ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಯಾರಿಗೆ ಯಾರು ಆದರ್ಶ?!

ಇದು ಮಮತಾ ಬ್ಯಾನರ್ಜಿಯವರ ಚಿಂತನಾ ಕ್ರಮವು ಅಧೋಗತಿಗೆ ಇಳಿದಿರುವುದರ ದ್ಯೋತಕ ವಷ್ಟೇ. ದಶಕಗಳ ಹಿಂದಿನ ಅವಽಗೆ ಹೋಲಿಸಿದಾಗ, ಕಳೆದ ಕೆಲ ವರ್ಷಗಳಲ್ಲಿ ನಮ್ಮ ಚುನಾ ವಣಾ ಚಟುವಟಿಕೆಗಳಲ್ಲಿ ಮತ್ತು ಆಯೋಗದ ಕಾರ್ಯವೈಖರಿಯಲ್ಲಿ ಸಾಕಷ್ಟು ಸುಧಾರಣೆ ಯಾಗಿರುವುದು ಎದ್ದು ಕಾಣುತ್ತದೆ.

‘ವಿರೋಧಕ್ಕಾಗಿ ವಿರೋಧ’ ಎಂಬ ಧೋರಣೆ ಅಥವಾ ಚಿತ್ತಸ್ಥಿತಿಯು ವ್ಯಕ್ತಿಗಳಲ್ಲಿ ಏನೆಲ್ಲಾ ನಕಾರಾತ್ಮಕ ಅಂಶಗಳನ್ನು ಹುಟ್ಟು ಹಾಕುತ್ತದೆ ಎಂಬುದಕ್ಕೆ ನಮ್ಮ ಕೆಲ ರಾಜಕೀಯ ನಾಯಕರು ಜ್ವಲಂತ ಸಾಕ್ಷಿಯಾಗಿದ್ದಾರೆ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಇಂಥ ಸಾಕಷ್ಟು ಮಂದಿ ಸಿಗುತ್ತಾರೆ ಎಂಬು ದರಲ್ಲಿ ಅತಿಶಯವಿಲ್ಲ. ಈ ಪೈಕಿ ಎದ್ದು ಕಾಣುವ ಹೆಸರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಇತ್ತೀಚೆಗೆ ಸಂಪನ್ನಗೊಂಡ ಬಾಂಗ್ಲಾದೇಶದ ಚುನಾವಣೆಗಳನ್ನು ಅವರು ನಿದರ್ಶನವಾಗಿಟ್ಟುಕೊಂಡು, ‘ಚುನಾವಣೆಯನ್ನು ಹೇಗೆ ಶಾಂತಿಯುತವಾಗಿ ನಡೆಸಬೇಕು ಎಂಬುದನ್ನು ಬಾಂಗ್ಲಾದ ಚುನಾವಣಾ ಆಯೋಗವನ್ನು ನೋಡಿ ಕಲಿಯಿರಿ’ ಎಂದಿದ್ದಾರೆ.

ಅವರು ಹೀಗೆ ಟಾಂಗ್ ಕೊಟ್ಟಿರುವುದು ಭಾರತದ ಚುನಾವಣಾ ಆಯೋಗಕ್ಕೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ‘ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿಕೊಳ್ಳುವ ಭಾರತದಲ್ಲಿನ ಚುನಾವಣೆಗಳಲ್ಲಿ ಭಯ, ಬೆದರಿಕೆಯ ಸ್ಥಿತಿ ಇದೆ; ಜತೆಗೆ ಚುನಾವಣಾ ಆಯೋಗವೂ ಪ್ರಜಾಪ್ರಭುತ್ವವನ್ನು ನೆಲಸಮಗೊಳಿಸುತ್ತಿದೆ’ ಎಂದೂ ಅವರು ಇದೇ ವೇಳೆ ಒಗ್ಗರಣೆ ಹಾಕಿದ್ದಾರೆ.

ಇದನ್ನೂ ಓದಿ: Vishwavani Editorial: ಎಐ ಉದ್ಯೋಗ ನಷ್ಟಕ್ಕೆ ಪರಿಹಾರ?

ಇದು ಮಮತಾ ಬ್ಯಾನರ್ಜಿಯವರ ಚಿಂತನಾ ಕ್ರಮವು ಅಧೋಗತಿಗೆ ಇಳಿದಿರುವುದರ ದ್ಯೋತಕವಷ್ಟೇ. ದಶಕಗಳ ಹಿಂದಿನ ಅವಽಗೆ ಹೋಲಿಸಿದಾಗ, ಕಳೆದ ಕೆಲ ವರ್ಷಗಳಲ್ಲಿ ನಮ್ಮ ಚುನಾವಣಾ ಚಟುವಟಿಕೆಗಳಲ್ಲಿ ಮತ್ತು ಆಯೋಗದ ಕಾರ್ಯವೈಖರಿಯಲ್ಲಿ ಸಾಕಷ್ಟು ಸುಧಾರಣೆಯಾಗಿರುವುದು ಎದ್ದು ಕಾಣುತ್ತದೆ.

ಚುನಾವಣೆಗಳ ಸಂದರ್ಭದಲ್ಲಿ ನಡೆಯುವ ದೊಂಬಿ-ಗಲಾಟೆಗಳಿಗೆ ಕೆಲವೊಂದು ‘ಸ್ಥಾಪಿತ ಹಿತಾಸಕ್ತಿಗಳ’ ಕುಮ್ಮಕ್ಕು ಕಾರಣವಾಗಿರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ; ಇದಕ್ಕಾಗಿ ಚುನಾವಣಾ ಆಯೋಗವನ್ನು ಉತ್ತರದಾಯಿಯಾಗಿಸಿದರೆ ಅದು ಸ್ವೀಕಾರಾರ್ಹ ವೇ? ಅಷ್ಟಕ್ಕೂ, ಚುನಾವಣಾ ಪ್ರಕ್ರಿಯೆ, ಆಳುಗ ವ್ಯವಸ್ಥೆಯ ಕಾರ್ಯವೈಖರಿ ಮುಂತಾದ ಬಾಬತ್ತುಗಳಲ್ಲಿ ಅವರು ಬೇರಾವುದಾದರೂ ದೇಶವನ್ನು ಉದಾಹರಿಸಿದ್ದಿದ್ದರೆ ಒಪ್ಪಬಹು ದಿತ್ತೇನೋ? ಆದರೆ ಈ ವಿಷಯದಲ್ಲಿ ಅವರು ಮೇಲ್ಪಂಕ್ತಿಯಾಗಿ ಇಟ್ಟು ಕೊಂಡಿರುವುದು ಬಾಂಗ್ಲಾದೇಶವನ್ನು!

ಅರಾಜಕತೆಯೇ ಮೈವೆತ್ತಂತಿರುವ ಬಾಂಗ್ಲಾದೇಶವನ್ನು ಭಾರತದೊಂದಿಗೆ ಹೋಲಿಸ ಲಾದೀತೇ? ಇದಕ್ಕಿಂತ ತಮಾಷೆಯ ಸಂಗತಿ ಮತ್ತೊಂದು ಇರಲಿಕ್ಕೆ ಸಾಧ್ಯವಾ?!