ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಯಶಸ್ವಿ ಬ್ರಿಕ್ಸ್ ಶೃಂಗಸಭೆ

ದೆಹಲಿಯಲ್ಲಿ ನಡೆದ ಬ್ರಿಕ್ಸ್ ದೇಶಗಳ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕ) ಶೃಂಗ ಸಮ್ಮೇಳನ-2026 ಹಲವು ಕಾರಣಗಳಿಂದ ಯಶಸ್ವಿಯಾಗಿದೆ. ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ ವಿಶಿಷ್ಟ ಗುರುತನ್ನು, ಅಸ್ಮಿತೆಯನ್ನು ಹೊಂದಿದೆ. ಆದರೆ ಇದು ಯಾರ ವಿರುದ್ಧವೂ ಅಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇದರ ಜೊತೆಗೇ ಅವರು, ಜಾಗತಿಕ ಭಯೋತ್ಪಾದನೆಯ ವಿರುದ್ಧ ಕಳವಳವನ್ನು ವ್ಯಕ್ತಪಡಿಸಿದ್ದು, ಬ್ರಿಕ್ಸ್ ದೇಶಗಳು ಈ ಕಳವಳಕ್ಕೆ ದನಿಗೂಡಿಸಿವೆ.

ದೆಹಲಿಯಲ್ಲಿ ನಡೆದ ಬ್ರಿಕ್ಸ್ ದೇಶಗಳ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕ) ಶೃಂಗ ಸಮ್ಮೇಳನ-2026 ಹಲವು ಕಾರಣಗಳಿಂದ ಯಶಸ್ವಿಯಾಗಿದೆ. ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ ವಿಶಿಷ್ಟ ಗುರುತನ್ನು, ಅಸ್ಮಿತೆಯನ್ನು ಹೊಂದಿದೆ. ಆದರೆ ಇದು ಯಾರ ವಿರುದ್ಧವೂ ಅಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇದರ ಜೊತೆಗೇ ಅವರು, ಜಾಗತಿಕ ಭಯೋತ್ಪಾದನೆ ಯ ವಿರುದ್ಧ ಕಳವಳವನ್ನು ವ್ಯಕ್ತಪಡಿಸಿದ್ದು, ಬ್ರಿಕ್ಸ್ ದೇಶಗಳು ಈ ಕಳವಳಕ್ಕೆ ದನಿಗೂಡಿಸಿವೆ.

ಚೀನದೊಂದಿಗೆ ಗಲ್ವಾನ್‌ನಲ್ಲಿ ನಡೆದ ಘರ್ಷಣೆಯ ಬಳಿಕ ತುಸು ಹಳಸಿದಂತಿದ್ದ ಉಭಯ ದೇಶಗಳ ಸಂಬಂಧ, ಬ್ರಿಕ್ಸ್ ಸಮಾವೇಶಕ್ಕೆ ಅಲ್ಲಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿ ನೀಡುವುದರ ಮೂಲಕ ರಾಜತಾಂತ್ರಿಕ ಮಾತುಕತೆಗಳ ಹೆಚ್ಚಳದ ಮೂಲಕ ಸುಗಮವಾಗುವ ಸೂಚನೆಯನ್ನು ತೋರಿಸಿ ರುವುದು ಆಶಾದಾಯಕ ಬೆಳವಣಿಗೆ. ಹಾಗೆಯೇ ಭಾರತ ಮೊದಲಿನಿಂದಲೂ ರಷ್ಯಾದ ಜೊತೆಗೆ ಸೌಹಾರ್ದಮಯ ಹಾಗೂ ವ್ಯೂಹಾತ್ಮಕ ಸಂಬಂಧಗಳನ್ನು ಕಾಪಾಡಿಕೊಂಡಿದ್ದು, ಈ ಸಮಾವೇಶ ದಲ್ಲಿ ಅಲ್ಲಿನ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾಗವಹಿಸುವ ಮೂಲಕ ಮುಂದಿನ ಮಜಲಿಗೆ ತಲುಪಿದೆ.

ಇದನ್ನೂ ಓದಿ: BRICS Gala Dinner: ಪ್ರಧಾನಿ ನರೇಂದ್ರ ಮೋದಿ ಔತಣಕೂಟಕ್ಕೆ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ ಗೈರು; ಕಾರಣವೇನು?

ಬ್ರೆಜಿಲ್, ದಕ್ಷಿಣ ಆಫ್ರಿಕ, ಇರಾನ್, ಮಲೇಷಿಯಾ, ಇಂಡೋನೇಷ್ಯಾದ ಅಧ್ಯಕ್ಷರು ಹಾಗೂ ಪ್ರಧಾನಿ ಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಭಾರತ ಈ ದೇಶಗಳೊಂದಿಗೂ ಗಾಢ ರಾಜತಾಂತ್ರಿಕ ನಂಟು ಹೊಂದಿದೆ. ಒಂದು ಕಡೆ, ಮಧ್ಯ ಏಷ್ಯಾದಲ್ಲಿ ‘ಇಸ್ಲಾಮಿಕ್ ನ್ಯಾಟೋ’ ರೂಪುಗೊಂಡಿರುವ ಹೊತ್ತಿನಲ್ಲೇ ಈ ಸಮಾವೇಶ ನಡೆದಿರುವುದು ಅರ್ಥಪೂರ್ಣ ಹಾಗೂ ಹೆಚ್ಚಿನ ಸಂದೇಶವನ್ನು ನೀಡುವಂಥದ್ದು. 2026ರಲ್ಲಿ ಭಾರತ ಬ್ರಿಕ್ಸ್ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಶೃಂಗಸಭೆಯನ್ನು ಆಯೋಜಿಸಿರುವುದು, ಮೋದಿ ಯುಗದಲ್ಲಿ ಭಾರತದ ಹೆಚ್ಚುತ್ತಿರುವ ಜಾಗತಿಕ ಪ್ರಭಾವಕ್ಕೆ ಮತ್ತೊಂದು ಉದಾಹರಣೆ.

ಆರಂಭದಲ್ಲಿ ನಾಲ್ಕು ರಾಷ್ಟ್ರಗಳಿಂದ ಪ್ರಾರಂಭವಾದ ವೇದಿಕೆ ಇಂದು 11 ಪೂರ್ಣ ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ವಿಸ್ತೃತ ಸಂಘಟನೆಯಾಗಿ ಬೆಳೆದಿದೆ. ಭಯೋತ್ಪಾದನೆ ವಿರುದ್ಧದ ಹೋರಾಟ, ಆರ್ಥಿಕ ಸಹಕಾರ, ಜಾಗತಿಕ ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಗಳು ಇದರ ಪ್ರಮುಖ ಆದ್ಯತೆಗಳಾಗಿವೆ. ಇಂದು ಬ್ರಿಕ್ಸ್ ಜಾಗತಿಕ ಜಿಡಿಪಿಯಲ್ಲಿ ಸುಮಾರು 40% ಶೇಕಡದಷ್ಟು ಪಾಲನ್ನು ಹೊಂದಿರುವ ಮಟ್ಟಕ್ಕೆ ಬೆಳೆದಿದೆ. ಭವಿಷ್ಯದ ಜಾಗತಿಕ ರಾಜಕೀಯ ದಲ್ಲಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳ ಸಮೂಹವಾಗಿದ್ದು, ಅದರಲ್ಲಿ ತನ್ನ ಪಾತ್ರವನ್ನು ಭಾರತ ಸಮರ್ಥವಾಗಿ ನಿಭಾಯಿಸಿದೆ.