ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

40 ನೇ ರಾಜ್ಯಮಟ್ಟದ ಟೈಕೊಂಡೋ ಟೂರ್ನಿ: ವಿವಿಧ ವಿಭಾಗಗಳಲ್ಲಿ ಪಾರಮ್ಯ ಸಾಧಿಸಿದ ತುಮಕೂರು, ಬೆಂಗಳೂರು, ಚಿತ್ರದುರ್ಗ ತಂಡಗಳು

40ನೇ ರಾಜ್ಯ ಮಟ್ಟದ ಸಬ್ ಜೂನಿಯರ್, ಕೆಡಿಟ್, ಜೂನಿಯರ್ ಮತ್ತು ಸೀನಿಯರ್ ಟೈಕೊಂಡೋ ಪಂದ್ಯಾವಳಿ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಮಲೆ ಬೆನ್ನೂರಿನಲ್ಲಿ ನ. 6 ,7 ಮತ್ತು 8 ರಂದು ನಡೆದಿದ್ದು, ವಿವಿಧ ವಿಭಾಗಗಳಲ್ಲಿ ತುಮಕೂರು, ಬೆಂಗಳೂರು, ಚಿತ್ರದುರ್ಗ ತಂಡಗಳು ಪಾರಮ್ಯ ಸಾಧಿಸಿವೆ.

ಬೆಂಗಳೂರು: 40ನೇ ರಾಜ್ಯ ಮಟ್ಟದ ಸಬ್ ಜೂನಿಯರ್, ಕೆಡಿಟ್, ಜೂನಿಯರ್ ಮತ್ತು ಸೀನಿಯರ್ ಟೈಕೊಂಡೋ ಪಂದ್ಯಾವಳಿ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಮಲೆ ಬೆನ್ನೂರಿನಲ್ಲಿ ನ. 6 ,7 ಮತ್ತು 8 ರಂದು ನಡೆದಿದ್ದು, ವಿವಿಧ ವಿಭಾಗಗಳಲ್ಲಿ ತುಮಕೂರು, ಬೆಂಗಳೂರು, ಚಿತ್ರದುರ್ಗ ತಂಡಗಳು ಪಾರಮ್ಯ ಸಾಧಿಸಿವೆ.

To

ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ತುಮಕೂರು ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಚಿತ್ರದುರ್ಗ ದ್ವಿತೀಯ, ಬೆಂಗಳೂರು ತೃತೀಯ ಸ್ಥಾನ ಪಡೆದುಕೊಂಡಿತು. ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಬೆಂಗಳೂರು ಪ್ರಥಮ, ತುಮಕೂರು ದ್ವಿತೀಯ ಮತ್ತು ದಾವಣಗೆರೆ ತೃತೀಯ ಸ್ಥಾನ ಪಡೆಯಿತು.

ಕೆಡಿಟ್ ಬಾಲಕಿಯರ ವಿಭಾಗದಲ್ಲಿ ತುಮಕೂರು, ಬೆಂಗಳೂರು ಮತ್ತು ಚಿತ್ರದುರ್ಗ, ಕೆಡಿಟ್ ಬಾಲಕರ ವಿಭಾಗದಲ್ಲಿ ತುಮಕೂರು, ಚಿತ್ರದುರ್ಗ ಮತ್ತು ಬೆಳಗಾಂ, ಜೂನಿಯರ್ ಬಾಲಕಿ ಯರ ವಿಭಾಗ ಮಟ್ಟದಲ್ಲಿ ಚಿತ್ರದುರ್ಗ ಪ್ರಥಮ, ದಾವಣಗೆರೆ ದ್ವಿತೀಯ ಮತ್ತು ಬೆಂಗಳೂರು ತೃತೀಯ ಸ್ಥಾನ ಪಡೆದುಕೊಂಡಿತು.

ಇದನ್ನೂ ಓದಿ: Bangalore News: ಬ್ರಿಟಿಷ್ ಕೌನ್ಸಿಲ್‌ʼನ ಮೊದಲ ‘ಕ್ರಿಯೇಟಿವ್ ಕನ್ವರ್ಜೆನ್ಸ್: ಗ್ರೋತ್ ರೀಇಮ್ಯಾಜಿನ್’ ಬೆಂಗಳೂರಿನಲ್ಲಿ ಆರಂಭ

ಜೂನಿಯರ್ ಬಾಲಕರ ವಿಭಾಗ ಮಟ್ಟದಲ್ಲಿ ಬೆಂಗಳೂರು, ಚಿತ್ರದುರ್ಗ ಮತ್ತು ದಾವಣಗೆರೆ, ಸೀನಿಯರ್ ಬಾಲಕಿಯರ ವಿಭಾಗ ಮಟ್ಟದಲ್ಲಿ ಬೆಂಗಳೂರು, ತುಮಕೂರು ಮತ್ತು ದಾವಣಗೆರೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು ಎಂದು ಕರ್ನಾಟಕ ಟೈಕೊಂಡೊ ಅಸೋಸಿ ಯೇಷನ್ ಅಧ್ಯಕ್ಷ ಜೆ. ತಿರುಮಲ ತಿಳಿಸಿದ್ದಾರೆ.

ಕ್ರೀಡಾಕೂಟದಲ್ಲಿ 500 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಸಂಸ್ಥೆಯ ಸಿಇಒ ಮನಫುಶ್, ಕಾರ್ಯದರ್ಶಿಗಳಾದ ವೆಂಕಟೇಶ್, ಜಂಟಿ ಕಾರ್ಯದರ್ಶಿ ಶ್ರೀಕಾಂತ, ಖಜಾಂಚಿ ಅನಿತಾ, ಎಂ ಸುನೀತ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ತೀರ್ಪುಗಾರರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಾಜ್ಯಮಟ್ಟದಲ್ಲಿ ಬಂಗಾರದ ಪದಕ ಪಡೆದ ಕೆಡಿಟ್ ಮತ್ತು ಸೀನಿಯರ್ ವಲಯದ ಕ್ರೀಡಾ ಪಟುಗಳು ಇದೇ ತಿಂಗಳು 21,22, ಮತ್ತು 23 ಉತ್ತರ ಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಎಂದು ತಿಳಿಸಿದರು.