ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ನ್ಯಾಯಾಂಗ ವರದಿಗಾರಿಕೆಯ ಸೂಕ್ಷ್ಮ

ನ್ಯಾಯಾಲಯದ ಅನುಮತಿ ಪಡೆಯದೇ ಕಲಾಪದ ಆಡಿಯೋ ಅಥವಾ ವಿಡಿಯೋ ರೆಕಾರ್ಡಿಂಗ್‌ ಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಮುಖ್ಯವಾಗಿ ಕಲಾಪ ವೇಳೆ ನ್ಯಾಯಮೂರ್ತಿಗಳು ನೀಡುವ ಹೇಳಿಕೆಗಳು, ವಾದ-ಪ್ರತಿವಾದ ಹಾಗೂ ಪ್ರಕರಣದ ಬೆಳವಣಿಗೆಗಳಲ್ಲಿ ಆಯ್ದ ಭಾಗಗಳನ್ನು ಮಾತ್ರ ಎಡಿಟ್ ಮಾಡಿ ಜಾಲತಾಣಗಳಲ್ಲಿ ಹಾಕಲಾಗುತ್ತಿತ್ತು.

ನ್ಯಾಯಾಲಯ ಕಲಾಪ ವರದಿಗಾರಿಕೆ ಕುರಿತು ಸುಪ್ರೀಂ ಕೋರ್ಟ್ ಗುರುವಾರ ಸ್ಪಷ್ಟ ಮಾರ್ಗಸೂಚಿ ನೀಡಿದೆ. ಕೋರ್ಟ್ ಕಲಾಪಗಳನ್ನು ವರದಿ ಮಾಡಬಹುದು, ಆದರೆ, ಆಡಿಯೊ-ವಿಡಿಯೊ ಕ್ಲಿಪ್‌ಗಳ ಬಳಕೆಯನ್ನು ನಿರ್ಬಂಧಿಸಿದೆ. ನ್ಯಾಯಾಲಯದಲ್ಲಿನ ನಿತ್ಯದ ಕಲಾಪಗಳನ್ನು ಮಾಧ್ಯಮಗಳು ಯಥಾರೀತಿ ವರದಿ ಪ್ರಕಟಿಸಲು ಯಾವುದೇ ಅಡ್ಡಿಯಿಲ್ಲ. ಈ ಮೊದಲೂ ಜವಾಬ್ದಾರಿಯುತ ಮುದ್ರಣ ಮಾಧ್ಯಮಗಳು ಇದನ್ನು ದೋಷರಹಿತವಾಗಿ ಮಾಡುತ್ತಿದ್ದವು. ಆದರೆ ಸಾಮಾಜಿಕ ಜಾಲ ತಾಣಗಳ ಆಧಿಕ್ಯದಿಂದ ಇದು ಬೇರೆ ದಾರಿ ಹಿಡಿದಿತ್ತು.

ನ್ಯಾಯಾಲಯದ ಅನುಮತಿ ಪಡೆಯದೇ ಕಲಾಪದ ಆಡಿಯೋ ಅಥವಾ ವಿಡಿಯೋ ರೆಕಾರ್ಡಿಂಗ್‌ ಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಮುಖ್ಯವಾಗಿ ಕಲಾಪ ವೇಳೆ ನ್ಯಾಯಮೂರ್ತಿಗಳು ನೀಡುವ ಹೇಳಿಕೆಗಳು, ವಾದ-ಪ್ರತಿವಾದ ಹಾಗೂ ಪ್ರಕರಣದ ಬೆಳವಣಿಗೆಗಳಲ್ಲಿ ಆಯ್ದ ಭಾಗಗಳನ್ನು ಮಾತ್ರ ಎಡಿಟ್ ಮಾಡಿ ಜಾಲತಾಣಗಳಲ್ಲಿ ಹಾಕಲಾಗುತ್ತಿತ್ತು.

