ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಅಂದು ‘ನೋವಾ’, ಮೊನ್ನೆ ‘ಹನುಕ್ಕಾ’

ಆಸ್ಟ್ರೇಲಿಯಾದ ಕರಾವಳಿ ಪ್ರದೇಶದಲ್ಲಿ ಆಚರಿಸಲಾಗುತ್ತಿದ್ದ ‘ಹನುಕ್ಕಾ’ ಹಬ್ಬದ ಸಂದರ್ಭವನ್ನು. ಆ ವೇಳೆ ವಾರಾಂತ್ಯ ರಜೆಯಲ್ಲಿ ವಿಹರಿಸುತ್ತಿದ್ದ ಯೆಹೂದಿ ಗಳ ಮೇಲೆ ಬೇಕಾಬಿಟ್ಟಿ ಗುಂಡಿನ ಮಳೆಗರೆದ ಉಗ್ರರು, ತಾವು ‘ರಕ್ತಬೀಜಾಸುರನ ಸಂತತಿ’ ಎಂಬು ದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ’ ಎಂದಿದ್ದಾರೆ ಪುರಂದರ ದಾಸರು. ಯಮದೂತರಿಗೆ ಸ್ವಲ್ಪವೂ ಕರುಣೆ ಇರುವುದಿಲ್ಲ, ಯಾವಾಗ ಬೇಕಿದ್ದರೂ ಅವರು ನಮ್ಮ ಪ್ರಾಣವನ್ನು ಹೊತ್ತೊಯ್ಯ ಬಹುದು. ಆದ್ದರಿಂದ ಬದುಕಿನ ಕ್ಷಣಿಕ ಸುಖಗಳಲ್ಲಿ ಸಮಯವನ್ನು ವ್ಯರ್ಥಮಾಡದೆ ಶ್ರೀಹರಿ ಯನ್ನು ಸ್ಮರಿಸಬೇಕು ಎಂಬುದು ಈ ಗೀತೆಯಲ್ಲಿ ಅಡಗಿರುವ ದಾಸರ ಸದಾಶಯ. ಈ ಸಾಲು ನೆನಪಾಗಲಿಕ್ಕೆ ಕಾರಣರಾದವರು ಮತ್ತದೇ ಉಗ್ರರು.

ಹೌದು, ಇಸ್ರೇಲ್‌ನಲ್ಲಿ ೨ ವರ್ಷಗಳ ಹಿಂದೆ ‘ನೋವಾ ಸಂಗೀತ ಉತ್ಸವ’ದಲ್ಲಿ ಖುಷಿಯಿಂದ ಪಾಲ್ಗೊಂಡಿದ್ದ ಜನರ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು ನೂರಾರು ಜನರನ್ನು ತರಿದು ಹಾಕಿದರು, ಸಾಕಷ್ಟು ಜನರನ್ನು ಒತ್ತೆಯಾಳಾಗಿಸಿಕೊಂಡರು. ಈ ಕೆಟ್ಟ ಕನಸು ಮನದಾಳದಲ್ಲಿನ್ನೂ ಹಸಿಹಸಿಯಾಗಿರುವಾಗಲೇ ಉಗ್ರರು ಮತ್ತೊಮ್ಮೆ ಮೊನ್ನೆ ಪೈಶಾಚಿಕ ಕೃತ್ಯವನ್ನು ಮೆರೆದಿದ್ದಾರೆ.

ಇದನ್ನೂ ಓದಿ: Vishwavani Editorial: ಎಡವಟ್ಟನಿಗೆ ಎದುರೇಟು

ಈ ಬಾರಿ ಅವರು ಆರಿಸಿಕೊಂಡಿದ್ದು ಆಸ್ಟ್ರೇಲಿಯಾದ ಕರಾವಳಿ ಪ್ರದೇಶದಲ್ಲಿ ಆಚರಿಸಲಾಗುತ್ತಿದ್ದ ‘ಹನುಕ್ಕಾ’ ಹಬ್ಬದ ಸಂದರ್ಭವನ್ನು. ಆ ವೇಳೆ ವಾರಾಂತ್ಯ ರಜೆಯಲ್ಲಿ ವಿಹರಿಸುತ್ತಿದ್ದ ಯೆಹೂದಿ ಗಳ ಮೇಲೆ ಬೇಕಾಬಿಟ್ಟಿ ಗುಂಡಿನ ಮಳೆಗರೆದ ಉಗ್ರರು, ತಾವು ‘ರಕ್ತಬೀಜಾಸುರನ ಸಂತತಿ’ ಎಂಬು ದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ತಮ್ಮ ಕುತ್ಸಿತ ಚಿಂತನೆಯನ್ನು ಕೈಗೂಡಿಸಿಕೊಳ್ಳಲು ಸಾರ್ವಜನಿಕ ಉತ್ಸವಗಳು, ಹಬ್ಬಗಳು, ಸಂಭ್ರಮಾಚರಣೆಗಳ ಸಂದರ್ಭವನ್ನೇ ಈ ದುರುಳರು ಆರಿಸಿಕೊಳ್ಳುತ್ತಿದ್ದಾರೆ; ಪ್ರಾಯಶಃ ಇದು ಅವರ ಕಾರ್ಯತಂತ್ರದ ವಿಕೃತ ಮುಖವೂ ಆಗಿದ್ದೀತು. ಉಗ್ರವಾದವನ್ನು ಮತ್ತು ಉಗ್ರವಾದಿಗಳನ್ನು ಬೇರುಸಮೇತ ಕಿತ್ತೊಗೆಯಲು ಒಂದಿಡೀ ಜಗವೇ ಏಕೆ ಸಂಕಲ್ಪಿಸಬೇಕಿದೆ ಎಂಬುದಕ್ಕೆ ಇಂಥ ಘಟನೆಗಳು ಪುರಾವೆ ಒದಗಿಸಬಲ್ಲವು. ಇಲ್ಲವಾದಲ್ಲಿ ಈ ರಕ್ತಬೀಜಾಸುರನ ಸಂತತಿಗಳು ವಿಶ್ವದ ಶಾಂತಿ-ನೆಮ್ಮದಿಗೇ ಕೊಳ್ಳಿ ಇಡುವ ದಿನಗಳು ದೂರವಿಲ್ಲ....