ್ಠೆಗೆ ಏರಿದ ದಿನಗಳೂ ಇದ್ದವು. ಕುವೆಂಪು, ಬೇಂದ್ರೆ, ಕಾರಂತರು ಅಥವಾ ಅಡಿಗರ ಸಾಹಿತ್ಯ ಸೃಷ್ಟಿಗಳಿಗೆ ಮಾತ್ರವೇ ಇದು ಅನ್ವಯವಲ್ಲ; ಕಳೆದ ಕೆಲ ದಶಕಗಳಲ್ಲಿ ಯಂಡಮೂರಿ ವೀರೇಂದ್ರನಾಥರ ‘ತುಳಸೀದಳ’, ‘ತುಳಸಿ’, ‘ಕಪ್ಪಂಚು ಬಿಳಿಸೀರೆ’, ‘ದುಡ್ಡು ದುಡ್ಡು ದುಡ್ಡು’ ಮುಂತಾದ ಕೃತಿಗಳ ಓದುಗರಿಗೂ ಇಂಥ ರಸಘಟ್ಟಿಯ ಅನುಭೂತಿ ಆಗಿರುತ್ತದೆ.

ಅದು ಅಕ್ಷರದ ತಾಕತ್ತೂ ಹೌದು, ಪುಸ್ತಕದ ಓದುವಿಕೆಗೆ ನೇರವಾಗಿ ಒಡ್ಡಿಕೊಂಡಾಗಿನ ಸುಖವೂ ಹೌದು. ದಿನಕ್ಕೊಂದು ಮೌಲಿಕ ಪುಸ್ತಕವನ್ನು ಓದಲಾಗದಿದ್ದರೂ, ಕನಿಷ್ಠಪಕ್ಷ ತಿಂಗಳಿಗೊಂದು ಪುಸ್ತಕವಾದರೂ ಮನಕ್ಕೆ ಆಹಾರವಾದಲ್ಲಿ, ಅದು ಚಿತ್ತಸ್ವಾಸ್ಥ್ಯವನ್ನೂ ಕಲ್ಪನಾಶಕ್ತಿಯನ್ನೂ ವೃದ್ಧಿಸುವುದರಲ್ಲಿ ಅನುಮಾನವಿಲ್ಲ. ಒಮ್ಮೆ ಯತ್ನಿಸಿ ನೋಡಿ..