ಇದನ್ನೂ ಓದಿ: Vishwavani Editorial: ಮಹಿಳೆಯ ಅಪಮಾನ ಸಲ್ಲದು

ಇದು ಹೆಚ್ಚಿನ ಬಾರಿ ತಪ್ಪು ಅರ್ಥ ಕೊಡುತ್ತಿದ್ದವು. ಕಲಾಪದಲ್ಲಿ ಕೆಲವೊಮ್ಮೆ ಸೂಕ್ಷ ವೈಯಕ್ತಿಕ ಮಾಹಿತಿ, ಗೌಪ್ಯ ದಾಖಲೆಗಳು ಅಥವಾ ಸಂದರ್ಭದೊಂದಿಗೆ ಮಾತ್ರ ಅರ್ಥವಾಗುವ ಹೇಳಿಕೆಗಳು ಇರಬಹುದು. ಇದರ ವಿವೇಚನೆ, ವರದಿ ಮಾಡುವವರಿಗೆ ಇಲ್ಲದೆ ಹೋದಾಗ ಅನರ್ಥಗಳು ಸಂಭವಿಸುತ್ತವೆ. ಈ ತೀರ್ಪು ನ್ಯಾಯಾಂಗ ವರದಿಗಾರಿಕೆಗೆ ಹೊಣೆಗಾರಿಕೆಯನ್ನೂ ಘನತೆಯನ್ನೂ ತಂದುಕೊಡುವುದು ಮಾತ್ರವಲ್ಲ, ಇತರ ವರದಿಗಾರಿಕೆಗೂ ಇದು ಅನ್ವಯವಾಗುವ ಸಂಗತಿ.

ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೊಣೆಯಿಲ್ಲದೇ ಎಲ್ಲವನ್ನೂ ಹಂಚಿಕೊಳ್ಳುವ, ಪ್ರಚೋದನಕಾರಿ ಥಂಬ್‌ನೈಲ್‌ಗಳನ್ನು ಕೊಟ್ಟು ಪ್ರಕಟಿಸುವ ಚಾಳಿUಗೆ ಇದು ಅಂತ್ಯ ಹಾಡಲಿ. ಇದೇ ವೇಳೆಗೆ, ಇಂಥ ನಿಯಂತ್ರಣವಿಲ್ಲದ ಕಲಾಪ ವರದಿಗಾರಿಕೆಯ ಪರಿಣಾಮ ಕೆಲವು ನ್ಯಾಯಾ ಧೀಶರು ಕಡಿವಾಣವಿಲ್ಲದೆ ತಮ್ಮ ಮಾತುಗಳನ್ನು ಹರಿಬಿಡುವ ಚಾಳಿಯನ್ನೂ ರೂಢಿಸಿಕೊಂಡಿ ದ್ದರು ಎನ್ನುವ ಆರೋಪವಿದೆ. ಇದಕ್ಕೂ ತಡೆ ಬೀಳಬಹುದು. ಆದರೂ, ಈಗಿನದು ಡಿಜಿಟಲ್ ಯುಗ. ಡಿಜಿಟಲ್ ಸಾಕ್ಷ್ಯಗಳು ಪ್ರಮುಖ ಸಾಕ್ಷಿಗಳಾಗಿ ಅಂಗೀಕರಿಸಲ್ಪಡುತ್ತಿವೆ ಎಂಬುದನ್ನು ನ್ಯಾಯಾಂಗ ಮರೆಯುವಂತಿಲ್ಲ.

ಅನೇಕ ಪ್ರಕರಣಗಳಲ್ಲಿ, ಡಿಜಿಟಲ್ ಸಾಕ್ಷ್ಯಗಳಿಂದಾಗಿಯೇ ನ್ಯಾಯಾಧೀಶರು ಮಾಡಿದ ತಪ್ಪುಗಳು ಕೂಡ ಬಯಲಾಗಿವೆ. ಡಿಜಿಟಲ್ ರೆಕಾರ್ಡಿಂಗ್ ಇದ್ದಾಗ ಹೆಚ್ಚಿನ ಹೊಣೆಗಾರಿಕೆಯಿಂದ ವಕೀಲರು, ಕಕ್ಷಿದಾರರು ಸೇರಿದಂತೆ ಎಲ್ಲರೂ ನಡೆದುಕೊಳ್ಳಲು ಸಾಧ್ಯವಿದೆ ಎನ್ನಬಹುದು.

ನೋಡುಗರು ಕೂಡ ಈ ಕಲಾಪಗಳ ವೀಕ್ಷಣೆಯಿಂದ ಕಾನೂನು, ನ್ಯಾಯಾಂಗ ಪ್ರಕ್ರಿಯೆಗಳ ಅರಿವು ಪಡೆದುಕೊಳ್ಳುತ್ತಿದ್ದರು. ಈ ಸಂಗತಿಯನ್ನೂ ಪರಿಗಣಿಸಬೇಕಿದೆ. ನೆಗಡಿಯಾಗಿದೆ ಎಂದು ಮೂಗು ಕೊಯ್ಯುವಂತಿಲ್ಲ ಅಲ್ಲವೇ. ಭಾರತೀಯ ನ್ಯಾಯಾಂಗ ಕೂಡ ಇನ್ನಷ್ಟು ‘ಟೆಕ್ ಸ್ನೇಹಿ’ಯಾಗಬೇಕಿದೆ.