ಭಾರತ ಸರ್ಕಾರದ ಆರ್ಥಿಕ ಸೇವೆಗಳ ಇಲಾಖೆಯ ಆರ್ಧಿಕ ಸೇರ್ಪಡೆ ಅಭಿಯಾನ: ಮೆಗಾ ಶಿಬಿರ ಆಯೋಜಿಸಿದ ಬ್ಯಾಂಕ್ ಆಫ್ ಬರೋಡಾ
ಜುಲೈ 1ರಿಂದ ಸೆಪ್ಟೆಂಬರ್ 30 2025 ರವರೆಗೆ ನಡೆಯುವ ಈ ಅಭಿಯಾನವು ದೇಶಾದ್ಯಂತ ಗ್ರಾಮ ಪಂಚಾಯಿತಿ ಮತ್ತು ನಗರ (ಸ್ಥಳೀಯ ಸಂಸ್ಥೆಗಳ) ಮಟ್ಟದಲ್ಲಿ ಎಲ್ಲರೂ ಶೇಕಡ 100 ರಷ್ಟು ಆರ್ಥಿಕ ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳನ್ನು ಹೊಂದುವಂತೆ ಮಾಡುವ ಗುರಿ ಯನ್ನು ಹೊಂದಿದೆ.

-

ಬೆಂಗಳೂರು: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ (Bank of Baroda) ಆಫ್ ಬರೋಡಾ ಸಂಸ್ಥೆಯು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆರ್ಥಿಕ ಸೇವೆಗಳ ಇಲಾಖೆ (ಡಿ ಎಫ್ ಎಸ್) ಯ ಆರ್ಧಿಕ ಸೇರ್ಪಡೆ ಪರಿಪೂರ್ಣತೆ ಅಭಿಯಾನದ ಭಾಗವಾಗಿ ಬೆಂಗಳೂರಿನ ಬಿಲ್ವಾರದಹಳ್ಳಿಯಲ್ಲಿ ಆರ್ಧಿಕ ಮೆಗಾ ಶಿಬಿರ ಆಯೋಜಿಸಿತ್ತು.
ಜುಲೈ 1ರಿಂದ ಸೆಪ್ಟೆಂಬರ್ 30 2025 ರವರೆಗೆ ನಡೆಯುವ ಈ ಅಭಿಯಾನವು ದೇಶಾದ್ಯಂತ ಗ್ರಾಮ ಪಂಚಾಯಿತಿ ಮತ್ತು ನಗರ (ಸ್ಥಳೀಯ ಸಂಸ್ಥೆಗಳ) ಮಟ್ಟದಲ್ಲಿ ಎಲ್ಲರೂ ಶೇಕಡ 100 ರಷ್ಟು ಆರ್ಥಿಕ ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳನ್ನು ಹೊಂದುವಂತೆ ಮಾಡುವ ಗುರಿ ಯನ್ನು ಹೊಂದಿದೆ.
ಈ ಕಾರ್ಯಕ್ರಮದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಧಾ ಶ್ಯಾಮ್ ರಾಠೋ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಯತೀಶ್ ಆರ್ (ಐಎಎಸ್), ಬನ್ನೇರುಘಟ್ಟ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಂಜುನಾಥ್, ಭಾರತೀಯ ರಿಸರ್ವ್ ಬ್ಯಾಂಕ್ ನ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಸೋನಾಲಿ ಸೇನ್ ಗುಪ್ತಾ, ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಮತಿ ಬೀನಾ ವಹೀದ್ ಮತ್ತು ಕೆನರಾ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಭವೇಂದ್ರ ಕುಮಾರ್ ಹಾಗೂ ಇತರ ಬ್ಯಾಂಕ್ ಅಧಿಕಾರಿಗಳೂ ಭಾಗವಹಿಸಿದ್ದರು ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕಿನ ಪ್ರತಿನಿಧಿಗಳೂ ಈ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Mohan Vishwa Column: ನಗರ ನಕ್ಸಲರ ಬುಡಕ್ಕೆ ಬಿತ್ತು ಬೆಂಕಿ !
