ಅಹಮದಾಬಾದ್, ಜೂ 1: ಭಾನುವಾರ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್ ಅಂತರದ ಗೆಲುವು ಸಾಧಿಸಿ ಎರಡನೇ ಟ್ರೋಫಿಗೆ ಮುತ್ತಿಕ್ಕಿತು. ಪ್ರಶಸ್ತಿ ವಿಜಯವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ(Virat Kohli's Viral Dance) ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ನೃತ್ಯ ಮಾಡುವ ವಿಡಿಯೊವೊಂದನ್ನು ಫ್ರಾಂಚೈಸಿ ಹಂಚಿಕೊಂಡಿದೆ.
ಈ ವಿಡಿಯೊದಲ್ಲಿ ಕೊಹ್ಲಿಯ ಜಬರ್ದಸ್ ಡ್ಯಾನ್ಸ್ ಕಂಡು ಅಭಿಮಾನಿಗಳು ದಂಗಾಗಿದ್ದಾರೆ. ಸದ್ಯ ಕೊಹ್ಲಿಯ ಡ್ಯಾನ್ಸಿಂಗ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿರಾಟ್ ಕೊಹ್ಲಿ ಜೊತೆ ದಿನೇಶ್ ಕಾರ್ತಿಕ್ ಸೇರಿದಂತೆ ಆರ್‌ಸಿಬಿ ತಂಡದ ಇತರ ಆಟಗಾರರು ಕೂಡ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದ್ದಾರೆ. ಕೊಹ್ಲಿಯ ಕೆಲವು ಸ್ಟೆಪ್‌ಗಳನ್ನು ಕಂಡು ಅನುಷ್ಕಾ ಬೆರಗಾದರು. ಇದೆಲ್ಲವನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
2026ರ ಐಪಿಎಲ್ ಗೆಲುವನ್ನು ಕಳೆದ ವರ್ಷದ ಕಾಲ್ತುಳಿತದ ಸಂತ್ರಸ್ತರಿಗೆ ಅರ್ಪಿಸಿದ ಪಾಟಿದಾರ್
ಫೈನಲ್ ಪಂದ್ಯದಲ್ಲಿ ಕೊಹ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. ಅಜೇಯ 75 ರನ್ ಗಳಿಸಿ ಪಂದ್ಯವನ್ನು ಗೆಲುವಿನ ದಡ ಸೇರಿಸಿದರು. 25 ಎಸೆತಗಳಿಂದ ಅರ್ಧಶತ ಪೂರೈಸಿದರು. ಕೊಹ್ಲಿಗೆ 37 ವರ್ಷ ವಯಸ್ಸಾಗಿದ್ದರೂ ಕೂಡ ತಮ್ಮ ಆಟದಲ್ಲಿ ಬದಲಾವಣೆಯಾಗಿಲ್ಲ. ಈ ವರ್ಷ ಅವರು 1 ಶತಕ ಸೇರಿ 600ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಜೊತೆಗೆ ಹಲವು ದಾಖಲೆಗಳನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಸತತವಾಗಿ 4, ಒಟ್ಟಾರೆ 6 ಐಪಿಎಲ್ ಆವೃತ್ತಿಗಳಲ್ಲಿ ತಲಾ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ದಾಲೆಯನ್ನು ಅವರು ತಮ್ಮ ಹೆಸರಿಗೆ ಬರೆದಿದ್ದಾರೆ. ಕೆ.ಎಲ್.ರಾಹುಲ್ ಸತತವಾಗಿ 3 ಆವೃತ್ತಿಗಳಲ್ಲಿ 600+ ರನ್ ಸಾಧನೆ ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಐಪಿಎಲ್‌ನಲ್ಲಿ 800 ಫೋರ್‌ಗಳ ಮೈಲುಗಲ್ಲು ಸಾಧಿಸಿದ ಮೊದಲ ಆಟಗಾರ. ಮಾತ್ರವಲ್ಲದೆ ಕೊಹ್ಲಿ ಐಪಿಎಲ್‌ನಲ್ಲಿ 9000 ರನ್ ಪೂರ್ಣಗೊಳಿಸಿದ ದಾಖಲೆಯನ್ನೂ ಹೊಂದಿದ್ದಾರೆ.
IPL 2026 Final: ಚಾಂಪಿಯನ್ ಆರ್‌ಸಿಬಿಗೆ ಅಭಿನಂದನೆ ಸಲ್ಲಿಸಿದ ಬದ್ಧ ಎದುರಾಳಿ ಸಿಎಸ್‌ಕೆ
ಕಳೆದ ವರ್ಷ, ಆರ್‌ಸಿಬಿಯ ಬಹುನಿರೀಕ್ಷಿತ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಆಚರಿಸಲು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಾವಿರಾರು ಜನರು ಜಮಾಯಿಸಿದಾಗ ಉಂಟಾದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡರು. ಐತಿಹಾಸಿಕವಾಗಿ ಸಂಭ್ರಮಿಸಲು ಉದ್ದೇಶಿಸಲಾಗಿದ್ದ ಈ ಕಾರ್ಯಕ್ರಮ ಇತಿಹಾಸದ ಕರಾಳ ದಿನಗಳಲ್ಲಿ ಒಂದಾಗಿ ಮಾರ್ಪಟ್ಟಿತ್ತು. ಆದರೆ ಬಾರಿ ಆರ್‌ಸಿಬಿ ಯಾವುದೇ ಸಂಭ್ರಮಾಚರಣೆ ನೆಡೆಸಲಿಲ್ಲ. ಅಭಿಮಾನಿಗಳಿಗೂ ಮನೆಯಿಂದಲೇ ಸಂಭ್ರಮಿಸುವಂತೆ ಮನವಿ ಮಾಡಿತು. ಆದರೂ ಕೆಲವೆಡೆ ಅಭಿಮಾನಿಗಳು ಪುಂಡಾಟ ನಡೆಸಿದ ಘಟನೆಗಳು ವರದಿಯಾಗಿದೆ.