ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ದುರುಳರ ಹೆಡೆಮುರಿ ಕಟ್ಟಿ

ಉಗ್ರರಿಗೆ ಕಾಲಾನು ಕಾಲಕ್ಕೆ ಭಾರತವು ಬಿಸಿ ಮುಟ್ಟಿಸುತ್ತಿದ್ದರೂ ಅವರು ಪಾಠ ಕಲಿಯುತ್ತಿಲ್ಲ, ಜತೆಗೆ ದುರುಳದೇಶ ಪಾಕಿಸ್ತಾನದ ಚಿತಾವಣೆಯೂ ಅವರ ಬೆನ್ನಿಗಿರುವುದನ್ನು ಮರೆಯು ವಂತಿಲ್ಲ. ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ತರುವಾಯ ಭಾರತವನ್ನು ಮತ್ತೆ ಮತ್ತೆ ಕೆಣಕುತ್ತಿರುವ ಪಾಕಿಸ್ತಾನದ ಸಂಚು ಇದಾಗಿರುವ ಸಾಧ್ಯತೆಯಿದೆ.

ಮೊನ್ನಿನ ಎರಡು ವಿದ್ಯಮಾನಗಳು ಭಾರತದ ಸೇನಾ ಸನ್ನದ್ಧತೆಯ ಅನಿವಾರ್ಯತೆಯನ್ನು ಪರೋಕ್ಷವಾಗಿ ಒತ್ತಿ ಹೇಳಿವೆ ಎನ್ನಲಡ್ಡಿಯಿಲ್ಲ.

ಪಾಕಿಸ್ತಾನದ ಎರಡು ಉಗ್ರ ಸಂಘಟನೆಗಳು ಜತೆಗೂಡಿ ರಚಿಸಿಕೊಂಡಿರುವ ‘ಜೈಶ್-ಎಜಿಯುಎಚ್’ ಎಂಬ ಹೊಸ ಭಯೋತ್ಪಾದಕ ಸಂಘಟನೆಯ ಜಾಲವು, ಜಮ್ಮು-ಕಾಶ್ಮೀರ ಮತ್ತು ಹರಿಯಾಣ ಪ್ರದೇಶಗಳಲ್ಲಿ ಹಬ್ಬಿ ಕೊಂಡಿವೆ ಎಂಬ ಸುದ್ದಿ ಈ ಪೈಕಿ ಮೊದಲಿನದು; ಆ ಭಾಗಗಳ ಪೊಲೀಸರು ಹಾಗೂ ಇಂಟೆಲಿಜೆನ್ಸ್ ಬ್ಯೂರೋ ನಡೆಸಿದ ಜಂಟಿ ಕಾರ್ಯಾ ಚರಣೆಯ ವೇಳೆ ಇದರ ಸುಳಿವು ಸಿಕ್ಕಿದ್ದು, ಈ ಸಂಘಟನೆಯ ಸದಸ್ಯರು ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲೆಂದೇ ಬಾಡಿಗೆ ಮನೆಯೊಂದರಲ್ಲಿ ಕಲೆ ಹಾಕಿದ್ದ 2900 ಕೆ.ಜಿ.ಗೂ ಅಧಿಕ ಪ್ರಮಾಣದ ಸ್ಫೋಟಕ ತಯಾರಿಕಾ ಸಾಮಗ್ರಿಗಳು ಮತ್ತು ಸಾಕಷ್ಟು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.

ಇದನ್ನೂ ಓದಿ: Vishwavani Editorial: ಇದು ನಿರ್ಲಕ್ಷಿಸುವ ಸಂಗತಿಯಲ್ಲ

ಇನ್ನು, ದೆಹಲಿ ಕೆಂಪುಕೋಟೆಯ ಸಮೀಪ ಸಂಭವಿಸಿದ ಕಾರುಸ್ಫೋಟದಿಂದ ಸಾಕಷ್ಟು ಮಂದಿ ಸತ್ತಿರುವುದು ತಲ್ಲಣಕ್ಕೆ ಕಾರಣವಾಗಿರುವ ಮತ್ತೊಂದು ಸುದ್ದಿ. ಇದು ಭಯೋ ತ್ಪಾದಕರ ಕೃತ್ಯದ ಭಾಗವೇ ಎಂಬ ಶಂಕೆಯನ್ನು ಹುಟ್ಟುಹಾಕಿದೆ. ಉಗ್ರರಿಗೆ ಕಾಲಾನು ಕಾಲಕ್ಕೆ ಭಾರತವು ಬಿಸಿ ಮುಟ್ಟಿಸುತ್ತಿದ್ದರೂ ಅವರು ಪಾಠ ಕಲಿಯುತ್ತಿಲ್ಲ, ಜತೆಗೆ ದುರುಳದೇಶ ಪಾಕಿಸ್ತಾನದ ಚಿತಾವಣೆಯೂ ಅವರ ಬೆನ್ನಿಗಿರುವುದನ್ನು ಮರೆಯುವಂತಿಲ್ಲ. ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ತರುವಾಯ ಭಾರತವನ್ನು ಮತ್ತೆ ಮತ್ತೆ ಕೆಣಕುತ್ತಿರುವ ಪಾಕಿಸ್ತಾನದ ಸಂಚು ಇದಾಗಿರುವ ಸಾಧ್ಯತೆಯಿದೆ. ತನ್ಮೂಲಕ ಭಾರತವನ್ನು ಮತ್ತೊಮ್ಮೆ ಯುದ್ಧಕ್ಕೆ ಪ್ರಚೋದಿಸುವುದು ಅದರ ಇರಾದೆಯೂ ಆಗಿದ್ದಿರಬಹುದು.

ಒಂದೊಮ್ಮೆ ಇದು ನಿಜವಾಗಿದ್ದಲ್ಲಿ, ಪಾಕಿಸ್ತಾನಕ್ಕೆ ಭಾರತವು ಮತ್ತೊಮ್ಮೆ ಬಿಸಿ ಮುಟ್ಟಿ ಸುವ ಕಾಲ ಸನ್ನಿಹಿತವಾಗಿದೆ ಎಂದಾಯಿತು. ತಾನಾಗಿಯೇ ಎಂದೂ ಪರರ ಮೇಲೆ ಆಕ್ರಮಣಕ್ಕೆ ಹೋಗದ ಭಾರತವನ್ನು ಪಾಕಿಸ್ತಾನ ಹೀಗೆ ಕೆಣಕುತ್ತಿದೆ ಎಂದರೆ, ಅದು ‘ವಿನಾಶಕಾಲೇ ವಿಪರೀತ ಬುದ್ಧಿ’ ಎಂಬ ಮಾತಿಗೆ ಜ್ವಲಂತಸಾಕ್ಷಿ ಎಂದೇ ಭಾವಿಸ ಬೇಕಾಗುತ್ತದೆ.