ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಹಾದಿಬೀದಿಗೆ ಬಂದ ದೀದಿ ರಂಪ

ದಶಕಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಹರಡಿದ್ದ ಕಮ್ಯುನಿಸ್ಟ್ ಪಕ್ಷಗಳ ಹಿಂಸಾತ್ಮಕ ಆಡಳಿತ ವನ್ನು ಹೋರಾಟದಿಂದ ಮಣಿಸಿ ಗಾದಿ ಏರಿದವರು ದೀದಿ. ಅಂದು ಮಾವೋವಾದಿ ಪಕ್ಷಗಳನ್ನು ತ್ಯಜಿಸಿ ತೃಣಮೂಲ ಸೇರಿದವರೇ ಇಂದು ಬಿಜೆಪಿ ವಿರುದ್ಧ ಹಿಂಸೆಯಲ್ಲಿ ತೊಡಗಿದ್ದಾರೆ. ಅದಕ್ಕೆ ದೀದಿ ಕುಮ್ಮಕ್ಕು ನೀಡುತ್ತಿದ್ದಾರೆ. ವಾಸ್ತವ ಅರ್ಥ ಮಾಡಿಕೊಂಡು, ಹಿಂದೆ ಸರಿದು, ಹೊಸ ಶಾಸಕಾಂಗ ವ್ಯವಸ್ಥೆಗೆ ಹಾದಿ ಮಾಡಿಕೊಡುವಲ್ಲಿ ಎಲ್ಲರ ಹಿತವಿದೆ.

ಪಶ್ಚಿಮ ಬಂಗಾಳದ ರಾಜಕೀಯ ಅನಾಹುತಕಾರಿ ತಿರುವು ತಿರುಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತು ಸ್ಥಾನ ಕಳೆದುಕೊಂಡ ಮಮತಾ ಬ್ಯಾನರ್ಜಿ ತಾನು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವು ದಿಲ್ಲ ಎಂದು ಹಠ ಹಿಡಿದಿದ್ದಾರೆ. ಬೇಕಾದರೆ ರದ್ದುಗೊಳಿಸಿ, ರಾಷ್ಟ್ರಪತಿ ಆಡಳಿತ ಹಾಕಿ ಎಂದೆಲ್ಲ ಮೊಂಡು ವಾದ ಹೂಡಿದ್ದಾರೆ. ಯಥಾ ನಾಯಕಿ ತಥಾ ಕಾರ್ಯಕರ್ತರು ಎಂದು ಬೇರೆ ಹೇಳಬೇಕಿಲ್ಲ.

ಸೋಲಿನಿಂದ ರೊಚ್ಚಿಗೆದ್ದಿರುವ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಎಸಗುತ್ತಿರುವ ಹಿಂಸಾ ಚಾರ ಹಿಂದೆಂದೂ ಕಾಣದ ಮಟ್ಟವನ್ನೇ ಮುಟ್ಟಿದೆ. ಗೆದ್ದು ಸರಕಾರ ರಚಿಸಲಿದ್ದ ಬಿಜೆಪಿಯ ಮುಖಂಡ ಸುವೇಂದು ಅಧಿಕಾರಿ ಅವರ ಆಪ್ತನೇ ಗುಂಡಿಗೆ ಬಲಿಯಾಗಿದ್ದಾರೆ.

ದುಷ್ಕರ್ಮಿಗಳ ಗುರಿ ತಾನೇ ಆಗಿದ್ದೆ ಎಂದು ಸುವೇಂದು ಅವರು ಹೇಳಿದ್ದಾರೆ. ಫಲಿತಾಂಶ ಬಂದ ಬಳಿಕದ ಎರಡು ದಿನಗಳಲ್ಲಿ ಹಿಂಸಾಚಾರಕ್ಕೆ ಐದು ಮಂದಿ ಬಲಿಯಾಗಿದ್ದಾರೆ. ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರರ ಕಚೇರಿಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಚುನಾವಣಾ, ರಾಜಕೀಯ ಹಿಂಸಾಚಾರದಲ್ಲಿ ಪಶ್ಚಿಮ ಬಂಗಾಳ ಹಾಗೂ ಕೇರಳ ಮೊದಲೆರಡು ಸ್ಥಾನಗಳಲ್ಲಿವೆ ಎಂಬುದು ಎಲ್ಲರಿಗೂ ಗೊತ್ತಿದ್ದದ್ದೇ.

ಇದನ್ನೂ ಓದಿ: Vishwavani Editorial: ನೀರಾಟ ನರಳಾಟವಾಗದಿರಲಿ

ಈ ಸಮಸ್ಯೆಯ ಮೂಲ ಬರಿಯ ಕಾರ್ಯಕರ್ತರಲ್ಲಿ ಇರುವುದಲ್ಲ. ನಾಯಕ ರಲ್ಲಿಯೂ ಇದೆ. ಪೀಠ ಬಿಟ್ಟುಕೊಡಲಾರೆ ಎಂಬ ಮೊಂಡು ಹಠವನ್ನು ಬಿಟ್ಟುಕೊಡದ ಮಮತಾ ಇದಕ್ಕೆ ಮೂಲ ಕಾರಣ. ಈ ಹಿಂದೆಯೂ ಅವರು ಒಕ್ಕೂಟ ಸರ್ಕಾರದ ವಿರುದ್ಧ, ವಿರೋಧ ಪಕ್ಷಗಳ ವಿರುದ್ಧ ಸಂಘರ್ಷದ ಹಾದಿಯನ್ನೇ ತುಳಿದಿದ್ದಾರೆ.

ಎನ್‌ಆರ್‌ಸಿ, ಎಸ್ಐಆರ್, ಇಡಿ ಕಾರ್ಯಾಚರಣೆಗಳು, ನ್ಯಾಯಾಂಗ ನಿರ್ಧಾರಗಳು, ಕೇಂದ್ರದ ಯೋಜನೆಗಳಿಗೆ ಅಡೆ ತಡೆ ಒಡ್ಡುವುದು, ಮಹಿಳಾ ಹಕ್ಕು ಸಂಘಟನೆಯವರು ಬಂದಾಗ ಅವರಿಗೆ ಘೆರಾವ್ ಮಾಡಿಸುವುದು- ಹೀಗೆ ಅವರ ಅಪಖ್ಯಾತಿಗೆ ಎಲ್ಲೆಯೇ ಇಲ್ಲ. ಮಮತಾ ಈ ಹಿಂಸೆಯ ಹಾದಿಯನ್ನು ಬಿಡದೇ ಹೋದರೆ ಯಾರಿಗೂ ನೆಮ್ಮದಿಯಿಲ್ಲ.