Vishwavani Editorial: ಪಿಡುಗುಗಳ ನಿವಾರಣೆಯಾಗಲಿ
ಆನ್‌ಲೈನ್ ಬೆಟ್ಟಿಂಗ್‌ನಂಥ ಚಟುವಟಿಕೆಗಳು, ಅವುಗಳನ್ನು ಉತ್ತೇಜಿಸುವಂಥ ಕಾರ್ಯಾಚರಣೆಗಳು ಮತ್ತು ಜಾಹೀರಾತು ಪ್ರಕಟಣೆಗಳನ್ನು ನಿಷೇಧಿಸುವ ಕಾಯಿದೆಯು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿ ದ್ದಾರೆ. ಈ ನಿಲುವು ಹಲವರಿಗೆ ಸಂತಸವನ್ನೂ, ನಿರಾಳತೆಯನ್ನೂ ಉಂಟು ಮಾಡಿದೆ ಎಂಬುದರಲ್ಲಿ ಎರಡು ಮಾತಿಲ್ಲ.

-

ಆನ್‌ಲೈನ್ ಬೆಟ್ಟಿಂಗ್‌ನಂಥ ಚಟುವಟಿಕೆಗಳು, ಅವುಗಳನ್ನು ಉತ್ತೇಜಿಸುವಂಥ ಕಾರ್ಯಾಚರಣೆಗಳು ಮತ್ತು ಜಾಹೀರಾತು ಪ್ರಕಟಣೆಗಳನ್ನು ನಿಷೇಧಿಸುವ ಕಾಯಿದೆಯು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ. ಈ ನಿಲುವು ಹಲವರಿಗೆ ಸಂತಸವನ್ನೂ, ನಿರಾಳತೆಯನ್ನೂ ಉಂಟು ಮಾಡಿದೆ ಎಂಬು ದರಲ್ಲಿ ಎರಡು ಮಾತಿಲ್ಲ.
ಕಾರಣ, ಕುಡಿತ, ಮಾದಕ ದ್ರವ್ಯಗಳ ಸೇವನೆ ಮುಂತಾದ ವ್ಯಸನಗಳು ನಮ್ಮ ಸಮಾಜದ ಸ್ವಾಸ್ಥ್ಯ ವನ್ನು, ಅದರಲ್ಲೂ ನಿರ್ದಿಷ್ಟವಾಗಿ ಯುವಶಕ್ತಿಯನ್ನು ಇನ್ನಿಲ್ಲದಂತೆ ಕೆಡಿಸುತ್ತಿದ್ದುದನ್ನು ಕಂಡು ಸಹೃದಯಿಗಳು ಆತಂಕವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದರು.
ಇಂಥ ವ್ಯಸನಗಳ ಪಟ್ಟಿಗೆ ಆನ್‌ಲೈನ್ ಬೆಟ್ಟಿಂಗ್ ಕೂಡ ಸೇರಿಕೊಂಡಾಗ ಈ ಆತಂಕ ಮತ್ತಷ್ಟು ತೀವ್ರವಾಗಿದ್ದು ಸುಳ್ಳಲ್ಲ. ಕಾರಣ, ಹೊಲ-ಗದ್ದೆಗಳನ್ನು, ಹಸು-ಕುರಿಗಳಂಥ ಜಾನುವಾರಗಳನ್ನು ಅಡವಿಟ್ಟು ಹಣವನ್ನು ತಂದು, ಅಷ್ಟನ್ನೂ ಆನ್‌ಲೈನ್ ಬೆಟ್ಟಿಂಗ್ ಕೂಪಕ್ಕೆ ಸುರಿದು, ಪಂಗನಾಮ ಹಾಕಿಸಿಕೊಂಡು ಹತಾಶೆಗೆ ಒಡ್ಡಿಕೊಂಡವರು ಸಾಕಷ್ಟಿದ್ದಾರೆ.
ಇದನ್ನೂ ಓದಿ: Vishwavani Editorial: ಅಪ್ಪಾ... ಐ ಹೇಟ್ ಯೂ ಪಾ!
ಕೆಲವರು ಬದುಕನ್ನೇ ಅಂತ್ಯಗೊಳಿಸಿಕೊಳ್ಳುವ ಮಟ್ಟಕ್ಕೆ ದುಡುಕಿದ್ದೂ ಇದೆ. ಇವೆಲ್ಲದರ ಅರಿವಿದ್ದೂ ಆಳುಗರು ಈ ಪಿಡುಗಿಗೆ ಅಂಕುಶವನ್ನು ಹಾಕುತ್ತಿಲ್ಲವೇಕೆ? ಎಂಬ ಅಸಮಾಧಾನಭರಿತ ಪ್ರಶ್ನೆಯನ್ನು ಜನರು ಕೇಳುತ್ತಲೇ ಇದ್ದರು. ಅದಕ್ಕೀಗ ಕಾಲ ಕೂಡಿಬಂದಿದೆ. ಆನ್‌ಲೈನ್ ಬೆಟ್ಟಿಂಗ್ ಚಟುವಟಿಕೆಗಳನ್ನು ನಿಷೇಧಿಸುವ ಕಾಯಿದೆಯು ‘ನಿಜಾರ್ಥದಲ್ಲಿ’ ಕಟ್ಟುನಿಟ್ಟಾಗಿ ಮತ್ತು ಪರಿಣಾಮ ಕಾರಿಯಾಗಿ ಜಾರಿಯಾಗಬೇಕಾದ್ದು ಸದ್ಯ ಎದುರಿರುವ ಸವಾಲು.
ಇದು ಕೇವಲ ಸರಕಾರದ ಕೆಲಸ ಎಂದುಕೊಂಡು ಸುಮ್ಮನೆ ಕೈಕಟ್ಟಿ ಕೂರದೆ, ಸಾರ್ವಜನಿಕರೂ ಈ ಉಪಕ್ರಮಕ್ಕೆ ಸರಕಾರದೊಂದಿಗೆ ಕೈಜೋಡಿಸಬೇಕಿದೆ. ಅದು ಈ ಕ್ಷಣದ ಅನಿವಾರ್ಯತೆಯೂ ಹೌದು. ಇದೇ ರೀತಿಯಲ್ಲಿ, ಜನರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಮತ್ತಷ್ಟು ಸಾಮಾಜಿಕ ಪಿಡುಗು ಗಳ ನಿವಾರಣೆಗೂ ಆಳುಗರು ಕಟಿಬದ್ಧರಾಗಲಿ ಎಂಬುದು ಜನರ ಆಶಯ ಮತ್ತು ನಿರೀಕ್ಷೆ.