ವೆಲ್ಲಿಂಗ್ಟನ್, ಅ.28: ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ, ಭಾರತದ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದ ಅಭಿಷೇಕ್ ಶರ್ಮಾ ಅವರು ದಿಗ್ಗಜ ವಿರಾಟ್ ಕೊಹ್ಲಿಯ ದಾಖಲೆಯೊಂದನ್ನು ಮುರಿದಿದ್ದಾರೆ.
ಅಭಿಷೇಕ್ ಅವರ ಟಿ20 ಅಂತರರಾಷ್ಟ್ರೀಯ (T20I) ಪಂದ್ಯಗಳಲ್ಲಿನ ನಾಲ್ಕನೇ ಶತಕವಾಗಿದ್ದು, ಒಟ್ಟಾರೆ ಟಿ20 ಕ್ರಿಕೆಟ್ನಲ್ಲಿ ಅವರ 11ನೇ ಶತಕವಾಗಿದೆ. ಇದೀಗ, ಕ್ರಿಕೆಟ್ನ 20 ಓವರ್ಗಳ ಮಾದರಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಅವರ ಹೆಸರಿನಲ್ಲಿದೆ.
ಅಭಿಷೇಕ್ ಅವರು ವಿರಾಟ್ ಕೊಹ್ಲಿ ಅವರ ಹಿಂದಿನ ದಾಖಲೆಯನ್ನು ಮುರಿದರು. ಭಾರತೀಯರಲ್ಲಿ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಕೊಹ್ಲಿ, ತಮ್ಮ ಹೆಸರಿನಲ್ಲಿ 10 ಶತಕಗಳನ್ನು ಹೊಂದಿದ್ದಾರೆ. ಅವರು ಭಾರತ ತಂಡಕ್ಕಾಗಿ ಒಂದು ಶತಕ ಮತ್ತು ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಒಂಬತ್ತು ಶತಕಗಳನ್ನು ಗಳಿಸಿದ್ದಾರೆ.
ಅಭಿಷೇಕ್ ಭಾರತಕ್ಕಾಗಿ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನಾಲ್ಕು ಶತಕಗಳನ್ನು, ಸನ್ರೈಸರ್ಸ್ ಹೈದರಾಬಾದ್ ಪರ ಐಪಿಎಲ್ನಲ್ಲಿ ಎರಡು ಶತಕಗಳನ್ನು ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್ ಪರ ಐದು ಶತಕಗಳನ್ನು ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ಕೆ.ಎಲ್ ರಾಹುಲ್ 8 ಶತಕ ಸಿಡಿಸಿದ್ದಾರೆ.
ಮೂರನೇ ಟಿ20ಐ ಗೆದ್ದ ಬೆನ್ನಲ್ಲೆ ಭಾರತ ತಂಡಕ್ಕೆ ಎರಡು ಪದಗಳ ಸಂದೇಶ ರವಾನಿಸಿದ ಗೌತಮ್ ಗಂಭೀರ್!
ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆಯು ಕ್ರಿಸ್ ಗೇಲ್ ಅವರ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್ನ ಈ ದಿಗ್ಗಜ ಆಟಗಾರನು ತನ್ನ ಎರಡು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 463 ಟಿ20 ಪಂದ್ಯಗಳನ್ನು ಆಡಿ, 22 ಶತಕಗಳನ್ನು ಗಳಿಸಿದ್ದಾರೆ.
ಸರಣಿ ಗೆದ್ದ ಭಾರತ
ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತವು ಆರು ವಿಕೆಟ್ಗಳಿಂದ ಜಯಗಳಿಸಿತು. ಅಭಿಷೇಕ್ ಅವರು ವೈಭವ್ ಸೂರ್ಯವಂಶಿ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿ, ಮೊದಲ ವಿಕೆಟ್ಗೆ 7.1 ಓವರ್ಗಳಲ್ಲಿ 133 ರನ್ಗಳನ್ನು ಕಲೆಹಾಕಿದರು. ಈ ಜೋಡಿಯು ಭಾರತವು ಕೇವಲ 5 ಓವರ್ಗಳಲ್ಲಿ 100 ರನ್ಗಳ ಗಡಿಯನ್ನು ತಲುಪಲು ನೆರವಾಯಿತು. ಇದೀಗ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ವೇಗವಾಗಿ 100 ರನ್ಗಳನ್ನು ಪೂರೈಸಿದ ತಂಡ ಎಂಬ ದಾಖಲೆ ಭಾರತದ ಹೆಸರಿನಲ್ಲಿದೆ; ಈ ಮೂಲಕ ಭಾರತವು ರೊಮೇನಿಯಾ ಹೊಂದಿದ್ದ ಹಿಂದಿನ ದಾಖಲೆಯನ್ನು ಮುರಿದಿದೆ. 2021ರಲ್ಲಿ ಸೋಫಿಯಾದಲ್ಲಿ ಸರ್ಬಿಯಾ ವಿರುದ್ಧ ನಡೆದ ಪಂದ್ಯದಲ್ಲಿ, ರೊಮೇನಿಯಾ ತಂಡವು 5.2 ಓವರ್ಗಳಲ್ಲಿ 100 ರನ್ಗಳ ಗಡಿಯನ್ನು ತಲುಪಿತ್ತು.
ಇನ್ನಿಂಗ್ಸ್ ಆರಂಭಿಸಿದರು. 199 ರನ್ಗಳ ಗುರಿಯನ್ನು ಬೆನ್ನಟ್ಟುವಾಗ, ಅವರು ಕೇವಲ 38 ಎಸೆತಗಳಲ್ಲಿ 113 ರನ್ಗಳನ್ನು ಕಲೆಹಾಕಿದರು. ವೆಲ್ಲಿಂಗ್ಟನ್ನ ಹ್ಯಾಗ್ಲಿ ಓವಲ್ನಲ್ಲಿ ನಡೆದ ಈ ಪಂದ್ಯದಲ್ಲಿ, ಶ್ರೇಯಸ್ ಅಯ್ಯರ್ ನೇತೃತ್ವದ ತಂಡಕ್ಕಾಗಿ ಆಡಿದ ಅಭಿಷೇಕ್, ಒಂಬತ್ತು ಬೌಂಡರಿಗಳು ಮತ್ತು 11 ಸಿಕ್ಸರ್ಗಳನ್ನು ಸಿಡಿಸಿದರು.