ಚೆನ್ನೈ, ಮೇ 19: ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026(IPL 2026)ರ ತವರಿನ ಅಂತಿಮ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್(CSK vs SRH) ವಿರುದ್ಧ ಸಿಎಸ್‌ಕೆ ಸೋಲಿಗೆ ಬೌಲಿಂಗ್ ಘಟಕವೇ ಪ್ರಮುಖ ಕಾರಣ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್(Ruturaj Gaikwad) ಹೇಳಿದರು.
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ, ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಸಂಜು ಸ್ಯಾಮ್ಸನ್, ಕಾರ್ತಿಕ್ ಶರ್ಮಾ ಮತ್ತು ಉರ್ವಿಲ್ ಪಟೇಲ್ ಎಲ್ಲರೂ 160 ಕ್ಕೂ ಹೆಚ್ಚು ಸ್ಟ್ರೈಕ್ ದರದಲ್ಲಿ ಬ್ಯಾಟಿಂಗ್ ದಾಳಿ ನಡೆಸಿ ತಂಡವನ್ನು 20 ಓವರ್‌ಗಳಲ್ಲಿ 180/7 ಕ್ಕೆ ಸೀಮಿತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಂದ್ಯದ ಬಳಿಕ ಮಾತನಾಡಿದ ಗಾಯಕ್ವಾಡ್, "ವಾಸ್ತವವಾಗಿ ಏನೂ ಅಲ್ಲ ಅಂತ ನನಗನ್ನಿಸುತ್ತೆ, ವಿಕೆಟ್ ಪಡೆದ ತಕ್ಷಣ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದು ಅಷ್ಟೇ. ಎದುರಾಳಿ ತಂಡದ ಮೇಲೆ ಒತ್ತಡ ಹೇರುವುದು ನಮ್ಮ ಉದ್ದೇಶ. ಆದರೆ ನಮ್ಮ ತಂಡದ ಬೌಲರ್‌ಗಳು ಇದನ್ನು ಸಾಧಿಸಲು ವಿಫಲರಾದರು ಎಂದು ನನಗನ್ನಿಸುತ್ತದೆ" ಎಂದರು.
ಅವರ ಈ ಹೇಳಿಕೆ ಸಿಎಸ್‌ಕೆ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ, ಹಾಲಿ ಆವೃತ್ತಿಯಲ್ಲಿ ಗಾಯಕ್ವಾಡ್ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಅವರ ಸಂದರ್ಶನದ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಹಲವಾರು ಬೆಂಬಲಿಗರು ಸಾಮಾಜಿಕ ಮಾಧ್ಯಮದಲ್ಲಿ ಗಾಯಕ್ವಾಡ್ ಅವರನ್ನು ಟೀಕಿಸಿದರು.
“ಪಂದ್ಯದ ನಂತರದ ಸಂದರ್ಶನದಲ್ಲಿ, ರವಿಶಾಸ್ತ್ರಿ ಅವರು ಋತುರಾಜ್ ಗಾಯಕ್ವಾಡ್ ತುಂಬಾ ನಿಧಾನವಾಗಿ ಆಡುತ್ತಿದ್ದಾರೆ ಮತ್ತು ಅವರ ಸ್ಟ್ರೈಕ್ ರೇಟ್ ಅನ್ನು ಹೆಚ್ಚಿಸಬೇಕಾಗಿದೆ ಎಂದರು. ಆದರೆ ಗಾಯಕ್ವಾಡ್ ಇದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ” ಎಂದು ಒಬ್ಬ ಅಭಿಮಾನಿ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಐಪಿಎಲ್ 2026 ಪ್ಲೇ-ಆಫ್ ಅರ್ಹತಾ ಸನ್ನಿವೇಶಗಳು; ಒಂದು ಸ್ಥಾನಕ್ಕೆ ಐದು ತಂಡಗಳ ಪೈಪೋಟಿ
ಪಂದ್ಯದಲ್ಲಿ ಟಾಸ್ ಗೆದ್ದ ಋತುರಾಜ್ ಗಾಯಕವಾಡ್ ಬ್ಯಾಟಿಂಗ್ ಆಯ್ದುಕೊಂಡರು. ಡೆವಾಲ್ಡ್ ಬ್ರೆವಿಸ್ (44) ಮತ್ತು ಕಾರ್ತಿಕ್ ಶರ್ಮಾ (32) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಆತಿಥೇಯ ತಂಡವು 7 ವಿಕೆಟ್‌ಗೆ 180 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ತಂಡವು ಇಶಾನ್ (70) ಮತ್ತು ಕ್ಲಾಸೆನ್ ಅವರ ಬಿರುಸಿನ ಆಟದ ಬಲದಿಂದ ಆರು ಎಸೆತಗಳು ಬಾಕಿ ಇರುವಂತೆ 5 ವಿಕೆಟ್‌ಗೆ 181 ರನ್ ಗಳಿಸಿ ಸಂಭ್ರಮಿಸಿತು. ಜತೆಗೆ ಪ್ಲೇ ಆಫ್‌ಗೂ ಪ್ರವೇಶಿಸಿತು.
ಸಂಕ್ಷಿಪ್ತ ಸ್ಕೋರ್
ಚೆನ್ನೈ ಸೂಪರ್ ಕಿಂಗ್ಸ್: 20 ಓವರುಗಳಲ್ಲಿ 7ಕ್ಕೆ 180 (ಸಂಜು ಸ್ಯಾಮ್ಸನ್ 27, ಕಾರ್ತಿಕ್ ಶರ್ಮಾ 32, ಡೆವಾಲ್ಡ್ ಬ್ರೆವಿಸ್ 44, ಶಿವಂ ದುಬೆ 26; ಪ್ಯಾಟ್ ಕಮಿನ್ಸ್ 28ಕ್ಕೆ3, ಸಾಕಿಬ್ ಹುಸೇನ್ 34ಕ್ಕೆ2). ಸನ್‌ರೈಸರ್ಸ್ ಹೈದರಾಬಾದ್: ಓವರ್‌ಗಳಲ್ಲಿ 5 ವಿಕೆಟ್‌ಗೆ (ಅಭಿಷೇಕ್ ಶರ್ಮಾ 26, ಇಶಾನ್ ಕಿಶನ್ 70, ಹೆನ್ರಿಕ್ ಕ್ಲಾಸೆನ್ 47; ಮುಕೇಶ್ ಚೌಧರಿ 36ಕ್ಕೆ2).