ನವದೆಹಲಿ, ಆ. 27: ಭಾರತದ ಬ್ಯಾಟಿಂಗ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್, ಸೆಪ್ಟೆಂಬರ್‌ನಲ್ಲಿ ರಾಜ್‌ಕೋಟ್‌ನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಭಾರತ U19 ತಂಡಕ್ಕೆ ಚೊಚ್ಚಲ ಕರೆ ಪಡೆದಿದ್ದಾರೆ.
ಬಲಗೈ ಬ್ಯಾಟ್ಸ್‌ಮನ್ ಆಗಿರುವ ಆರ್ಯವೀರ್ ಇತ್ತೀಚೆಗೆ ದೆಹಲಿ ಪ್ರೀಮಿಯರ್ ಲೀಗ್ 2026 ರಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ಪರ ಆಡಿದ್ದರು, ಅಲ್ಲಿ ಅವು ತಂದೆಯ ಶೈಲಿಯಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದರು. 2024 ರಲ್ಲಿ ಕೂಚ್ ಬೆಹಾರ್ ಟ್ರೋಫಿಯ ಸಮಯದಲ್ಲಿ ಅವರು ಮೇಘಾಲಯ ವಿರುದ್ಧ 297 ರನ್ ಗಳಿಸುವ ಮೂಲಕ ಸುದ್ದಿಯಾಗಿದ್ದರು.
ಜುಲೈನಲ್ಲಿ U19 ತಂಡದ ಶ್ರೀಲಂಕಾ ಪ್ರವಾಸದ ಸಂದರ್ಭದಲ್ಲಿ 87 ರನ್ ಗಳಿಸಿದ ವಿಕೆಟ್ ಕೀಪರ್ ಅನ್ವಯ್ ದ್ರಾವಿಡ್ ಕೂಡ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದಾಗ್ಯೂ, ಎರಡು ಬಹು-ದಿನ ಪಂದ್ಯಗಳಿಗೆ ಆರ್ಯವೀರ್ ಮತ್ತು ಅನ್ವಯ್ ತಂಡಕ್ಕೆ ಆಯ್ಕೆಯಾಗಿಲ್ಲ.
ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಆರಂಭಿಕ ಆಟಗಾರ ಲಕ್ಷ್ಯ ರಾಯ್‌ಚಂದಾನಿ ಮುನ್ನಡೆಸಲಿದ್ದು, ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಯಶ್‌ವರ್ಧನ್ ಚೌಹಾಣ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದಾಗ್ಯೂ, ಬಹುದಿನಗಳ ಪಂದ್ಯಕ್ಕಾಗಿ ಇಬ್ಬರೂ ಆಟಗಾರರು ಪಾತ್ರಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.
ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ರಾಜ್‌ಕೋಟ್‌ನಲ್ಲಿ ಎದುರಿಸಲಿದ್ದು, ಸೆಪ್ಟೆಂಬರ್ 18, 21 ಮತ್ತು 23 ರಂದು ಈ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 27 ರಿಂದ 30 ರವರೆಗೆ ಮೊದಲ ಬಹುದಿನ ಪಂದ್ಯವನ್ನು ಆಯೋಜಿಸಲಿದ್ದು, ಎರಡನೇ ಬಹುದಿನ ಪಂದ್ಯವು ಅಕ್ಟೋಬರ್ 5 ರಿಂದ 8 ರವರೆಗೆ ಅಹಮದಾಬಾದ್ (ಬಿ ಮೈದಾನ) ನಲ್ಲಿ ನಡೆಯಲಿದೆ.
ಭಾರತ U19 ಏಕದಿನ ತಂಡ
ಲಕ್ಷ ರಾಯಚಂದನಿ (ನಾಯಕ), ಯಶಬರ್ಧನ್ ಚೌಹಾಣ್ (ಉಪನಾಯಕ), ರಜತ್ ಬಾಘೇಲ್, ಆರ್ಯವೀರ್ ಸೆಹ್ವಾಗ್, ವಿಕೆ ವಿನೀತ್, ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್, ವಿ ಯಶವೀರ್, ರೋಹಿತ್ ಯಾದವ್, ಶವಿನ್ ವಿನೋದ್, ಮೋಹಿತ್ ಉಲ್ವಾ, ಚಿಗುರುಪತಿ ವೆಂಕಟ, ಕಾವ್ಯಾ ಪಟೇಲ್.
ಭಾರತ U19 ಬಹುದಿನದ ತಂಡ
ಯಶಬರ್ಧನ್ ಚೌಹಾಣ್ (ನಾಯಕ), ಲಕ್ಷ ರಾಯಚಂದಾನಿ (ಉಪನಾಯಕ), ಸಾಗರ್ ವಿರ್ಕ್, ಕುಶಾಗ್ರ ಓಜಾ, ಮನಲ್ ಚೌಹಾಣ್, ಕುಶ್ ಪಟೇಲ್, ಮಾನವ್ ಕೃಷ್ಣ, ಅಭಿಪ್ರಯ್ ಬಿಸ್ವಾಸ್, ರೋಹಿತ್ ಯಾದವ್, ಇಶಾನ್ ಓಂ, ಅಯಾನ್ ಅಕ್ರಮ್, ಪ್ರಣವ್ ರಾಗವೇಂದ್ರ, ಪ್ರಿಯಾಂಶು ಸಿಂಗ್, ಮೋಹಿತ್ ಉಲ್ವಾ, ಆರ್ಯನ್ ಯಾದವ್.