ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಾರ್ವಕಾಲಿಕ ಸಿಕ್ಸರ್‌ ದಾಖಲೆ ಮುರಿದ ಅಭಿಷೇಕ್ ಶರ್ಮಾ

India vs West Indies 4th T20I: ಕಠಿಣ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಸಂಜು ಸ್ಯಾಮ್ಸನ್​ ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್​ ನಡೆಸಿದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾರ್‌ಗಳ ವೈಫಲ್ಯದಿಂದ ಅಂತಿಮವಾಗಿ ಟೀಮ್​ ಇಂಡಿಯಾ 19.3 ಓವರ್‌ಗಳಲ್ಲಿ 223 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.

Abhishek Sharma

ಹೈದರಾಬಾದ್‌, ಅ.15: ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ಬುಧವಾರ ಇಲ್ಲಿ ನಡೆದಿದ್ದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡ 24 ರನ್‌ ಅಂತರದ ಸೋಲು ಕಂಡಿತ್ತು. ಸೋಲಿನ ಹೊರತಾಗಿಯೂ ಟೀಮ್‌ ಇಂಡಿಯಾದ ಆರಂಭಿಕ ಬ್ಯಾಟರ್‌ ಅಭಿಷೇಕ್‌ ಶರ್ಮ ದಾಖಲೆಯೊಂದನ್ನು ನಿರ್ಮಿಸಿದರು. ಪೂರ್ಣ ಸದಸ್ಯ ರಾಷ್ಟ್ರವೊಂದರ ಪರವಾಗಿ, ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು T20I ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು.

2026ನೇ ಸಾಲಿನಲ್ಲಿ ತಮ್ಮ 69ನೇ ಸಿಕ್ಸರ್ ದಾಖಲಿಸಿದರು. ಇದರೊಂದಿಗೆ ಅವರು, 2022ರಲ್ಲಿ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ನಿರ್ಮಿಸಿದ್ದ 68 ಸಿಕ್ಸರ್‌ಗಳ ದಾಖಲೆಯನ್ನು ಹಿಂದಿಕ್ಕಿದರು.

ಕ್ಯಾಲೆಂಡರ್‌ ವರ್ಷದಲ್ಲಿ ಅತ್ಯಧಿಕ ಸಿಕ್ಸರ್‌

ಅಭಿಷೇಕ್ ಶರ್ಮಾ-69*(2026)

ಸೂರ್ಯಕುಮಾರ್ ಯಾದವ್- 68 (2022)

ಅಭಿಷೇಕ್ ಶರ್ಮಾ-54 (2025)

ಇಶಾನ್ ಕಿಶನ್- 52(2026)

ಮೊಹಮ್ಮದ್ ರಿಜ್ವಾನ್- 42(2021)

ಮಾರ್ಟಿನ್ ಗಪ್ಟಿಲ್- 41 (2021)

IND vs WI: ಶೇಯ್‌ ಹೋಪ್‌ ಸ್ಪೋಟಕ ಶತಕಕ್ಕೆ ಬೆದರಿದ ಭಾರತ, ವೆಸ್ಟ್‌ ಇಂಡೀಸ್‌ಗೆ ಭರ್ಜರಿ ಜಯ!

ಪಂದ್ಯದ ಬಗ್ಗೆ ಹೇಳುವುದಾದದರೆ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಆರಂಭದಿಂದಲೇ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿತು. ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಶಾಯ್​ ಹೋಪ್ ಕೇವಲ 50 ಎಸೆತಗಳಲ್ಲಿ ಅಜೇಯ 102 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಪ್ರಮುಖ ಕಾರಣರಾದರು. ಇವರ ಈ ಬಿರುಸಿನ ಇನ್ನಿಂಗ್ಸ್‌ನಲ್ಲಿ 4 ಭರ್ಜರಿ ಬೌಂಡರಿಗಳು ಹಾಗೂ 9 ಆಕರ್ಷಕ ಸಿಕ್ಸರ್‌ಗಳು ಸೇರಿದ್ದವು.

ಶೆರ್ಫೇನ್ ರುದರ್ಫೋರ್ಡ್ ಅಜೇಯ 49 ರನ್ (26 ಎಸೆತ) ಹಾಗೂ ಶಿಮ್ರಾನ್ ಹೆಟ್ಮೆಯರ್ ಕೇವಲ 12 ಎಸೆತಗಳಲ್ಲಿ 33 ರನ್ ಸಿಡಿಸುವ ಮೂಲಕ ರನ್ ಗತಿಗೆ ವೇಗ ನೀಡಿದರು. ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡವು ನಿಗದಿತ ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ ಬೃಹತ್ 247 ರನ್ ಕಲೆಹಾಕಿತು.

ಕಠಿಣ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಸಂಜು ಸ್ಯಾಮ್ಸನ್​ ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್​ ನಡೆಸಿದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾರ್‌ಗಳ ವೈಫಲ್ಯದಿಂದ ಅಂತಿಮವಾಗಿ ಟೀಮ್​ ಇಂಡಿಯಾ 19.3 ಓವರ್‌ಗಳಲ್ಲಿ 223 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಂಡೀಸ್ ಪರ ಮಾರಕ ದಾಳಿ ಸಂಘಟಿಸಿದ ಬೌಲರ್ ಕೀಮೋ ಪಾಲ್ 41 ರನ್ ನೀಡಿ ಪ್ರಮುಖ 5 ವಿಕೆಟ್​​ಗಳನ್ನು ಕಬಳಿಸುವ