Navaratri Jewel trend 2025: ನವರಾತ್ರಿ ಸೀಸನ್ನಲ್ಲಿ ಟ್ರೆಂಡಿಯಾಗಿರುವ ಜ್ಯುವೆಲರಿಗಳಿವು
Navaratri Jewel trend 2025: ನವರಾತ್ರಿ ಫೆಸ್ಟೀವ್ ಸೀಸನ್ನಲ್ಲಿ ಗ್ರ್ಯಾಂಡ್ ಸೀರೆ ಹಾಗೂ ಎಥ್ನಿಕ್ವೇರ್ಗಳೊಂದಿಗೆ ಧರಿಸಬಹುದಾದ ನಾನಾ ಬಗೆಯ ವೈವಿಧ್ಯಮಯ ಜ್ಯುವೆಲರಿಗಳು ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯವು ಟಾಪ್ ಲಿಸ್ಟ್ನಲ್ಲಿವೆ? ಈ ಕುರಿತಂತೆ ಇಲ್ಲಿದೆ ವರದಿ.
ಚಿತ್ರಕೃಪೆ: ಪಿಕ್ಸೆಲ್ -
ಶೀಲಾ ಸಿ ಶೆಟ್ಟಿ
Sep 20, 2025 10:34 AM
ನವರಾತ್ರಿಯ ಅಲಂಕಾರಕ್ಕೆ ಸಾಥ್ ನೀಡುವ ಬಗೆಬಗೆಯ ಟ್ರೆಂಡಿ ಜ್ಯುವೆಲರಿಗಳು ಈ ಫೆಸ್ಟೀವ್ ಸೀಸನ್ನಲ್ಲಿ ಟ್ರೆಂಡಿಯಾಗಿವೆ. ಹೌದು, ನವವರ್ಣಗಳ ಸೀರೆಗಳೊಂದಿಗೆ ಧರಿಸಲು ಬಂಗಾರದ ಆಭರಣಗಳು ಮಾತ್ರವಲ್ಲ, ದಾಂಡಿಯಾ, ಗರ್ಬಾ ಡಾನ್ಸ್ ಪಾರ್ಟಿಗಳಿಗೂ ಧರಿಸಬಹುದಾದ ಗ್ರ್ಯಾಂಡ್ ಹಾಗೂ ಹೆವ್ವಿ ಡಿಸೈನ್ನ ನಾನಾ ಬಗೆಯ ವೈವಿಧ್ಯಮಯ ಇಮಿಟೇಷನ್, ಆಕ್ಸಿಡೈಸ್ಡ್, ಸಿಲ್ವರ್ ಜ್ಯುವೆಲರಿಗಳು ಸೇರಿದಂತೆ ನಾನಾ ಬಗೆಯ ಆಭರಣಗಳು ಫೆಸ್ಟೀವ್ ಸೀಸನ್ ಜ್ಯುವೆಲರಿ ಲೋಕಕ್ಕೆ ಕಾಲಿಟ್ಟಿವೆ.
ಬಂಗಾರದ ದುಬಾರಿ ಆಭರಣಗಳು
ಬಂಗಾರದಲ್ಲಂತೂ ಲೆಕ್ಕವಿಲ್ಲದಷ್ಟೂ ಬಗೆಯ ಡಿಸೈನ್ ಆಭರಣಗಳು ಈ ಫೆಸ್ಟೀವ್ ಸೀಸನ್ಗೆ ಕಾಲಿಟ್ಟಿವೆ. ಗ್ರ್ಯಾಂಡ್ ಲುಕ್ ನೀಡುವಂತಹ ಆಂಟಿಕ್, ಟೆಂಪಲ್ ಡಿಸೈನ್ನ ಆಭರಣಗಳು ಲೈಟ್ವೇಟ್ನಲ್ಲೂ ಬಂದಿವೆ. ಇನ್ನು, ಶ್ರೀಮಂತ ಮಹಿಳೆಯರು ಧರಿಸುವ ಫ್ಯಾಷನ್ ಆಭರಣಗಳು ಕೂಡ ಹೊಸ ರೂಪದಲ್ಲಿ ಕಾಲಿಟ್ಟಿವೆ.
ಕೈಗೆಟಕುವ ಬೆಲೆಯ ಇಮಿಟೇಷನ್ ಜ್ಯುವೆಲರಿಗಳು
ಬಂಗಾರದ ಆಭರಣಗಳನ್ನು ಖರೀದಿಸಲು ಸಾಧ್ಯವಿಲ್ಲದಿದ್ದವರು ಹಾಗೂ ಪದೇ ಪದೇ ಮ್ಯಾಚಿಂಗ್ ಮಾಡಲು ಬಯಸುವಂತಹ ಮಹಿಳೆಯರಿಗಾಗಿ ಮಾರುಕಟ್ಟೆಯಲ್ಲಿ ಇಮಿಟೇಷನ್ ಜ್ಯುವೆಲರಿಗಳು ಕಾಲಿಟ್ಟಿವೆ. ಇವುಗಳಂತೂ ಥೇಟ್ ಬಂಗಾರದಂತೆಯೇ ಕಾಣಿಸುತ್ತವೆ.
ಸಿಲ್ವರ್ ಜ್ಯುವೆಲರಿಯ ಜಾದೂ
ಇತ್ತೀಚೆಗೆ ಚಿನ್ನದ ಆಭರಣಗಳನ್ನು ನಾಚಿಸುವಂತಹ ಸಿಲ್ವರ್ನ ಗೋಲ್ಡ್ ಕೋಟೇಡ್ ಜ್ಯುವೆಲರಿಗಳು ಮಾನಿನಿಯರ ಮನಗೆದ್ದಿವೆ. ಲೆಕ್ಕವಿಲ್ಲದಷ್ಟು ಡಿಸೈನ್ನವು ಬಂಗಾರದ ಆಭರಣಗಳ ಕಾಪಿ ಡಿಸೈನ್ಗಳಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಗಳು.
ಆಕರ್ಷಕ ಆಕ್ಸಿಡೈಸ್ಡ್ ಜ್ಯುವೆಲರಿ
ಊಹೆಗೂ ಮೀರಿದ ಲೆಕ್ಕವಿಲ್ಲದಷ್ಟು ಡಿಸೈನ್ನಲ್ಲಿ ದೊರಕುವ ಈ ಆಕ್ಸಿಡೈಸ್ಡ್ ಜ್ಯುವೆಲರಿಗಳು ದಾಂಡಿಯಾ, ಗರ್ಬಾ ಡಾನ್ಸ್ ಮಾಡುವವರನ್ನು ಸೆಳೆದಿವೆ. ಬ್ಲಾಕ್ ಹಾಗೂ ವೈಟ್ ಮೆಟಲ್ನಂತೆ ಕಾಣುವ ಈ ಆಭರಣಗಳು ನವರಾತ್ರಿಯ ಎಥ್ನಿಕ್ವೇರ್ಗಳಿಗೆ ಮ್ಯಾಚ್ ಆಗುವಂತಹ ಹೆವ್ವಿ ಡಿಸೈನ್ನಲ್ಲಿ ಬಂದಿವೆ ಎನ್ನುತ್ತಾರೆ ಮಾರಾಟಗಾರರು.