ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಸ್ವಾರ್ಥದಿಂದ ಮಸೂದೆಗೆ ಹಿನ್ನಡೆ

ಅಂತೂ ಇಂತೂ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ನೆಲಕಚ್ಚಿದೆ. ಒಂದು ಅತ್ಯುತ್ತಮವಾದ ಮಸೂದೆಯು ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿಯಿಂದಾಗಿ, ರಾಜಕೀಯ ಜಿದ್ದಾಜಿದ್ದಿ ಯಿಂದಾಗಿ ಅಂಗೀಕಾರಗೊಳ್ಳದೇ ಹೋಗಿದ್ದು ವಿಪರ್ಯಾಸ. ಇದರಿಂದ ಸಿಟ್ಟಿಗೆದ್ದಿರುವ ಬಿಜೆಪಿ ನಾಯಕರು ವಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ.

ಅಂತೂ ಇಂತೂ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ನೆಲಕಚ್ಚಿದೆ. ಒಂದು ಅತ್ಯುತ್ತಮವಾದ ಮಸೂದೆಯು ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿಯಿಂದಾಗಿ, ರಾಜಕೀಯ ಜಿದ್ದಾಜಿದ್ದಿಯಿಂದಾಗಿ ಅಂಗೀಕಾರಗೊಳ್ಳದೇ ಹೋಗಿದ್ದು ವಿಪರ್ಯಾಸ. ಇದರಿಂದ ಸಿಟ್ಟಿಗೆದ್ದಿರುವ ಬಿಜೆಪಿ ನಾಯಕರು ವಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ.

‘ವಿಪಕ್ಷಗಳಿಗೆ ಈ ದೇಶದ ಮಹಿಳೆಯರಿಗೆ ಸಮಾನತೆ ನೀಡಲು ಇಷ್ಟವಿಲ್ಲ’ ಎನ್ನುತ್ತಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ‘2023ರಲ್ಲೇ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ವಾಗಿದ್ದಾಗ ವಿಪಕ್ಷಗಳು ಬೆಂಬಲ ಕೊಟ್ಟಿದ್ದವು. 2034ರಲ್ಲಿ ಜಾರಿಯಾಗಬೇಕಿದ್ದ ಮಸೂದೆಯನ್ನು 2029ರ ಮಹಾ ಚುನಾವಣೆಗೂ ಮುನ್ನವೇ ಜಾರಿಗೊಳಿಸುವ ತರಾತುರಿಯನ್ನು ಎನ್‌ಡಿಎ ಸರಕಾರ ತೋರುತ್ತಿದೆ.

ಜತೆಗೆ, ಮಹಿಳಾ ಮೀಸಲಾತಿಗೆ ಲಿಂಕ್ ಆಗಿರುವ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೂ ಅಂಗೀಕಾರ ಪಡೆದು ಕ್ಷೇತ್ರ ವಿಂಗಡಣೆ ಮಾಡಿ 2029ರ ಚುನಾವಣೆಯಲ್ಲೇ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ. ಹಾಗಾಗಿ, ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಪರವಾಗಿ ಮತ ಹಾಕಿಲ್ಲ’ ಎಂದಿವೆ.

ಇದನ್ನೂ ಓದಿ: Women's Reservation Bill: ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಎಂದೂ ವಿರೋಧ ಮಾಡಿಲ್ಲ ಎಂದ ಸಿಎಂ

ಆದರೆ, ಇಲ್ಲಿ ತಿಳಿದುಕೊಳ್ಳಬೇಕಾದ ವಿಚಾರವೇನೆಂದರೆ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿಗೆ ಅಂಗೀಕಾರ ಸಿಗದೇ ಇದ್ದಿದ್ದು ಮಾತ್ರ ಎರಡೂ ಕಡಯ ಸ್ವಾರ್ಥ ರಾಜಕಾರಣದಿಂದ. ಇಂದು ಮೀಸ ಲಾತಿ, ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಸಂವಿಧಾನ ತಿದ್ದುಪಡಿ ಮಸೂದೆಗಳಿಗೆ ಅಂಗೀಕಾರ ಕೊಟ್ಟರೆ ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳಿಗೆ ಲಾಭವಾಗಿಬಿಡುತ್ತದೆ ಎಂಬ ಕಾರಣದಿಂದ ವಿಪಕ್ಷಗಳು ಮಸೂದೆಗೆ ಬೆಂಬಲ ನೀಡಲಿಲ್ಲ.

2034ರಲ್ಲಿ ಜಾರಿಯಾಗಬೇಕಿರುವ ಮಸೂದೆಯನ್ನು 2029ರ ಚುನಾವಣೆಗೂ ಮುನ್ನವೇ ಜಾರಿ ಗೊಳಿಸಿ ವಿಪಕ್ಷಗಳಿಗೆ ಸವಾಲು ಒಡ್ಡುವ ಹಠದಿಂದ ಎನ್‌ಡಿಎ ಹಿಂದೆ ಸರಿಯಲಿಲ್ಲ. ಒಟ್ಟಿನಲ್ಲಿ ರಾಜಕೀಯ ಜಿದ್ದಾಜಿದ್ದಿಯಿಂದಾಗಿ ಒಂದು ಉತ್ತಮವಾದ, ಆಧುನಿಕ ಭಾರತದ ವಿಕಸನಕ್ಕೆ ಅತ್ಯವಶ್ಯವಾಗಿ ಬೇಕಿರುವ ಮಸೂದೆಗೆ ಹಿನ್ನಡೆಯಾಯಿತು.

ಒಟ್ಟಾರೆಯಾಗಿ ನೋಡಿದರೆ, ಮಹಿಳಾ ಮೀಸಲು ಮಸೂದೆ ಎಂಬ ಮಹತ್ವದ ವಿಚಾರವೂ ರಾಜಕೀಯ ಪ್ರಚಾರದ ಸಾಧನವಾಗುತ್ತಿರುವುದು ವಿಷಾದನೀಯ. ಜನರ ಹಿತಾಸಕ್ತಿಯನ್ನು ಪ್ರಾಮುಖ್ಯತೆಯಾಗಿ ಪರಿಗಣಿಸಬೇಕಾದ ರಾಜಕೀಯ ಪಕ್ಷಗಳು, ಚುನಾವಣಾ ಲಾಭಕ್ಕಾಗಿ ಇಂತಹ ಸೂಕ್ಷ್ಮ ವಿಷಯಗಳನ್ನು ಬಳಸಿಕೊಳ್ಳುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆಯಾಗಿದೆ.