ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಆನ್‌ಲೈನ್ ಆಟಕ್ಕೆ ಲಗಾಮು ಸ್ವಾಗತಾರ್ಹ

ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಬಳಸುವವರ ಸಂಖ್ಯೆ 50 ಕೋಟಿಯಷ್ಟಿದ್ದು, ಅವರಲ್ಲಿ ಅರ್ಧ ಕ್ಕರ್ಧ ಮಂದಿ ಅದನ್ನು ಚಟವಾಗಿಸಿಕೊಂಡಿದ್ದಾರೆ. ಅದರಿಂದ ಹಲವಾರು ಮಂದಿ ಆತ್ಮಹತ್ಯೆ ಮಾಡಿ ಕೊಂಡಿದ್ದು, ಹಲವಾರು ಕುಟುಂಬಗಳು ಬೀದಿ ಪಾಲಾಗಿವೆ. ಅನಿಯಂತ್ರಿತವಾಗಿರುವ ಈ ಆನ್‌ಲೈನ್ ಗೇಮಿಂಗ್‌ಗಳಿಂದ ಭಾರತದಲ್ಲಿ ವರ್ಷಕ್ಕೆ ಏನಿಲ್ಲವೆಂದರೂ 10000 ಕೋಟಿ ರು.ಗಳು ಸ್ಕ್ಯಾಮರ್‌ಗಳ ಪಾಲಾಗುತ್ತಿದೆ!

ಇದೇ ಮೇ 1ರಿಂದ ಆನ್‌ಲೈನ್ ಗೇಮಿಂಗ್ ನಿಯಂತ್ರಣಕ್ಕಾಗಿ ಹೊಸ ಕಾಯ್ದೆ ಜಾರಿಯಾಗಿದೆ. ಆನ್‌ ಲೈನ್ ಗೇಮ್‌ಗಳ ಹೆಸರಿನಲ್ಲಿ ಆಗುತ್ತಿದ್ದ ದಂಧೆ, ಅವಾಂತರಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಲಾಗಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ಇಂದಿನ ಯುವಜನತೆ ಈ ಆನ್‌ಲೈನ್ ಗೇಮಿಂಗ್ ನಶೆಗೆ ಒಳಗಾಗಿದ್ದಾರೆ.

ಆರಂಭದಲ್ಲಿ ಇದೊಂದು ಹವ್ಯಾಸವಾಗಿ, ಇಂದಿನ ಯುವಜನರು, ವಿದ್ಯಾರ್ಥಿಗಳ ಗೀಳಾಗಿ ಆವರಿಸಿ, ಅವರ ವೈಯಕ್ತಿಕ ಜೀವನಗಳನ್ನು ಹಾಳುಗೆಡವುವಷ್ಟರ ಮಟ್ಟಕ್ಕೆ ಬೆಳೆದಿದ್ದು ವಿಪರ್ಯಾಸ. ಇದಕ್ಕೆ ಇತಿಶ್ರೀ ಹಾಡಲೆಂದೇ ಈ ನಿಬಂಧನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಈ ಗೇಮ್‌ಗಳನ್ನು ಬಳಸುವವರ ಕೆವೈಸಿ ಪರಿಶೀಲನೆ, ಠೇವಣಿಗಳನ್ನು ಮಿತಿಗೊಳಿಸುವುದು, ‘ಇ-ಸ್ಪೋರ್ಟ್ಸ್’, ‘ಸ್ಕಿಲ್ ಗೇಮ್’ ಎಂದು ವರ್ಗೀಕರಿಸಲ್ಪಟ್ಟಿರುವ ಗೇಮಿಂಗ್‌ಗಳಿಗೆ ಮಾತ್ರ ಅವಕಾಶ ನೀಡಿ, ಬೆಟ್ಟಿಂಗ್ ಉತ್ತೇಜಿಸುವ, ಕ್ಯಾಸಿನೊ (ಜೂಜು) ಆಪ್‌ಗಳನ್ನು ನಿಷೇಧಿಸಿರುವುದು, 18 ವರ್ಷದೊಳಗಿನವರಿಗೆ ಸೀಮಿತ ಅವಽಗೆ ಮಾತ್ರ ಆಡಲು ಅವಕಾಶ ನೀಡಿ ವಿದ್ಯಾರ್ಥಿಗಳನ್ನು ಇದರಿಂದ ದೂರವಿಟ್ಟಿರು ವಂಥ ಕ್ರಮಗಳು ಅತ್ಯವಶ್ಯಕವಾಗಿ ಆಗಬೇಕಿದ್ದ ಕೆಲಸ.

ಇದನ್ನೂ ಓದಿ: ಆನ್‌ಲೈನ್ ಮೀಟಿಂಗ್‌ನಲ್ಲಿ ಮ್ಯಾನೇಜರ್‌ಗೆ ಬೈದ ಉದ್ಯೋಗಿ: ಮೈಕ್ ಆಫ್ ಮಾಡದೇ ಪೇಚಿಗೆ ಒಳಗಾದ ವ್ಯಕ್ತಿ!

ನೀತಿ ಆಯೋಗದ ದತ್ತಾಂಶದ ಪ್ರಕಾರ, ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಬಳಸುವವರ ಸಂಖ್ಯೆ 50 ಕೋಟಿಯಷ್ಟಿದ್ದು, ಅವರಲ್ಲಿ ಅರ್ಧಕ್ಕರ್ಧ ಮಂದಿ ಅದನ್ನು ಚಟವಾಗಿಸಿಕೊಂಡಿದ್ದಾರೆ. ಅದರಿಂದ ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಹಲವಾರು ಕುಟುಂಬಗಳು ಬೀದಿ ಪಾಲಾಗಿವೆ. ಅನಿಯಂತ್ರಿತವಾಗಿರುವ ಈ ಆನ್‌ಲೈನ್ ಗೇಮಿಂಗ್‌ಗಳಿಂದ ಭಾರತದಲ್ಲಿ ವರ್ಷಕ್ಕೆ ಏನಿಲ್ಲವೆಂದರೂ 10000 ಕೋಟಿ ರು.ಗಳು ಸ್ಕ್ಯಾಮರ್‌ಗಳ ಪಾಲಾಗುತ್ತಿದೆ!

ಬೆಂಗಳೂರಿನಲ್ಲೇ ಸುಮಾರು 200ಕ್ಕೂ ಹೆಚ್ಚು ಆನ್‌ಲೈನ್ ಗೇಮಿಂಗ್ ಕಂಪನಿಗಳಿವೆ. ಕೇಂದ್ರದ ಈ ಹೊಸ ನಿರ್ಬಂಧದಿಂದ ಸಾವಿರಾರು ಕೋಟಿ ರೂ. ಹೂಡಿಕೆಯು ಭಾರತದಿಂದ ಆಚೆ ಹೋಗಬಹುದು. ಹೋಗಲಿ.. ನಮ್ಮ ಮಕ್ಕಳ, ಯುವಜನತೆಯ ಭವಿಷ್ಯದ ಮುಂದೆ ಅದೇನೂ ಅಲ್ಲ. ಒಟ್ಟಾರೆಯಾಗಿ, ಗೇಮಿಂಗ್ ನಿಯಂತ್ರಣ ಆಗಲೇಬೇಕಾದಂಥ ಕ್ರಮ ಈಗ ಜಾರಿಯಾಗಿದೆ. ಸಮಾಜದ ಹಿತದೃಷ್ಟಿಯಿಂದ ಅದು ಸ್ವಾಗತಾರ್ಹ.