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀಮತಿ ಬೀನಾ ವಹೀದ್ ಅವರು, “ಇಂತಹ ಶಿಬಿರಗಳು ಆರ್ಥಿಕ ಯೋಜನೆಗಳ ಪ್ರಯೋಜನಗಳನ್ನು ನೇರವಾಗಿ ಮನೆಮನೆಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯು ಹೇಗೆ ಜನರನ್ನು ಸಬಲೀಕರಣ ಗೊಳಿಸಬಹುದು ಎಂಬುದನ್ನು ತೋರಿಸುತ್ತವೆ. ಇಂದಿನ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ವರ್ಗಗಳು ಭಾಗ ವಹಿಸುವಿಕೆ ಗಮನಾರ್ಹವಾಗಿತ್ತು, ಇದು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಯ ಬಳಕೆಯಲ್ಲಿ ಹೆಚ್ಚುತ್ತಿರುವ ವಿಶ್ವಾಸವನ್ನು ತೋರಿಸುತ್ತದೆ. ಈ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವುದು ಮತ್ತು ಬ್ಯಾಂಕಿಂಗ್ ಅನ್ನು ಸಮಾಜದ ಪ್ರತಿಯೊಂದು ವರ್ಗಕ್ಕೂ ಸುಲಭವಾಗಿ, ಸೂಕ್ತವಾಗಿ ಸರಿ ಹೊಂದುವಂತೆ ಮತ್ತು ಸಬಲೀಕರಣಗೊಳಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದ ಭಾಗವಾಗಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ (ಪಿಎಂಜೆಜೆ ಬಿವೈ) ಅಡಿಯಲ್ಲಿ ಫಲಾನುಭವಿಗಳಿಗೆ ಕ್ಲೈಮ್ ಚೆಕ್‌ಗಳನ್ನು ಔಪಚಾರಿಕವಾಗಿ ಹಸ್ತಾಂತರಿಸ ಲಾಯಿತು. ಈ ಮೂಲಕ ಸಾಮಾಜಿಕ ಭದ್ರತೆ ಮತ್ತು ಆರ್ಧಿಕ ಸೇರ್ಪಡೆ ಕಡೆಗಿನ ಸರ್ಕಾರದ ಬದ್ಧತೆ ಯನ್ನು ಮತ್ತೊಮ್ಮೆ ದೃಢಪಡಿಸಲಾಯಿತು. ಪಿಎಂಜೆಜೆಬಿವೈ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ (ಪಿ ಎಂ ಎಸ್ ಬಿ ವೈ) ಅಡಿಯಲ್ಲಿ ವಿಮಾ ಪ್ರಮಾಣಪತ್ರಗಳು, ಜೊತೆಗೆ ಅಟಲ್ ಪಿಂಚಣಿ ಯೋಜನೆ (ಎಪಿಐ) ಅಡಿಯಲ್ಲಿ ನೋಂದಾಯಿತ ಫಲಾನುಭವಿಗಳಿಗೆ ದಾಖಲಾತಿ ರಸೀದಿ ಗಳನ್ನು ವಿತರಿಸಲಾಯಿತು.
ಇದರ ಜೊತೆಗೆ, ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಖಾತೆಗಳಿಗೆ ಸಂಬಂಧಿಸಿದ ರೀ ಕೇವೈಸಿ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲಾಯಿತು. ಅಧಿಕಾರಿ ಗಳು ಕಾರ್ಯಕ್ರಮದ ಭಾಗವಾಗಿ ಏರ್ಪಡಿಸಲಾದ ವಿವಿಧ ಸ್ಟಾಲ್ ಗಳಿಗೆ ಭೇಟಿ ನೀಡಿ ನಾವಿನ್ಯತೆ ಮತ್ತು ಸಾರ್ವಜನಿಕ ಭಾಗವಹಿಸುವಿಕೆಗೆ ಪ್ರೋತ್ಸಾಹ ನೀಡಿದರು.
ಈ ಮೆಗಾ ಶಿಬಿರವು ಭಾರತ ಸರ್ಕಾರದ ಆರ್ಥಿಕ ಸಬಲೀಕರಣ ಮತ್ತು ಆರ್ಥಿಕ ಒಳಗೊಳ್ಳುವಿಕೆಯ ದೃಷ್ಟಿಕೋನಕ್ಕೆ ಬ್ಯಾಂಕಿಂಗ್ ವ್ಯವಸ್ಥೆಯು ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸಿದೆ.
ಭಾರತದ ಆರ್ಧಿಕ ಸೇರ್ಪಡೆ ಯೋಜನೆಯನ್ನು ವೇಗವಾಗಿ ಜಾರಿ ಗೊಳಿಸಲು ಉದ್ದೇಶಿಸಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕರು, ಆರ್‌ಬಿಐ ಮತ್ತು ಇತರ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳು ಭಾಗವಹಿಸಿದ್ದರು