ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಮೇಕೆದಾಟು: ಅನುಮತಿ ಕೊಡಿ

ಒಂದೆರಡು ದಿನಗಳ ಮೊದಲು ಬೆಂಗಳೂರಿಗೆ ಆಗಮಿಸಿದ್ದ ಮೋದಿಯವರಲ್ಲಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೂಡ ಮೇಕೆದಾಟು ಯೋಜನೆಗೆ ಅನುಮತಿಗಾಗಿ ವೇದಿಕೆಯ ಮೇಲಿನಿಂದಲೇ ಆಗ್ರಹಿಸಿದ್ದರು. ಇದಾದ ಮರುದಿನವೇ ತಮಿಳುನಾಡು ತನ್ನ ರೂಢಿಯಂತೆ ಆಕ್ಷೇಪಣೆ ತೆಗೆದಿದೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ‘ಮೇಕೆದಾಟು ಕುಡಿಯುವ ನೀರು ಸರಬರಾಜು ಯೋಜನೆ’ ಅತ್ಯಂತ ಅಗತ್ಯವಾಗಿದೆ.

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಮೇಕೆದಾಟು ಯೋಜನೆಯನ್ನು ಕರ್ನಾಟಕ ಕೈಗೆತ್ತಿಕೊಂಡು ಮುಂದುವರಿದಿದ್ದು, ಅದಕ್ಕೆ ಅಡ್ಡಗಾಲು ಹಾಕುವ ಚಾಳಿಯನ್ನು ತಮಿಳುನಾಡು ಮುಂದುವರಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದು, ಆದ್ಯತೆಯಲ್ಲಿ ಅನುಮೋದನೆ ನೀಡಬೇಕೆಂದು ಕೋರಿದ್ದಾರೆ.

ಒಂದೆರಡು ದಿನಗಳ ಮೊದಲು ಬೆಂಗಳೂರಿಗೆ ಆಗಮಿಸಿದ್ದ ಮೋದಿಯವರಲ್ಲಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೂಡ ಮೇಕೆದಾಟು ಯೋಜನೆಗೆ ಅನುಮತಿಗಾಗಿ ವೇದಿಕೆಯ ಮೇಲಿನಿಂದಲೇ ಆಗ್ರಹಿಸಿದ್ದರು. ಇದಾದ ಮರುದಿನವೇ ತಮಿಳುನಾಡು ತನ್ನ ರೂಢಿಯಂತೆ ಆಕ್ಷೇಪಣೆ ತೆಗೆದಿದೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ‘ಮೇಕೆದಾಟು ಕುಡಿಯುವ ನೀರು ಸರಬರಾಜು ಯೋಜನೆ’ ಅತ್ಯಂತ ಅಗತ್ಯವಾಗಿದೆ.

ಇದನ್ನೂ ಓದಿ: Mekedatu Dam Project: ಮೇಕೆದಾಟು ಎರಡು ರಾಜ್ಯಗಳಿಗೂ ಅನುಕೂಲಕರ; ತಮಿಳುನಾಡು ರಾಜಕೀಯ ನಾಯಕರ ವಿರುದ್ಧ ಎಚ್‌ಡಿಕೆ ಕಿಡಿ

ಈ ಸಂಬಂಧ ಕೇಂದ್ರ ಜಲ ಆಯೋಗಕ್ಕೆ ಪರಿಷ್ಕೃತ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಲಾಗಿದ್ದು, ಇದಕ್ಕೆ ಅತ್ಯುನ್ನತ ಆದ್ಯತೆಯಲ್ಲಿ ಅನುಮೋದನೆ ನೀಡಬೇಕೆಂದು ದೇವೇಗೌಡರು ಕೋರಿರುವ ಪತ್ರದ ಒಕ್ಕಣೆಯನ್ನು ಕೇಂದ್ರ ಸರಕಾರ ಶೀಘ್ರವೇ ಗಮನಿಸಬೇಕಾದ್ದು ಅಗತ್ಯ. ಇದಲ್ಲದೆ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ನೀಡಲಾಗಿರುವ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಲೂ ದೇವೇಗೌಡರು ಒತ್ತಾಯಿಸಿದ್ದಾರೆ.

ನೀರಾವರಿ ವಿಚಾರಗಳಲ್ಲಿ ಅತ್ಯುನ್ನತ ಜ್ಞಾನ ಹೊಂದಿರುವ ಗೌಡರು ನೀಡಿರುವ ಸೂಚನೆಗಳು ಪರಿಪಕ್ವವಾಗಿವೆ. ಬರದ ಭೀಕರ ಪರಿಸ್ಥಿತಿಯಲ್ಲಿಯೂ, ಮುಂಬರುವ ಬೇಸಿಗೆಯಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಕಾಯ್ದಿರಿಸಬೇಕಾದ ಅಲ್ಪ ನೀರನ್ನೂ ತಮಿಳುನಾಡಿನ ಕೃಷಿ ಅಗತ್ಯಗಳಿಗಾಗಿ ಬಿಡುವಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಪದೇಪದೆ ನಿರ್ದೇಶನ ನೀಡುತ್ತಿರುವುದು ಆತಂಕಕಾರಿ.

ಕರ್ನಾಟಕಕ್ಕೆ ಸದಾ ಅನ್ಯಾಯವನ್ನೇ ಎಸಗಿರುವ ಪ್ರಾಧಿಕಾರ ಇದ್ದರೆಷ್ಟು ಬಿಟ್ಟರೆಷ್ಟು? ಕರ್ನಾಟಕ ಕ್ಕೆ ಹಂಚಿಕೆಯಾದ ನೀರನ್ನು ತನ್ನ ಹಿತಾಸಕ್ತಿಗೆ ಅನುಗುಣವಾಗಿ ಬಳಸುವ ಸ್ವಾತಂತ್ರ್ಯವಿದೆ. ಅದಕ್ಕೆ ಹಂಚಿಕೆಯಾದ ನೀರಿನ ಪ್ರಮಾಣ ಕಡಿಮೆಯಾಗದ ಹೊರತು ಬೇರೆ ಯಾವುದೇ ರಾಜ್ಯವು ಈ ವಿಷಯದಲ್ಲಿ ಹಸ್ತಕ್ಷೇಪಿಸುವ ಹಕ್ಕಿಲ್ಲ ಎಂಬ 2025ರ ನವೆಂಬರ್ 13ರ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

2007ರ ಅಂತಿಮ ತೀರ್ಪಿನಲ್ಲೂ ಕರ್ನಾಟಕಕ್ಕೆ ನ್ಯಾಯಸಮ್ಮತವಾಗಿ ಸಿಗಬೇಕಿದ್ದ ಪ್ರಮಾಣಕ್ಕಿಂತ ಕಡಿಮೆ ನೀರನ್ನು ಪ್ರಾಧಿಕಾರ ಹಂಚಿಕೆ ಮಾಡುವ ಮೂಲಕ ಸ್ಪಷ್ಟ ತಾರತಮ್ಯ ಮಾಡಿದೆ ಎಂಬ ದೇವೇಗೌಡರ ಅಸಮಾಧಾನ, ಕರ್ನಾಟಕದ ಜನತೆಯ ಅಸಮಾಧಾನವೇ ಹೌದು.