ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಬೀದಿಗಳನ್ನು ಸುರಕ್ಷಿತಗೊಳಿಸಿ

ಬೀದಿನಾಯಿಗಳ ಸಂಖ್ಯೆ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ನಾಯಿಕಡಿತ ಅಥವಾ ಜನರ ಮೇಲೆ ಆಕ್ರಮಣಕಾರಿ ದಾಳಿಯ ಘಟನೆಗಳು ಹೆಚ್ಚುತ್ತಿವೆ ಎಂದು ಕೋರ್ಟ್ ಗಮನಿಸಿದೆ. ಸಾರ್ವಜನಿಕ ಸುರಕ್ಷತೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಪಶುವೈದ್ಯರ ಮೂಲಕ ಮೌಲ್ಯ ಮಾಪನ ಕೈಗೊಳ್ಳಬೇಕು.

ಸಾರ್ವಜನಿಕ ಸ್ಥಳಗಳಿಂದ ಬೀದಿನಾಯಿಗಳ ಸ್ಥಳಾಂತರ, ಸಂತಾನ ಶಕ್ತಿಹರಣ ಕುರಿತು ತನ್ನ ಹಳೆಯ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದು, ಆಕ್ರಮಣಕಾರಿ ಬೀದಿನಾಯಿಗಳ ಹತ್ಯೆಗೆ ಅವಕಾಶ ನೀಡಿದೆ. ರೇಬೀಸ್ ಪೀಡಿತ ಶ್ವಾನಗಳಿಗೆ ದಯಾಮರಣ ಕಲ್ಪಿಸಲು ಅವಕಾಶ ನೀಡಿದೆ. ಸಾರ್ವಜನಿಕ ಸ್ಥಳಗಳಾದ ಶಾಲೆ ಕಾಲೇಜು ಆವರಣ, ಬಸ್ ನಿಲ್ದಾಣ, ರೈಲು ನಿಲ್ದಾಣ, ಆಸ್ಪತ್ರೆ ಆವರಣಗಳನ್ನು ಶ್ವಾನಮುಕ್ತಗೊಳಿಸುವಂತೆ ಸಲಹೆ ನೀಡಿದೆ.

ಬೀದಿನಾಯಿಗಳ ಸಂಖ್ಯೆ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ನಾಯಿಕಡಿತ ಅಥವಾ ಜನರ ಮೇಲೆ ಆಕ್ರಮಣಕಾರಿ ದಾಳಿಯ ಘಟನೆಗಳು ಹೆಚ್ಚುತ್ತಿವೆ ಎಂದು ಕೋರ್ಟ್ ಗಮನಿಸಿದೆ. ಸಾರ್ವ ಜನಿಕ ಸುರಕ್ಷತೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಪಶುವೈದ್ಯರ ಮೂಲಕ ಮೌಲ್ಯಮಾಪನ ಕೈಗೊಳ್ಳಬೇಕು.

ಇದನ್ನೂ ಓದಿ: Vishwavani Editorial: ಹೆರಿಟೇಜ್ ಕಟ್ಟಡಗಳು ಹೊಸದಾಗಲಿ

ರೋಗಪೀಡಿತ, ಆಕ್ರಮಣಕಾರಿ, ಅಪಾಯಕಾರಿ ಮನಸ್ಥಿತಿಯ ನಾಯಿಗಳನ್ನು ಗುರುತಿಸಬೇಕು. ಜನರಿಗೆ ಅಪಾಯ ಉಂಟುಮಾಡುವ ನಾಯಿಗಳಿಗೆ ದಯಾಮರಣ ಕಲ್ಪಿಸುವುದು ಸೇರಿದಂತೆ ಕಾನೂನು ಅನುಮತಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ. ಇದು ಬಹು ಅಗತ್ಯವಾದ ಕ್ರಮವಾಗಿತ್ತು.

ಬೀದಿ ನಾಯಿಗಳಿಂದ ದಾಳಿಗೆ ತುತ್ತಾದರೆ ಉಂಟಾಗುವ ಭೀಕರತೆಯನ್ನು ಹಾಗೆ ದಾಳಿಗೊಳಗಾದ ವರೇ ಬಲ್ಲರು. ಕರ್ನಾಟಕದಲ್ಲೂ ಇತರ ಕಡೆಗಳಲ್ಲೂ ಇಂಥ ಘಟನೆಗಳು ಸಾಕಷ್ಟು ಸಂಭವಿಸಿವೆ. ಅನೇಕ ಕಡೆಗಳಲ್ಲಿ ಬೀದಿ ನಾಯಿಗಳು ತೋಳಗಳ ಹಾಗೆ ಗುಂಪುಗೂಡಿ ಬೀದಿಯಲ್ಲಿ ಹೋಗುವ ಸಣ್ಣ ಮಕ್ಕಳ ಮೇಲೆ ಮುಗಿಬೀಳುತ್ತವೆ.

ಅನೇಕ ಬಾರಿ ದೊಡ್ಡವರಿಗೂ ಹೆದರದೆ ಅವರ ಮೇಲೆ ಎಗರಿಬೀಳುವುದು ದೊಡ್ಡವರ ಮುಂದೆಯೇ ಮಕ್ಕಳನ್ನು ಕಚ್ಚಿ ಗಾಯಗೊಳಿಸುವುದು ಮಾಡುತ್ತವೆ. ಇದರಿಂದ ಉಂಟಾಗುವ ರೇಬಿಸ್ ಅಪಾಯ ವನ್ನು ನಿರ್ಲಕ್ಷಿಸು ಸಾಧ್ಯವೇ ಇಲ್ಲ. ಶ್ವಾನಪ್ರೇಮಿಗಳು ಎಂದು ಕರೆದು ಕೊಳ್ಳುವ ಕೆಲವರು ಇಂಥ ನಾಯಿಗಳ ಪರ ಅಪಾಯಕಾರಿ ವಾದವನ್ನು ಮಂಡಿಸುತ್ತಾರೆ.

ಎಲ್ಲ ಬೀದಿನಾಯಿಗಳೂ ಅಪಾಯಕಾರಿ ಅಲ್ಲ; ಆದರೆ ಎಲ್ಲ ಬೀದಿನಾಯಿಗಳೂ ನಿರಪಾಯಕಾರಿ ಯೂ ಅಲ್ಲ. ಯಾವುದು ಅಪಾಯಕಾರಿ ಎಂಬುದನ್ನು ಸ್ಥಳೀಯರು, ಆ ನಾಯಿಗಳಿಂದ ಹಲ್ಲೆಗೆ ಒಳಗಾದವರು ಬಲ್ಲರು. ಪಶುವೈದ್ಯರು, ಸ್ಥಳೀಯಾಡಳಿತ ಇಂಥ ಸ್ಥಳೀಯರಿಂದ ಮಾಹಿತಿ ಪಡೆದು ಆಕ್ರಮಣಕಾರಿ ನಾಯಿಗಳನ್ನು ಗುರುತಿಸಬೇಕು. ಅವುಗಳನ್ನು ಬೀದಿಗಳಿಂದ ತೆರವು ಮಾಡಬೇಕು. ಹಾಗೇ ಬಿಟ್ಟರೆ ಈ ನಾಯಿಗಳು ತಮ್ಮ ಮುಂದಿನ ಪೀಳಿಗೆಗೂ ಈ ಆಕ್ರಮಣಕಾರಿ ಗುಣವನ್ನು ದಾಟಿಸುತ್ತವೆ. ನಮ್ಮ ಬೀದಿಗಳನ್ನು ನಾವು ಸುರಕ್ಷಿತಗೊಳಿಸಬೇಕಿದೆ.