Vishwavani Editorial: ನ್ಯಾಕ್ ದಂಧೆಗೆ ಕಡಿವಾಣ ಬೀಳಲಿ
ನ್ಯಾಕ್ ಮಾನ್ಯತೆ ಪಡೆಯಲು ಶಿಕ್ಷಣ ಸಂಸ್ಥೆಗಳು ಅಡ್ಡದಾರಿ ಹಿಡಿದಿರುವುದು ಹೊಸದೇನೂ ಅಲ್ಲ. ಆದರೆ ಇದೇ ಮೊದಲ ಬಾರಿಗೆ ಸಿಬಿಐ ಈ ಸಂಬಂಧ ತಪಸಣಾ ತಂಡದ ಸದಸ್ಯರು ಮತ್ತು ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳನ್ನು ಬಂಧಿಸಿದೆ. ಗಾಯತ್ರಿ ಅವರು ದಾವಣಗೆರೆ ವಿವಿಯ ಮೈಕ್ರೋ ಬಯಾ ಲಜಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಮಾಜಿ ರಿಜಿಸ್ಟ್ರಾರ್ (ಆಡಳಿತ) ಆಗಿದ್ದವರು
![Vishwavani Editorial: ನ್ಯಾಕ್ ದಂಧೆಗೆ ಕಡಿವಾಣ ಬೀಳಲಿ](https://cdn-vishwavani-prod.hindverse.com/media/original_images/naac.jpg)
![Profile](https://vishwavani.news/static/img/user.png)
ಆಂಧ್ರಪ್ರದೇಶದ ಶಿಕ್ಷಣ ಸಂಸ್ಥೆಯೊಂದಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ ( ನ್ಯಾಕ್)ಯ ಉತ್ತಮ ಗ್ರೇಡ್ ನೀಡಲು ಲಂಚ ಪಡೆದ ಆರೋಪದಲ್ಲಿ ದಾವಣಗೆರೆ ವಿವಿಯ ಹಿರಿಯ ಪ್ರಾಧ್ಯಾಪಕಿ ಪ್ರೊ.ಗಾಯತ್ರಿ ದೇವರಾಜ್ ಅವರನ್ನು ಹೈದರಾಬಾದ್‌ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ನ್ಯಾಕ್ ಮಾನ್ಯತೆ ಪಡೆಯಲು ಶಿಕ್ಷಣ ಸಂಸ್ಥೆಗಳು ಅಡ್ಡದಾರಿ ಹಿಡಿದಿರುವುದು ಹೊಸದೇನೂ ಅಲ್ಲ. ಆದರೆ ಇದೇ ಮೊದಲ ಬಾರಿಗೆ ಸಿಬಿಐ ಈ ಸಂಬಂಧ ತಪಸಣಾ ತಂಡದ ಸದಸ್ಯರು ಮತ್ತು ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳನ್ನು ಬಂಧಿಸಿದೆ. ಗಾಯತ್ರಿ ಅವರು ದಾವಣಗೆರೆ ವಿವಿಯ ಮೈಕ್ರೋ ಬಯಾ ಲಜಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಮಾಜಿ ರಿಜಿಸ್ಟ್ರಾರ್ (ಆಡಳಿತ) ಆಗಿದ್ದವರು.
