ನವದೆಹಲಿ, ಫೆ.6: 10ನೇ ಆವೃತ್ತಿಯ ಟಿ20 ವಿಶ್ವಕಪ್(T20 World Cup 2026)ಗೆ ವೇದಿಕೆ ಸಜ್ಜಾಗಿದೆ. ಮಾರ್ಕ್ಯೂ ಟೂರ್ನಮೆಂಟ್ ಅನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದ್ದು, ಶನಿವಾರದಿಂದ(ಫೆಬ್ರವರಿ 7) ಪಂದ್ಯಾವಳಿ ಪ್ರಾರಂಭವಾಗಲಿದೆ. ಭಾಗವಹಿಸುವ 20 ತಂಡಗಳು ಟೂರ್ನಮೆಂಟ್ ಸಮೀಪಿಸುತ್ತಿದ್ದಂತೆ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಹೊಂದಿವೆ.
ಸ್ಪರ್ಧೆ ಆರಂಭವಾಗಲಿರುವಂತೆಯೇ, ಎಲ್ಲರ ಕಣ್ಣುಗಳು ಭಾರತೀಯ ತಂಡದ ಮೇಲೆ ನೆಟ್ಟಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡವು ವಿಶ್ವಕಪ್‌ನಲ್ಲಿ ಹಲವಾರು ದಾಖಲೆಗಳನ್ನು ಮುರಿಯುವ ಭರವಸೆ ಹೊಂದಿದೆ. ಭಾರತವು ತನ್ನ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಏಕೈಕ ತಂಡವಾಗುವ ಅವಕಾಶವನ್ನು ಹೊಂದಿದೆ ಮತ್ತು ಗೆದ್ದರೆ, ಅತ್ಯಧಿಕ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದ ತಂಡ ಎನಿಸಿಕೊಳ್ಳಲಿದೆ. ಇದಕ್ಕೂ ಮುನ್ನ ಈವರೆಗಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸಾಧನೆ ಹೇಗಿತ್ತು ಎಂಬ ಇಣುಕು ನೋಟ ಇಲ್ಲಿದೆ.
ಮೊದಲ T20 ವಿಶ್ವಕಪ್ 2007 ರಲ್ಲಿ ನಡೆಯಿತು. ಎಂ.ಎಸ್ ಧೋನಿ ನಾಯಕತ್ವದಲ್ಲಿ, ಭಾರತ ತಂಡವು ತುಲನಾತ್ಮಕವಾಗಿ ಅನನುಭವಿ ತಂಡವನ್ನು ಕಣಕ್ಕಿಳಿಸಿತು. ಆದರೆ ಯುವ ತಂಡವು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು, ಫೈನಲ್‌ನಲ್ಲಿ ಬುದ್ಧ ಎದುರಾಳಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಚೊಚ್ಚಲ T20 ವಿಶ್ವಕಪ್ ಅನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಯಿತು.
ಲೀಗ್ ಹಂತದಲ್ಲೇ ನಿರ್ಗಮನ
ಮುಂದಿನ ವಿಶ್ವಕಪ್ 2009 ರಲ್ಲಿ ನಡೆಯಿತು. ಹಾಲಿ ಚಾಂಪಿಯನ್ ಆಗಿ, ಮೆನ್ ಇನ್ ಬ್ಲೂ ತಂಡವು ಗುಂಪು ಹಂತಗಳಿಂದ ಹೊರಬಿತ್ತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದ ಪಾಕಿಸ್ತಾನ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಟಿ20 ವಿಶ್ವಕಪ್‌ಗೆ ಭಾರತ ಆಡುವ ಬಳಗ ಫೈನಲ್; ಸಂಜುಗಿಲ್ಲ ಅವಕಾಶ
2010 ರಲ್ಲಿ ನಡೆದ ಮುಂದಿನ ಪಂದ್ಯದಲ್ಲಿ ಭಾರತ ತಂಡ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಗುಂಪು ಹಂತದಲ್ಲೇ ಸೋತು ಟೂರ್ನಮೆಂಟ್‌ನ ನಾಕೌಟ್ ಹಂತಗಳನ್ನು ತಲುಪಲು ವಿಫಲವಾಯಿತು. 2012 ರ ವಿಶ್ವಕಪ್ ಕೂಡ ಭಾರತ ತಂಡಕ್ಕೆ ಅಷ್ಟೇನೂ ಸಂತೋಷವನ್ನು ತರಲಿಲ್ಲ. ಉದ್ಘಾಟನಾ ಚಾಂಪಿಯನ್ ಆಗಿದ್ದರಿಂದ, ತಂಡದಿಂದ ಹೆಚ್ಚಿನ ನಿರೀಕ್ಷೆಗಳಿದ್ದವು. ಆದಾಗ್ಯೂ, ಅವರು ಮತ್ತೊಮ್ಮೆ ಸೂಪರ್-8 ರಲ್ಲಿ ಹೊರಬಿದ್ದ ಕಾರಣ ನಾಕೌಟ್‌ಗಳಿಗೆ ತಲುಪಲು ವಿಫಲರಾದರು.
