ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG Test: ಭಾರತದ ನೂತನ ಕಂಡೀಷನಿಂಗ್ ಕೋಚ್ ಆಗಿ ಆಡ್ರಿಯನ್ ಲೆ ರೌಕ್ಸ್ ನೇಮಕ

ಈ ತಿಂಗಳ ಆರಂಭದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಇದು ಭಾರತದ ಮೊದಲ ದ್ವಿಪಕ್ಷೀಯ ಟೆಸ್ಟ್ ಸರಣಿಯಾಗಿದೆ. 2007ರಿಂದ ಭಾರತ, ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಇದೀಗ ನೂತನ ನಾಯಕನಾಗಿರುವ ಶುಭಮನ್‌ ಗಿಲ್‌ ತಮ್ಮ ಮೊದಲ ಸರಣಿಯಲ್ಲೇ ಭಾರತಕ್ಕೆ ಗೆಲುವು ತಂದು ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.

ನವದೆಹಲಿ: ಇಂಗ್ಲೆಂಡ್‌ ಟೆಸ್ಟ್‌(IND vs ENG Test) ಸರಣಿ ಆರಂಭಕ್ಕೂ ಮುನ್ನವೇ ಆಡ್ರಿಯನ್ ಲೆ ರೌಕ್ಸ್(Adrian le Roux ) ಹೊಸ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಆಗಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ನಂತರ ರಾಷ್ಟ್ರೀಯ ತಂಡದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸೋಹಮ್ ದೇಸಾಯಿ(Soham Desai) ಅವರ ಸ್ಥಾನಕ್ಕೆ ಇವರನ್ನು ಆಯ್ಕೆ ಮಾಡಲಾಗಿದೆ.

2000 ರ ದಶಕದ ಆರಂಭದಲ್ಲಿ ಭಾರತ ತಂಡದಲ್ಲಿ ದೈಹಿಕ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದ ಲೆ ರೌಕ್ಸ್, ಪಂಜಾಬ್ ಕಿಂಗ್ಸ್ ತಂಡದೊಂದಿಗೆ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಈ ಬಾರಿಯ ಫೈನಕ್‌ ಪಂದ್ಯದಲ್ಲಿ ಪಂಜಾಬ್‌ ತಂಡೆ ಸೋಲು ಕಂಡ ಕಾರಣ ಅವರು ತಂಡದಿಂದ ಹೊರಬಂದಿದ್ದರು. ಇದೀಗ ಭಾರತ ತಂಡಕ್ಕೆ ಎರಡನೇ ಬಾರಿ ಕೋಚಿಂಗ್‌ ಸಿಬ್ಬಂದಿಯಾಗಿ ನೇಮಕಗೊಂಡಿದ್ದಾರೆ.

‘‘ನಾನು ಭಾರತೀಯ ಕ್ರಿಕೆಟ್ ತಂಡದಲ್ಲಿ ಹೊಸ ಪಾತ್ರಕ್ಕೆ ಹೆಜ್ಜೆ ಹಾಕುತ್ತೇನೆ. ಪ್ರತಿಭಾನ್ವಿತ ಕ್ರಿಕೆಟಿಗರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ" ಎಂದು ಲೆ ರೌಕ್ಸ್ ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಟಿ. ದಿಲೀಪ್ ಅವರನ್ನು ತಂಡದ ಫೀಲ್ಡಿಂಗ್ ಕೋಚ್ ಆಗಿ ಬಿಸಿಸಿಐ ಮರು ನೇಮಕ ಮಾಡಿತ್ತು.

ಹೊಸ ಫೀಲ್ಡಿಂಗ್ ಕೋಚ್ ಆಗಿ ವಿದೇಶಿ ಮಾಜಿ ಕ್ರಿಕೆಟಿಗರನ್ನು ನೇಮಿಸಿಕೊಳ್ಳಲು ಬಿಸಿಸಿಐ ಯೋಜನೆ ರೂಪಿಸಿತ್ತು. ಆದರೆ ಆಡಳಿತ ಮಂಡಳಿಗೆ ಅಗತ್ಯ ಸಮಯದಲ್ಲಿ ಅದು ಸಾಧ್ಯವಾಗದ ಕಾರಣ ಟಿ. ದಿಲೀಪ್ ಅವರನ್ನೇ ಮರು ನೇಮಕ ಮಾಡಿತ್ತು.‌

ಇದನ್ನೂ ಓದಿ Tendulkar-Anderson Trophy: ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ 'ತೆಂಡೂಲ್ಕರ್‌-ಆ್ಯಂಡರ್ಸನ್‌' ಹೆಸರು!