ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cristiano Ronaldo: ರೊನಾಲ್ಡೊ ಭಾರತ ಭೇಟಿ ರದ್ದಿಗೆ ನಿಜವಾದ ಕಾರಣವೇನು?

ರೊನಾಲ್ಡೊ ಭಾರತಕ್ಕೆ ಪ್ರಯಾಣಿಸದ ಬಗ್ಗೆ ಅಲ್-ನಸ್ರ್ ಕ್ಲಬ್ ಸ್ಪಷ್ಟನೆ ನೀಡಿದೆ. ಮು೦ದಿನ ವರ್ಷ ನಡೆಯಲಿರುವ ಫಿಫಾ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ 40 ವರ್ಷದ ರೊನಾಲ್ಡೊ ಫಿಟ್ನೆಸ್‌ಗೆ ಹೆಚ್ಚಿನ ಒತ್ತು ಕೊಡುತ್ತಿದ್ದು ಕಾರ್ಯದೊತ್ತಡ ತಗ್ಗಿಸುವ ನಿಟ್ಟಿನಲ್ಲಿ ಕೆಲ ಪಂದ್ಯಗಳಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಅವರು ಗೋವಾ ವಿರುದ್ಧದ ಪಂದ್ಯದಿಂದಲೂ ಹೊರಗುಳಿದರು ಎಂದು ತಿಳಿಸಿದೆ.

ಪಣಜಿ: ಎಎಫ್‌ಸಿ ಚಾಂಪಿಯನ್ಸ್ ಲೀಗ್ -2 ಫುಟ್ಬಾಲ್ ಟೂರ್ನಿಯಲ್ಲಿ ಮಂಗಳವಾರ ಎಫ್‌ಸಿ ಗೋವಾ(FC Goa) ಫುಟ್ಬಾಲ್ ತಂಡದ ವಿರುದ್ದ ಸೌದಿ ಅರೇಬಿಯಾದ ಅಲ್-ನಸ್ರ್ ಕ್ಲಬ್ ಪರ ಆಡಲಿದೆ. ಈ ಪಂದ್ಯದಲ್ಲಿ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ(Cristiano Ronaldo) ಕೂಡ ಆಡಬೇಕಿತ್ತು. ಆದರೆ ಸೋಮವಾರ ತಡರಾತ್ರಿ ಭಾರತಕ್ಕೆ ಬಂದ ಅಲ್ ನಸ್ರ್(Al Nassr) ತಂಡದಲ್ಲಿ ರೊನಾಲ್ಡ್ ಇರಲಿಲ್ಲ. ಇದರಿಂದ ರೊನಾಲ್ಡೊ ಅವರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬೇಕು ಎಂದು ಕಾತರದಿಂದ ಕಾಯುತ್ತಿದ್ದ ಭಾರತದ ಫುಟ್ಬಾಲ್ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ.

ಅವರು ಭಾರತಕ್ಕೆ ಪ್ರಯಾಣಿಸದ ಬಗ್ಗೆ ಅಲ್-ನಸ್ರ್ ಕ್ಲಬ್ ಸ್ಪಷ್ಟನೆ ನೀಡಿದೆ. ಮು೦ದಿನ ವರ್ಷ ನಡೆಯಲಿರುವ ಫಿಫಾ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ 40 ವರ್ಷದ ರೊನಾಲ್ಡೊ ಫಿಟ್ನೆಸ್‌ಗೆ ಹೆಚ್ಚಿನ ಒತ್ತು ಕೊಡುತ್ತಿದ್ದು ಕಾರ್ಯದೊತ್ತಡ ತಗ್ಗಿಸುವ ನಿಟ್ಟಿನಲ್ಲಿ ಕೆಲ ಪಂದ್ಯಗಳಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಅವರು ಗೋವಾ ವಿರುದ್ಧದ ಪಂದ್ಯದಿಂದಲೂ ಹೊರಗುಳಿದರು ಎಂದು ತಿಳಿಸಿದೆ.

ಇದನ್ನೂ ಓದಿ Cristiano Ronaldo: ಫುಟ್ಬಾಲ್‌ನ ಮೊದಲ ಬಿಲಿಯನೇರ್ ಆಗಿ ಹೊರ ಹೊಮ್ಮಿದ ರೊನಾಲ್ಡೊ

ಒಪ್ಪಂದದ ಪ್ರಕಾರ ಪಂದ್ಯ ಆಯ್ಕೆ ಮಾಡಿ ಕೊಳ್ಳುವ ಅಧಿಕಾರವೂ ರೊನಾಲ್ಡೊ ಅವರಿಗಿರುವ ಕಾರಣ, ಅವರು ಗೋವಾ ವಿರುದ್ಧ ಪಂದ್ಯ ಆಡಲು ಒಪ್ಪಿಕೊಂಡಿಲ್ಲ. ಅಲ್ಲದೆ ಸೌದಿ ಕ್ಲಬ್ ಈಗಾಗಲೇ ರೊನಾಲ್ಡೊ ಇಲ್ಲದೆಯೇ AFC ಚಾಂಪಿಯನ್ಸ್ ಲೀಗ್ 2 ಪಂದ್ಯಗಳಲ್ಲಿ ಎರಡೂ ಪಂದ್ಯಗಳನ್ನು ಗೆದ್ದಿದೆ ಮತ್ತು ನಾಕೌಟ್ ಸುತ್ತಿಗೆ ಮುನ್ನಡೆಯಲು ಉತ್ತಮ ಸ್ಥಾನದಲ್ಲಿದೆ. ಹೀಗಾಗಿ ಗೋವಾ ವಿರುದ್ಧದ ಪಂಯ ಕೇವಲ ಔಪಚಾರಿಕ ಪಂದ್ಯವೆನಿಸಿದೆ.