ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗೋಲ್ಡನ್‌ ಡಕ್‌ ಮೂಲಕ ರೋಹಿತ್‌, ಸ್ಯಾಮ್ಸನ್‌ರ ಅನಗತ್ಯ ದಾಖಲೆ ಮುರಿದ ಅಭಿಷೇಕ್‌

Abhishek Sharma golden duck: ಪದಾರ್ಪಣ ಪಂದ್ಯವಾಡಿದ ಪ್ರಫುಲ್ ಹಿಂಗೆ ಅವರ ಪ್ರಚಂಡ ಬೌಲಿಂಗ್‌ಗೆ ರಾಜಸ್ಥಾನ ತಂಡವು ಮೊದಲ ಓವರ್‌ನಲ್ಲೇ ವೈಭವ್ ಸೂರ್ಯವಂಶಿ(0), ಧ್ರುವ ಜುರೆಲ್(0)ಹಾಗೂ ಪ್ರಿಟೋರಿಯಸ್(0)ವಿಕೆಟ್‌ಗಳನ್ನು ಕಳೆದುಕೊಂಡಿತು. ಅಮೋಘ ಬೌಲಿಂಗ್‌ ನಡೆಸಿದ ಹಿಂಗೆ 4 ವಿಕೆಟ್‌ ಕಿತ್ತು ಮಿಂಚಿದರು.

abhishek sharma srh

ಹೈದರಾಬಾದ್‌, ಎ.14: ರಾಜಸ್ಥಾನ್‌ ರಾಯಲ್ಸ್(SRH-RR) ವಿರುದ್ಧದ ಪಂದ್ಯದಲ್ಲಿ ಗೋಲ್ಡನ್‌ ಡಕ್‌(Abhishek Sharma golden duck) ಆದ ಸನ್‌ರೈಸರ್ಸ್ ಹೈದರಾಬಾದ್ ತಂಡ ಸ್ಟಾರ್‌ ಆರಂಭಿಕ ಬ್ಯಾಟರ್‌ ಅಭಿಷೇಕ್ ಶರ್ಮಾ ಅವರು ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಶೂನ್ಯ ಸಂಪಾದನೆಯ ಮೂಲಕ ರೋಹಿತ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದಿದ್ದಾರೆ. ಈ ವರ್ಷ ಅಭಿಷೇಕ್ ಅವರ ಟಿ20 ಕ್ರಿಕೆಟ್‌ನಲ್ಲಿ ಇದು ಏಳನೇ ಡಕ್ ಆಗಿದ್ದು, ಒಂದೇ ವರ್ಷದಲ್ಲಿ ಭಾರತೀಯರೊಬ್ಬರು ಗಳಿಸಿದ ಅತಿ ಹೆಚ್ಚು ಡಕ್ ಆಗಿದೆ. ರೋಹಿತ್ ಮತ್ತು ಸ್ಯಾಮ್ಸನ್ ಜಂಟಿ ಆರು ಡಕ್‌ ಹೊಂದಿದ್ದಾರೆ.

ಒಂದು ವರ್ಷದಲ್ಲಿ ಟಿ20ಗಳಲ್ಲಿ ಭಾರತೀಯ ಆಟಗಾರನೊಬ್ಬ ಅತಿ ಹೆಚ್ಚು ಬಾರಿ ಡಕ್ ಔಟ್

ಅಭಿಷೇಕ್ ಶರ್ಮಾ: 2026 ರಲ್ಲಿ 7 ಬಾರಿ ಡಕ್ ಔಟ್

ರೋಹಿತ್ ಶರ್ಮಾ: 2018 ರಲ್ಲಿ 6 ಬಾರಿ ಡಕ್ ಔಟ್

ಸಂಜು ಸ್ಯಾಮ್ಸನ್: 2024 ರಲ್ಲಿ 6 ಬಾರಿ ಡಕ್ ಔಟ್

2013 ರಲ್ಲಿ ಗುರುಕೀರತ್ ಸಿಂಗ್ ಮಾನ್

ಪಿಯೂಷ್ ಚಾವ್ಲಾ: 2009 ರಲ್ಲಿ 4 ಬಾರಿ ಡಕ್ ಔಟ್

ರಾಜೀವ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಹೈದರಾಬಾದ್, ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 216 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ರಾಜಸ್ಥಾನ ತಂಡವು ಮೊದಲ ಓವರ್‌ನಲ್ಲೇ ಕುಸಿತ ಕಂಡಿತು. ಇನ್ನೇನು 10 ರನ್‌ಗೆ ಆಲೌಟ್‌ ಆಗಬಹುದು ಎಂಬ ಸ್ಥಿತಿಗೆ ತಲುಪಿತು. ಆದರೆ ರವೀಂದ್ರ ಜಡೇಜಾ(45) ಮತ್ತು ಡೊನೊವನ್ ಫೆರೀರಾ(69) ಅವರ ಸಣ್ಣ ಹೋರಾಟದ ನೆರವಿನಿಂದ 19 ಓವರ್‌ಗಳಲ್ಲಿ 159 ರನ್ ಗಳಿಸಿ ಆಲೌಟಾಯಿತು.

ಐಪಿಎಲ್‌ ಪದಾರ್ಪಣೆ ಪಂದ್ಯದಲ್ಲಿಯೇ 4 ವಿಕೆಟ್‌ ಕಿತ್ತು ರಾಜಸ್ಥಾನ್‌ ರಾಯಲ್ಸ್‌ಗೆ ನಿದ್ರೆ ಕೆಡಿಸಿದ ಪ್ರಫುಲ್‌ ಹಿಂಗೆ ಯಾರು?

ಪದಾರ್ಪಣ ಪಂದ್ಯವಾಡಿದ ಪ್ರಫುಲ್ ಹಿಂಗೆ ಅವರ ಪ್ರಚಂಡ ಬೌಲಿಂಗ್‌ಗೆ ರಾಜಸ್ಥಾನ ತಂಡವು ಮೊದಲ ಓವರ್‌ನಲ್ಲೇ ವೈಭವ್ ಸೂರ್ಯವಂಶಿ(0), ಧ್ರುವ ಜುರೆಲ್(0)ಹಾಗೂ ಪ್ರಿಟೋರಿಯಸ್(0)ವಿಕೆಟ್‌ಗಳನ್ನು ಕಳೆದುಕೊಂಡಿತು. ಅಮೋಘ ಬೌಲಿಂಗ್‌ ನಡೆಸಿದ ಹಿಂಗೆ 4 ವಿಕೆಟ್‌ ಕಿತ್ತು ಮಿಂಚಿದರು.