ಇದನ್ನೂ ಓದಿ:Vishwavani Editorial: ಆರ್ಥಿಕ ಶಿಸ್ತಿನ ಅರಿವು ಅಗತ್ಯ
ಇವರು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ ಏಳು ಸದಸ್ಯರ ತಪಾಸಣೆ ತಂಡದ ಭಾಗವಾಗಿದ್ದರು. ನಿರ್ದಿಷ್ಟವಾಗಿ ಅ++ ಮಾನ್ಯತೆ ನೀಡಲು ಇವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ. ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಕೊನೇರು ಲಕ್ಷ್ಮಯ್ಯ ಶಿಕ್ಷಣ ಪ್ರತಿಷ್ಠಾನದ (ಕೆಎಲ್‌ಇಎಎಫ್) ಕುಲಪತಿ ಮತ್ತು ಇಬ್ಬರು ಕಾರ್ಯನಿರ್ವಾಹಕರನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆ ಮೌಲ್ಯಗಳನ್ನು ಬಿತ್ತಬೇಕಾದ ಶಿಕ್ಷಣ ಸಂಸ್ಥೆಗಳು ಇತ್ತೀಚೆಗೆ ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದು ಹಣ ಕೊಟ್ಟು ಗ್ರೇಡ್ ಪಡೆದುಕೊಳ್ಳಲು ಮುಂದಾಗಿವೆ. ಶಿಕ್ಷಣ ಸಂಸ್ಥೆ ಗಳಲ್ಲಿ ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಉದ್ದೇಶದಿಂಂದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ನ್ಯಾಕ್ ಹೆಸರಿನ ಸ್ವಾಯತ್ತ ಮಂಡಳಿಯನ್ನು ಸ್ಥಾಪಿಸಿದೆ. ಆದರೆ ಇದು ಗುಣಮಟ್ಟವನ್ನು ಹೆಚ್ಚಿಸುವ ಬದಲು ಭ್ರಷ್ಟಾಚಾರ ಮತ್ತು ಶಿಕ್ಷಣ ದಂಧೆಗೆ ಕಾರಣವಾಗಿರುವುದು ದುರದೃಷ್ಟಕರ.
ಉತ್ತಮ ನ್ಯಾಕ್ ಗ್ರೇಡ್ ಪಡೆದ ಶಿಕ್ಷಣ ಸಂಸ್ಥೆಗಳು ಇದನ್ನೇ ಪ್ರಮುಖವಾಗಿ ಬಿಂಬಿಸಿ ವಿದ್ಯಾರ್ಥಿ ಗಳನ್ನು ಸುಲಿಗೆ ಮಾಡುತ್ತಿವೆ. ಕೆಲವು ಶಿಕ್ಷಣ ಸಂಸ್ಥೆಗಳು, ವಿವಿಗಳು ಯುಜಿಸಿ ನಿಗದಿಪಡಿಸಿದ ಮಾನ ದಂಡಗಳನ್ನು ಹೊಂದಿಲ್ಲದಿದ್ದರೂ, ನ್ಯಾಕ್ ಸದಸ್ಯರನ್ನು ಖರೀದಿ ಮಾಡಿ ಉತ್ತಮ ಗ್ರೇಡ್ ಪಡೆದು ಕೊಳ್ಳುತ್ತಿವೆ. ನ್ಯಾಕ್ ಸದಸ್ಯರು ಕಾಲೇಜು ಅಥವಾ ವಿವಿಗಳಿಗೆ ಭೇಟಿ ಕೊಟ್ಟಾಗ ಅವರಿಗೆ ರಾಜೋ ಪಚಾರ ನೀಡಬೇಕೆನ್ನುವುದು ಅಲಿಖಿತ ನಿಯಮವಾಗಿದೆ. ಇದಕ್ಕೆ ಒಪ್ಪದ ಕೆಲವು ಶಿಕ್ಷಣ ಸಂಸ್ಥೆ ಗಳಿಗೆ, ಗುಣಮಟ್ಟದ ಶಿಕ್ಷಣದ ಹಿನ್ನೆಲೆ ಹೊಂದಿದ್ದರೂ ಉತ್ತಮ ರ‍್ಯಾಂಕ್ ನೀಡಲು ಸತಾಯಿಸಿದ ಉದಾಹರಣೆಗಳಿವೆ.
ಉನ್ನತ ಶಿಕ್ಷಣದ ಹಾದಿ ತಪ್ಪಿಸಿದ ಈ ವ್ಯವಸ್ಥೆಯಲ್ಲಿ ಯುಜಿಸಿಯೇ ಮಾರ್ಪಾಡು ತರಬೇಕಿದೆ. ನಿಖಾ ಸಂಸ್ಥೆ ಕೆಎಲ್‌ಇಎಎಫ್ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸ ಬೇಕಾಗಿದೆ.