ಫೈನಲ್‌ನಲ್ಲಿ ಸೋಲು
2014 ರ ಟಿ20 ವಿಶ್ವಕಪ್‌ನಲ್ಲಿ ಮೆನ್ ಇನ್ ಬ್ಲೂ ತಂಡವು ಫೈನಲ್ ತಲುಪಿತು. ಭಾರತ 2ನೇ ಟ್ರೋಫಿ ಗೆಲ್ಲಬಹುದು ಎಂಬ ನಿರೀಕ್ಷೆ ಬೆಟ್ಟದಷ್ಟಿತ್ತು. ಆದರೆ ಲಸಿತ್ ಮಾಲಿಂಗ ನೇತೃತ್ವದ ಶ್ರೀಲಂಕಾ ತಂಡವು ಭಾರತವನ್ನು ಮಣಿಸಿ ಪ್ರಶಸ್ತಿಯನ್ನು ಎತ್ತಿಹಿಡಿಯಿತು.
2016 ರಲ್ಲಿ, ಭಾರತ ತಂಡವು ಪಂದ್ಯಾವಳಿಯ ಸೆಮಿಫೈನಲ್ ತಲುಪಿತು. ಆದಾಗ್ಯೂ, ಅಂತಿಮವಾಗಿ ವಿಜೇತರಾದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವಲ್ಲಿ ತಂಡ ವಿಫಲವಾಯಿತು. 2016 ರ ನಂತರ, ಮುಂದಿನ ಟಿ 20 ವಿಶ್ವಕಪ್ 2021 ರಲ್ಲಿ ನಡೆಯಿತು. ಟೀಮ್ ಇಂಡಿಯಾ ಗುಂಪು ಹಂತದಿಂದಲೇ ಹೊರಬಿತ್ತು. ಬದ್ಧ ಎದರಾಳಿ ಪಾಕಿಸ್ತಾನ ವಿರುದ್ಧವೂ ಸೋಲು ಕಂಡಿತ್ತು. 2022 ರಲ್ಲಿ, ಭಾರತ ಸೆಮಿಫೈನಲ್‌ನಲ್ಲಿ ಹೊರಬಿತ್ತು. ಇಂಗ್ಲೆಂಡ್ ಟ್ರೋಫಿಯನ್ನು ಎತ್ತಿಹಿಡಿತು.
17 ವರ್ಷದ ಬಳಿಕ ಚಾಂಪಿಯನ್
ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಭಾರತ ತನ್ನ ಎರಡನೇ ಟ್ರೋಫಿ ಗೆಲ್ಲಲು ಬರೋಬ್ಬರಿ 17 ವರ್ಷ ಕಾಯಬೇಕಾಯಿತು. 2024 ರಲ್ಲಿ ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ಅಜೇಯವಾಗಿ ಫೈನಲ್ ತಲುಪಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಬಾರಿಯೂ ಭಾರತ ಕಪ್ ತನ್ನ ಬಳಿ ಉಳಿಸಿಕೊಳ್ಳಲಿ ಎನ್ನುವುದು ಭಾರತೀಯರ ಆಶಯ ಮತ್ತು ಹಾರೈಕೆಯಾಗಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತದ ಸಾಧನೆ
ಟಿ20 ವಿಶ್ವಕಪ್ 2007- ವಿಜೇತ
ಟಿ20 ವಿಶ್ವಕಪ್ 2009- ಸೂಪರ್ 8
ಟಿ20 ವಿಶ್ವಕಪ್ 2010- ಸೂಪರ್ 8
ಟಿ20 ವಿಶ್ವಕಪ್ 2012- ಸೂಪರ್ 8
ಟಿ20 ವಿಶ್ವಕಪ್ 2014- ಫೈನಲ್
ಟಿ20 ವಿಶ್ವಕಪ್ 2016- ಸೆಮಿಫೈನಲ್
ಟಿ20 ವಿಶ್ವಕಪ್ 2021- ಗುಂಪು ಹಂತ
ಟಿ20 ವಿಶ್ವಕಪ್ 2022- ಸೆಮಿಫೈನಲ್
ಟಿ20 ವಿಶ್ವಕಪ್ 2024- ವಿಜೇತ