ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಮರುಕಳಿಸದಿರಲಿ ಮಹಾಯುದ್ಧ

ಇರಾನಿನ ಯುರೇನಿಯಂ ಅಣುಸ್ಥಾವರಕ್ಕೆ ಇಸ್ರೇಲ್‌ನ ಕ್ಷಿಪಣಿ ಅಪ್ಪಳಿಸಿದುದರ ಪರಿಣಾಮ ವಾಗಿ ವಿಕಿರಣದ ಭೀತಿ ತಲೆದೋರಿದೆ. ಈ ಎಲ್ಲ ಬೆಳವಣಿಗೆಗಳು ಮೂರನೆಯ ಮಹಾಯುದ್ಧಕ್ಕೆ ನಾಂದಿ ಹಾಡಲಿವೆಯೇ ಎಂಬ ಭಯ ಸಹಜವಾಗಿಯೇ ಎಲ್ಲರನ್ನೂ ಕಾಡ ತೊಡಗಿದೆ. ಆದರೆ, ಯುದ್ಧದಲ್ಲಿ ವ್ಯಸ್ತವಾಗಿರುವ ಎರಡೂ ಬಣಗಳು ತಮ್ಮ ಹಠವನ್ನು ಬಿಡುತ್ತಿಲ್ಲ

ಎರಡನೇ ಮಹಾಯುದ್ಧದ ವೇಳೆ ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿ ಎಂಬ ಎರಡು ನಗರಗಳ ಮೇಲೆ ಅಣುಬಾಂಬ್ ದಾಳಿ ನಡೆದಿದ್ದು, ಅದರ ಮಾರಕತೆಗೆ ಒಂದಿಡೀ ಜಪಾನ್ ನಲುಗಿ ಹೋಗಿದ್ದು ಮತ್ತು ತರುವಾಯದ ವರ್ಷಗಳಲ್ಲಿ ಅಲ್ಲಿ ಅಂಗವೈಕಲ್ಯ ದೊಂದಿಗೇ ಮಕ್ಕಳು ಹುಟ್ಟುವಂತಾಗಿ, ಅದರೊಂದಿಗೇ ದಿನದೂಡುವಂತಾಗಿದ್ದು ಮುಂತಾದ ಘಟನೆಗಳು ಇತಿಹಾಸದಲ್ಲಿ ದಾಖಲಾಗಿವೆ.

ಅಣುಬಾಂಬ್ ಎಂಬ ಮಹಾರಾಕ್ಷಸನು ಹೊತ್ತು ತರುವ ಮಾರಕ ಪರಿಣಾಮಗಳನ್ನು ಈ ಘಟನೆಗಳು ಒತ್ತಿ ಹೇಳುತ್ತವೆ. ಈ ಭೀಕರತೆಯ ಅರಿವಿದ್ದರೂ ‘ಯುದ್ಧೋನ್ಮಾದಿ ಮಹಾನು ಭಾವರು’ ಹುಂಬತನವನ್ನು ಮೆರೆಯುತ್ತಿದ್ದಾರೆ. ದಿನಗಳೆದಂತೆ ತಾರಕಕ್ಕೆ ಏರುತ್ತಿರುವ ಮಧ್ಯಪ್ರಾಚ್ಯ ಯುದ್ಧವು ಆತಂಕದ ಸುದ್ದಿಗಳನ್ನು ಒಂದೊಂದಾಗಿ ರವಾನಿಸುತ್ತಿದೆ.

ಇದನ್ನೂ ಓದಿ: Vishwavani Editorial: ಇನ್ನೂ ಮೀನ-ಮೇಷ ಏಕೆ?

ಇರಾನಿನ ಯುರೇನಿಯಂ ಅಣುಸ್ಥಾವರಕ್ಕೆ ಇಸ್ರೇಲ್‌ನ ಕ್ಷಿಪಣಿ ಅಪ್ಪಳಿಸಿದುದರ ಪರಿಣಾಮ ವಾಗಿ ವಿಕಿರಣದ ಭೀತಿ ತಲೆದೋರಿದೆ. ಈ ಎಲ್ಲ ಬೆಳವಣಿಗೆಗಳು ಮೂರನೆಯ ಮಹಾ ಯುದ್ಧಕ್ಕೆ ನಾಂದಿ ಹಾಡಲಿವೆಯೇ ಎಂಬ ಭಯ ಸಹಜವಾಗಿಯೇ ಎಲ್ಲರನ್ನೂ ಕಾಡ ತೊಡಗಿದೆ. ಆದರೆ, ಯುದ್ಧದಲ್ಲಿ ವ್ಯಸ್ತವಾಗಿರುವ ಎರಡೂ ಬಣಗಳು ತಮ್ಮ ಹಠವನ್ನು ಬಿಡುತ್ತಿಲ್ಲ. ‘ನಮ್ಮಲ್ಲಿರುವ ಶಸ್ತ್ರಾಸ್ತ್ರಗಳ ಭಂಡಾರವು ಖಾಲಿಯಾದರೂ ಪರವಾಗಿಲ್ಲ, ನಿಮಗೊಂದು ಗತಿ ಕಾಣಿಸುತ್ತೇವೆ’ ಎನ್ನುವ ಮೂಲಕ ಪರಸ್ಪರರು ರಣಭೇರಿಯ ಮೊರೆತ ವನ್ನು ಮುಂದುವರಿಸಿರುವಂತೆ ತೋರುತ್ತಿದೆ.

‘ವಿಶ್ವಸಂಸ್ಥೆ’ ಎಂದು ಹೆಸರಿಟ್ಟುಕೊಂಡಿರುವ ಮಹಾನ್ ಸಂಘಟನೆಯು ತನ್ನ ಹೊಣೆ ಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಲಾಗದೆ ಈಗಾಗಲೇ ತನ್ನ ಅಸ್ತಿತ್ವಕ್ಕೇ ಅವಮಾನ ಮಾಡಿಕೊಂಡಿರುವುದರಿಂದ, ಜಗತ್ತಿನ ಮಿಕ್ಕ ದೇಶಗಳ ನಾಯಕರು ಈ ಮಧ್ಯಪ್ರಾಚ್ಯ ಯುದ್ಧದ ನಿಲುಗಡೆಗೆ ಒತ್ತಡ ಹೇರಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲವಾದಲ್ಲಿ ಮತ್ತಷ್ಟು ದೇಶಗಳು ಯಾವುದಾದರೊಂದು ಯುದ್ಧ ಪಾಳಯಕ್ಕೆ ಸೇರಿಕೊಳ್ಳುವಂಥ ಸಂದರ್ಭ ಸೃಷ್ಟಿಯಾಗಿ, ಕ್ರಮೇಣ ಅದು ವಿಶ್ವನಾಶಕ್ಕೂ ಕಾರಣ ವಾದೀತು. ಹಾಗಾಗ ದಿರಲಿ...