ಟೋಕಿಯೊ, ಸೆ.22: ಮಂಗಳವಾರ ಸಾನೊದಲ್ಲಿ ಜಪಾನ್ ವಿರುದ್ಧ ನಡೆದ ಏಕೈಕ ಟಿ20 ಅಂತಾರಾಷ್ಟ್ರೀಯ (T20I) ಪಂದ್ಯದಲ್ಲಿ ಭಾರತ 2 ರನ್ ಅಂತರದ ಗೆಲುವು ಸಾಧಿಸಿ ಸರಣಿ ಜಯಿಸಿತು. ಈ ಪಂದ್ಯದಲ್ಲಿ ಶೂನ್ಯ ಸುತ್ತಿದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 17 ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ತಮ್ಮ ಹಿಂದಿನ ಟಿ20 ಪಂದ್ಯದಲ್ಲಿ 30 ಎಸೆತಗಳಲ್ಲಿ ಶತಕ ಸಿಡಿಸಿದ್ದ ಅಮೃತಸರದ 26 ವರ್ಷದ ಎಡಗೈ ಬ್ಯಾಟರ್, ಈ ಪಂದ್ಯದ ಮೊದಲ ಓವರ್‌ನ ಆರನೇ ಎಸೆತದಲ್ಲಿ ಚಾರ್ಲಿ ಹರಾ-ಹಿಂಜೆ ಅವರ ಬೌಲಿಂಗ್‌ನಲ್ಲಿ 'ಗೋಲ್ಡನ್ ಡಕ್'ಗೆ ಬಲಿಯಾಗಿ ಪೆವಿಲಿಯನ್‌ಗೆ ಮರಳಿದರು. ಇದರೊಂದಿಗೆ ಹಾಲಿ ವರ್ಷದಲ್ಲಿ 10ನೇ ಬಾರಿಗೆ ಶೂನ್ಯಕ್ಕೆ ಔಟಾದರು.
ಅಭಿಷೇಕ್ ಅವರಿಗಿಂತ ಮೊದಲು, ವಿಶ್ವದ ಯಾವುದೇ ಆಟಗಾರನು ಒಂದು ಕ್ಯಾಲೆಂಡರ್ ವರ್ಷದಲ್ಲಿ 10 ಬಾರಿ 'ಡಕ್' (ಶೂನ್ಯಕ್ಕೆ) ಔಟ್ ಆಗಿರಲಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಬ್ಯಾಟರ್‌ಗಳ ಪಟ್ಟಿಯಲ್ಲಿ, ಅಭಿಷೇಕ್ ಅವರ ನಂತರದ ಸ್ಥಾನದಲ್ಲಿ ರಶೀದ್ ಖಾನ್ ಇದ್ದಾರೆ. ರಶೀದ್ 2019ರಲ್ಲಿ ಆಡಿದ 56 ಟಿ20 ಪಂದ್ಯಗಳಲ್ಲಿ ಒಂಬತ್ತು ಬಾರಿ ಶೂನ್ಯಕ್ಕೆ ಔಟ್ ಆಗಿದ್ದರು.
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ; ಮಹಿಳಾ ಕ್ರಿಕೆಟ್ ತಂಡದ ಸಾಧನೆ
ಅಭಿಷೇಕ್ 2026ರಲ್ಲಿ ಭಾರತಕ್ಕಾಗಿ 27 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಏಳು ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಅಭಿಷೇಕ್ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ T20I ಸರಣಿಯಲ್ಲಿ ಎರಡು ಡಕ್‌ಗಳನ್ನು ಗಳಿಸಿದರು. ಆ ಬಳಿಕ T20 ವಿಶ್ವಕಪ್‌ನ ಮೊದಲ ಮೂರು ಪಂದ್ಯಗಳಲ್ಲಿ ಅವರು ತಮ್ಮ ಖಾತೆಯನ್ನು ತೆರೆಯಲು ವಿಫಲರಾದರು. ಆರನೇ T20I ಡಕ್ ಜೂನ್ 28 ರಂದು ಬೆಲ್‌ಫಾಸ್ಟ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧ ಎರಡನೇ T20I ಪಂದ್ಯದಲ್ಲಿ ಔಟಾದರು.
ಟಿ20ಗಳಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಡಕ್ ಔಟ್
ಅಭಿಷೇಕ್ ಶರ್ಮಾ-10*
ರಶೀದ್ ಖಾನ್-9
ಶಾದಾಬ್ ಖಾನ್-9
ಹರ್ಷಲ್ ಗಿಬ್ಸ್-8
ಸುನಿಲ್ ನರೈನ್-8
ಅಲೆಕ್ಸ್ ಹೇಲ್ಸ್-8