ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಸಿಸಿ ಏಕದಿನ ಅತ್ಯುನ್ನತ ಶ್ರೇಯಾಂಕ ತಲುಪಿದ ಅಫ್ಘಾನಿಸ್ತಾನ

ICC ODI rankings: ಭಾರತವು 114 ರೇಟಿಂಗ್‌ನೊಂದಿಗೆ ಏಕದಿನ (ODI) ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ನಂತರದ ಸ್ಥಾನಗಳಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾಗಳಿವೆ. ಪಾಕಿಸ್ತಾನದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದ ಇಂಗ್ಲೆಂಡ್, ವಿಶ್ವ ಶ್ರೇಯಾಂಕದಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ.

Afghanistan Team

ದುಬೈ, ನ.2: ಸೋಮವಾರ ಬಿಡುಗಡೆಯಾದ ಐಸಿಸಿ ಏಕದಿನ (ODI) ಶ್ರೇಯಾಂಕದಲ್ಲಿ ಅಫ್ಘಾನಿಸ್ತಾನ ತಂಡವು ಆರನೇ ಸ್ಥಾನಕ್ಕೆ ಏರಿದೆ. 2009ರಲ್ಲಿ ಏಕದಿನ ಸ್ಥಾನಮಾನ ಪಡೆದ ನಂತರ, ಆ ತಂಡವು ತಲುಪಿರುವ ಅತ್ಯುನ್ನತ ಸ್ಥಾನ ಇದಾಗಿದೆ.

ಜಿಂಬಾಬ್ವೆಯಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಆತಿಥೇಯ ರಾಷ್ಟ್ರ ಹಾಗೂ ಬಾಂಗ್ಲಾದೇಶವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರ ಪರಿಣಾಮವಾಗಿ ಈ ಏರಿಕೆ ಕಂಡುಬಂದಿದೆ. ಅದಕ್ಕೂ ಮುನ್ನ, ಅಫ್ಘಾನಿಸ್ತಾನ ತಂಡ ಐರ್ಲೆಂಡ್‌ನಲ್ಲಿ 4-0 ಅಂತರದ ಜಯವನ್ನೂ ಸಾಧಿಸಿತ್ತು.

2023ರ ವಿಶ್ವಕಪ್ ಅಫ್ಘಾನಿಸ್ತಾನಕ್ಕೆ ಸ್ಮರಣೀಯವಾಗಿತ್ತು. ಲೀಗ್ ಹಂತದಲ್ಲಿ ಅವರು ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳಿಗೆ ಸೋಲುಣಿಸಿದ್ದರು. ಆಸ್ಟ್ರೇಲಿಯಾವನ್ನು ಮಣಿಸುವ ಸನಿಹಕ್ಕೂ ಬಂದಿದ್ದರು, ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಅಜೇಯ ದ್ವಿಶತಕ ಸಿಡಿಸಿ, ಅಫ್ಘಾನ್ ತಂಡದ ಕೈಯಿಂದ ಗೆಲುವನ್ನು ಕಸಿದುಕೊಂಡರು.

ಭಾರತ-ನ್ಯೂಜಿಲೆಂಡ್‌ ಏಕದಿನ ಸರಣಿ ವೇಳಾಪಟ್ಟಿ, ಪ್ರಸಾರ ಮಾಹಿತಿ ಇಲ್ಲಿದೆ

ಭಾರತವು 114 ರೇಟಿಂಗ್‌ನೊಂದಿಗೆ ಏಕದಿನ (ODI) ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ನಂತರದ ಸ್ಥಾನಗಳಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾಗಳಿವೆ. ಪಾಕಿಸ್ತಾನದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದ ಇಂಗ್ಲೆಂಡ್, ವಿಶ್ವ ಶ್ರೇಯಾಂಕದಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ.

ಮೊದಲ ಎರಡು ಸ್ಥಾನಗಳಲ್ಲಿರುವ ಭಾರತ ಮತ್ತು ನ್ಯೂಜಿಲೆಂಡ್‌ ಮಧ್ಯೆ 5 ಪಂದ್ಯಗಳ ಸರಣಿ ನಡೆಯಲಿದ್ದು ಈ ಸರಣಿಯ ಫಲಿತಾಂಶದ ಬಳಿಕ ಅಗ್ರ ಎರಡು ಸ್ಥಾನಗಳ ಬದಲಾವಣೆಯಾಗಬಹುದು. ಒಂದೊಮ್ಮೆ ಭಾರತ ಸರಣಿ ಸೋತರೆ ಆಗ ತನ್ನ ಅಗ್ರಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಗೆದ್ದರೆ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಬುಧವಾರದಂದು ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯಲಿದೆ. ನಂತರದ ಎರಡು ಪಂದ್ಯಗಳು ಕ್ರಮವಾಗಿ ನವೆಂಬರ್ 7 ಮತ್ತು 10 ರಂದು ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂ ಹಾಗೂ ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ನಡೆಯಲಿವೆ. ಕೊನೆಯ ಎರಡು ಪಂದ್ಯಗಳು ಕ್ರಮವಾಗಿ ನವೆಂಬರ್ 13 ಮತ್ತು 15 ರಂದು ಮೌಂಟ್ ಮೌಂಗನುಯಿಯ ಬೇ ಓವಲ್‌ನಲ್ಲಿ ನಡೆಯಲಿವೆ.

ಟಾಪ್‌-5 ತಂಡಗಳು

ಭಾರತ-115 ರೇಟಿಂಗ್‌ ಅಂಕ

ನ್ಯೂಜಿಲೆಂಡ್‌-109 ರೇಟಿಂಗ್‌ ಅಂಕ

ದಕ್ಷಿಣ ಆಫ್ರಿಕಾ-104 ರೇಟಿಂಗ್‌ ಅಂಕ

ಪಾಕಿಸ್ತಾನ-104 ರೇಟಿಂಗ್‌ ಅಂಕ

ಆಸ್ಟ್ರೇಲಿಯಾ- 102 ರೇಟಿಂಗ್‌ ಅಂಕ