ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಮತ್ತೆ ಕೈಕುಲುಕಿದ ಕುಡಿಗಳು

ಸೋದರ ಸಂಬಂಧಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆಯವರು ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ಒಗ್ಗಟ್ಟು ಪ್ರದರ್ಶಿಸಿರುವುದು ಹಲವರ ಹುಬ್ಬೇರಿಸಿದೆ. ರಾಜಕೀಯ ಎಂದ ಮೇಲೆ ಇಂಥ ಬೆಳವಣಿಗೆಗಳು ಸಹಜ ಎನ್ನುವಷ್ಟರ ಮಟ್ಟಿಗೆ ರಾಜಕೀಯಾಸಕ್ತರೂ ಈ ಮರುಕೂಡಿಕೆಯನ್ನು ಸ್ವೀಕರಿಸಿದ್ದಾರೆ ಎನ್ನಿ.

ಮತ್ತೆ ಕೈಕುಲುಕಿದ ಕುಡಿಗಳು

Profile Ashok Nayak Jul 7, 2025 10:42 AM

ಮತ್ತೆ ಕೈಕುಲುಕಿದ ಕುಡಿಗಳು ‘ರಾಜಕೀಯ ರಂಗದಲ್ಲಿ ಯಾರೂ ಶಾಶ್ವತ ಮಿತ್ರರಿಲ್ಲ, ಶಾಶ್ವತ ಶತ್ರು ಗಳೂ ಇಲ್ಲ’ ಎಂಬುದು ನಮ್ಮ ನಡುವೆ ಚಾಲ್ತಿಯಲ್ಲಿರುವ ಮಾತು. ಇದಕ್ಕೆ ಪುಷ್ಟಿ ನೀಡುವಂಥ ಬೆಳವಣಿಗೆಗಳು ಕಾಲಾನುಕಾಲಕ್ಕೆ ನಡೆಯುತ್ತಲೇ ಇರುತ್ತವೆ. ಈ ಪೈಕಿ ಇತ್ತೀಚಿನ ದಿನಗಳಲ್ಲಿ ಎದ್ದು ಕಾಣುವಂಥದ್ದು ಮಹಾರಾಷ್ಟ್ರದಲ್ಲಾಗಿರುವ ಬೆಳವಣಿಗೆ. ಒಂದು ಕಾಲಕ್ಕೆ ಜತೆಯಾಗಿದ್ದ, ತರುವಾ ಯದಲ್ಲಿ ಪರಸ್ಪರ ಕತ್ತಿ ಮಸೆಯುತ್ತಿದ್ದ ಮೂಲ ಶಿವಸೇನೆ ಪಕ್ಷದ ಕುಡಿಗಳು ಈಗ ಅಸಮಾಧಾನ ವನ್ನು ಮರೆತು ಪರಸ್ಪರರ ಹೆಗಲ ಮೇಲೆ ಕೈಹಾಕಿವೆ.

ಸೋದರ ಸಂಬಂಧಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆಯವರು ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ಒಗ್ಗಟ್ಟು ಪ್ರದರ್ಶಿಸಿರುವುದು ಹಲವರ ಹುಬ್ಬೇರಿಸಿದೆ. ರಾಜಕೀಯ ಎಂದ ಮೇಲೆ ಇಂಥ ಬೆಳವಣಿಗೆಗಳು ಸಹಜ ಎನ್ನುವಷ್ಟರ ಮಟ್ಟಿಗೆ ರಾಜಕೀಯಾಸಕ್ತರೂ ಈ ಮರುಕೂಡಿಕೆ ಯನ್ನು ಸ್ವೀಕರಿಸಿದ್ದಾರೆ ಎನ್ನಿ.

ಇದನ್ನೂ ಓದಿ: Vishwavani Editorial: ಭಾರತದ ಹೆಮ್ಮೆಯ ಕ್ಷಣ

ಆದರೆ, ಮಹಾರಾಷ್ಟ್ರದ ರಾಜಕಾರಣದ ದಿಕ್ಕು-ದೆಸೆಯನ್ನು ಬದಲಿಸುವ ವಿಷಯದಲ್ಲಿ ಈ ಮರು ಕೂಡಿಕೆ ಎಷ್ಟರ ಮಟ್ಟಿಗೆ ಸಫಲವಾಗಬಲ್ಲದು ಎಂಬುದನ್ನು ಕಾದು ನೋಡಬೇಕು. ವೇದಿಕೆಯೇರಿ ಹೀಗೆ ಸಾರ್ವಜನಿಕವಾಗಿ ಒಗ್ಗಟ್ಟನ್ನು ಪ್ರದರ್ಶಿಸಿದ ನಂತರ ಉದ್ಧವ್ ಠಾಕ್ರೆಯವರು ಬಿಜೆಪಿ ಯವರನ್ನು ಉದ್ದೇಶಿಸಿ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ. ‘ಶಿವಸೇನೆಯನ್ನು ಬಳಸಿಕೊಂಡ ಬಿಜೆಪಿ ಬಹಳ ಪ್ರಯೋಜನವನ್ನು ಪಡೆದುಕೊಂಡಿದೆ; ಬಾಳಾ ಸಾಹೇಬ್ ಠಾಕ್ರೆಯವರ ಬೆಂಬಲ ಇಲ್ಲದಿದ್ದಿ ದ್ದರೆ ಮಹಾರಾಷ್ಟ್ರದಲ್ಲಿ ಬಿಜೆಪಿಯು ಗೆಲ್ಲಲು ಸಾಧ್ಯವಿತ್ತೇ?’ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಯನ್ನು ಬಿಜೆಪಿಯವರಾಗಲೀ ಅಥವಾ ಮಹಾರಾಷ್ಟ್ರದ ಜನರಾಗಲೀ ಗಂಭೀರವಾಗಿ ಪರಿಗಣಿಸುತ್ತಾರಾ ಎಂಬುದನ್ನು ವಿಶ್ಲೇಷಿಸಲಿಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಆದರೆ ‘ಒಗ್ಗಟ್ಟಿ ನಲ್ಲಿ ಬಲವಿದೆ’ ಎಂಬ ಜಾಣನುಡಿಯನ್ನು ಮೂಲ ಶಿವಸೇನೆ ಪಕ್ಷದ ಕುಡಿಗಳು ತಡವಾಗಿಯಾದರೂ ಅರ್ಥಮಾಡಿಕೊಂಡಿದ್ದು ಶ್ಲಾಘನೀಯ. ಏಕೆಂದರೆ, ಆಳುಗರು ತಪ್ಪು ಮಾಡಿದಾಗಲೆಲ್ಲಾ ಅವರ ಕಿವಿಹಿಂಡಿ ಸರಿದಾರಿಗೆ ತರುವಂಥ ಟೀಕಾಕಾರರು ಇರಬೇಕಾದ್ದು ನಮ್ಮ ಪ್ರಜಾಪ್ರಭುತ್ವದ ಅಗತ್ಯ ಗಳಲ್ಲೊಂದು. ಶಿವಸೇನೆಯ ಹುಲಿಗಳು ಈ ಪಾತ್ರವನ್ನು ನಿರ್ವಹಿಸಬಲ್ಲರು ಎಂಬುದು ರಾಜಕೀಯ ಪಂಡಿತರ ವಿಶ್ವಾಸ.