ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ರೊನಾಲ್ಡೊ ಯುಗದ ಅಂತ್ಯ

ಪೋರ್ಚುಗೀಸ್‌ನ ಸ್ಟಾರ್ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅಂತರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಸಾರ್ವಕಾಲಿಕ ಪ್ರಮುಖ ಗೋಲ್‌ ಸ್ಕೋರರ್ ಮತ್ತು ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಂಡ ರೊನಾಲ್ಡೊ ನಿವೃತ್ತಿಯ ಮೂಲಕ, ಫುಟ್ಬಾಲ್‌ನ ಒಂದು ಯುಗ ಅಂತ್ಯವಾಗಿದೆ.

ಪೋರ್ಚುಗೀಸ್‌ನ ಸ್ಟಾರ್ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅಂತರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಸಾರ್ವಕಾಲಿಕ ಪ್ರಮುಖ ಗೋಲ್‌ ಸ್ಕೋರರ್ ಮತ್ತು ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಂಡ ರೊನಾಲ್ಡೊ ನಿವೃತ್ತಿಯ ಮೂಲಕ, ಫುಟ್ಬಾಲ್‌ನ ಒಂದು ಯುಗ ಅಂತ್ಯವಾಗಿದೆ.

ರೊನಾಲ್ಡೊ 234 ಪಂದ್ಯಗಳಲ್ಲಿ 146 ಗೋಲು ಗಳಿಸಿದ್ದಾರೆ. ಕ್ಲಬ್ ಫುಟ್ಬಾಲ್‌ನಲ್ಲಿ ಅವರು ಆಡುವು ದನ್ನು ಮುಂದುವರಿಸಬಹುದು. ಆದರೆ ಅಂತಾರಾಷ್ಟ್ರೀಯ ಪಂದ್ಯಾಟಗಳಲ್ಲಿ ಮಿಂಚುವ ಆ ಆಟ, ಫಿಫಾ ಪಂದ್ಯಗಳಲ್ಲಿ ಆ ಗೋಲ್ಡನ್ ಕಾಲುಗಳ ಕಾಲ್ಚಳಕ ಇನ್ನು ಕಾಣಸಿಗುವುದಿಲ್ಲ. ಈ ಮೂಲಕ ಫುಟ್ಬಾಲ್ ಜಗತ್ತನ್ನು ಎರಡು ದಶಕಗಳಿಗೂ ಹೆಚ್ಚು ಕಾಲ ಆಳಿದ ಇಬ್ಬರು ಮಹಾನ್ ಆಟಗಾರರು ರಾಷ್ಟ್ರೀಯ ತಂಡಗಳಿಗೆ ವಿದಾಯ ಹೇಳಿದಂತಾಗಿದೆ.

ಇದನ್ನೂ ಓದಿ: Vishwavani Editorial: ಟ್ರಂಪ್ ಹಿನ್ನಡೆಯ ಫಲ

ಕಳೆದ ಫಿಫಾ ಬಳಿಕ ಅರ್ಜೆಂಟಿನಾದ ಲಿಯೋನೆಲ್ ಮೆಸ್ಸಿ ಹಾಗೂ ಬ್ರೆಜಿಲ್‌ನ ಜೂ.ನೇಮಾರ್ ಕೂಡ ವಿದಾಯ ಹೇಳಿದ್ದರು. ಇದೀಗ ರೊನಾಲ್ಡೊ. ರೊನಾಲ್ಡೊಗೆ ಈಗ 41ರ ಹರೆಯ. ಅವರಲ್ಲಿ ಇನ್ನೂ ಸಾಕಷ್ಟು ಆಟ ಇದ್ದಿರಬಹುದು. ರೊನಾಲ್ಡೊ ಪೋರ್ಚುಗಲ್ ತಂಡದ ಜೆರ್ಸಿ ಸಂಖ್ಯೆ 7ಕ್ಕೆ ದಂತಕಥೆಯ ಸ್ಥಾನಮಾನ ತಂದುಕೊಟ್ಟವರು.

2016ರ ಯುರೋ ಕಪ್ ಮತ್ತು ಎರಡು ಯುಇಎಫ್ಎ ನೇಷನ್ಸ್ ಲೀಗ್ ಪ್ರಶಸ್ತಿಗಳನ್ನು ಗೆಲ್ಲಲು ಸಹಾಯ ಮಾಡಿದ್ದಾರೆ. ಆರು ವಿಶ್ವಕಪ್‌ಗಳಲ್ಲಿ ಆಡಿರುವ ರೊನಾಲ್ಡೊ ಹಿಂದಿನ ವಿಶ್ವಕಪ್‌ನಲ್ಲಿ ಪೋರ್ಚುಗಲ್ ಪರ, ಸ್ಪೇನ್ ವಿರುದ್ಧ ಆಡಿದ್ದರು. ತಂಡ 1-0 ಅಂತರದಿಂದ ಸೋತು ಕ್ವಾರ್ಟರ್ ಫೈನಲ್‌ನಿಂದ ಹೊರಬಿದ್ದಿತ್ತು. ಮಹಾನ್ ಪ್ರತಿಭಾವಂತ ಆಟಗಾರನಾಗಿದ್ದರೂ ತಂಡಕ್ಕೆ ವಿಶ್ವಕಪ್ ತಂದು ಕೊಡಲಾಗದೆ ನಿವೃತ್ತನಾಗುತ್ತಿರುವುದು ಅವರಿಗೂ ಅಭಿಮಾನಿಗಳಿಗೂ ಎದೆ ಭಾರದ ಸಂಗತಿ. ಆದರೂ ಆರು ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಏಕೈಕ ಆಟಗಾರ ಎಂಬ ಅಪರೂಪದ ದಾಖಲೆಯನ್ನು ರೊನಾಲ್ಡೊ ಹೊಂದಿದ್ದಾರೆ.

ಪ್ರಭಾವಶಾಲಿ ವೈಯಕ್ತಿಕ ಸಾಧನೆ, ಇದುವರೆಗೂ ಗಳಿಸಿದ 980 ಗೋಲುಗಳ ಬೃಹತ್ ಮೊತ್ತ ಅವರ ಖಾತೆಯಲ್ಲಿದೆ ಹಾಗೂ ಫುಟ್ಬಾಲ್ ಪ್ರಿಯರ ಹೃದಯದಲ್ಲಿದೆ. 1000 ಗೋಲುಗಳನ್ನು ಗಳಿಸಲಿ ಎಂದು ಹಾರೈಸೋಣ.